(ಭೌ) ತಟಸ್ಥ ಪರಮಾಣು ಅಥವಾ ಅಣುವು ಎಲೆಕ್ಟ್ರಾನ್‌ಗಳ ನಷ್ಟದಿಂದಲೋ ಗಳಿಕೆಯಿಂದಲೋ ವಿದ್ಯುದಾವೇಶ ಪಡೆದುಕೊಂಡು ಅಯಾನು ಆಗುವಂತೆ ಮಾಡುವ ಪ್ರಕ್ರಿಯೆ. ಅಣುವಿನ ಪರಮಾಣುಗಳು ದ್ರಾವಣದಲ್ಲಿ ವಿಯೋಜನೆ ಗೊಳ್ಳುವುದರಿಂದ (NaCl(Na++Cl-) ಅಥವಾ ಅನಿಲವೊಂದರ ಪರಮಾಣುಗಳು ವಿದ್ಯುತ್ ಕ್ಷೇತ್ರದಲ್ಲಿ ವಿಯೋಜನೆಗೊಳ್ಳು ವುದರಿಂದ (H222H+) ಇದು ಜರಗುತ್ತದೆ
ionization
ಅಯಾನೀಕರಣ ವಿಭವ
(ಭೌ) ಒಂದು ತಟಸ್ಥ ಪರಮಾಣುವಿನಿಂದ ಒಂದು ಎಲೆಕ್ಟ್ರಾನನ್ನು ಸೆಳೆದು ಹಾಕಲು ವಿನಿಯೋಗಿಸಬೇಕಾದ ಶಕ್ತಿ. (ಎಲೆಕ್ಟ್ರಾನ್ ವೋಲ್ಟ್‌ಗಳಲ್ಲಿ ಸೂಚಿಸುವುದು ವಾಡಿಕೆ). ಜನ್ಯ ಅಯಾನ್‌ನಿಂದ ಮತ್ತೊಂದು ಎಲೆಕ್ಟ್ರಾನನ್ನು ತೆಗೆಯಲು ಮತ್ತಷ್ಟು ಶಕ್ತಿ ಅಗತ್ಯ. ಸಂಕೇತ I
ionisation potential
ಅಯಾನು
(ಭೌ) ಒಂದು ಅಥವಾ ಹೆಚ್ಚು ಎಲೆಕ್ಟ್ರಾನ್‌ಗಳನ್ನು ಕಳೆದುಕೊಂಡು ಧನಾವಿಷ್ಟವಾದ (ಕ್ಯಾಟಯಾನ್) ಅಥವಾ ಗಳಿಸಿ ಕೊಂಡು ಋಣಾವಿಷ್ಟವಾದ (ಅನಯಾನ್) ಪರಮಾಣು ಅಥವಾ ಪರಮಾಣು ಪುಂಜ. ಆಮ್ಲ, ಆಲ್ಕಲಿ ಅಥವಾ ಲವಣಗಳ ವಿಯೋಜನೆಯ ಫಲವಾಗಿ ಉತ್ಪತ್ತಿಗೊಂಡು ಎರಡು ಎಲೆಕ್ಟ್ರೋಡ್‌ಗಳ ನಡುವೆ ವಿದ್ಯುದ್ವಾಹಕತೆಗೆ ಕಾರಣವಾಗುತ್ತದೆ. ಅನಿಲಗಳಲ್ಲಿ ಅಯಾನುಗಳು ಸಾಮಾನ್ಯವಾಗಿ ಅಣುಗಳಾಗಿರುತ್ತವೆ. ಹಾಗಾಗಿ ಈ ಪ್ರಸಂಗದಲ್ಲಿ ದ್ವಿ-ಅಥವಾ ತ್ರಿ-ಅಯಾನೀಕರಣಗಳನ್ನೂ ಕಾಣ ಬಹುದು. ಅನಿಲಗಳು ಸಂಪೂರ್ಣವಾಗಿ ಅಯಾನೀಕೃತವಾದಾಗ ದ್ರವ್ಯದ ನಾಲ್ಕನೆಯ ಸ್ಥಿತಿಯನ್ನು - ಪ್ಲಾಸ್ಮ ಸ್ಥಿತಿಯನ್ನು - ತಲಪುತ್ತವೆ. ದ್ರವ್ಯ ವಿದ್ಯುತ್ ತಟಸ್ಥವಾದುದರಿಂದ ಅಯಾನುಗಳು ಸಾಮಾನ್ಯವಾಗಿ ಯುಗ್ಮಗಳಾಗಿ ರೂಪುಗೊಳ್ಳುತ್ತವೆ. ಹೈಡ್ರೊಜನ್ ಕುರಿತಂತೆ ಪ್ರೋಟಾನೇ ಅದರ ಅಯಾನು. ಅಂತೆಯೇ ಆಲ್ಫಾ-ಕಣವು ಹೀಲಿಯಮ್‌ನ ಅಯಾನು
ion
ಅಯಾನುಗೋಳ
(ಭೌ) ವಾಯುಮಂಡಲದ ಅತ್ಯುನ್ನತ ಪದರದೊಂದಿಗೆ ಸೌರ ಅತಿ ನೇರಿಳೆ ವಿಕಿರಣ ವರ್ತಿಸಿದುದರ ಫಲವಾಗಿ ಅಯಾನೀಕರಣಗೊಂಡ ವಾಯುಮಂಡಲ ಭಾಗ. ಅಯಾನು ಗೋಳವು ಭೂಮಿಯಿಂದ ೭೦-೮೦ ಕಿಮೀ ಎತ್ತರದಲ್ಲಿ ಆರಂಭವಾಗಿ ಅನಿರ್ದಿಷ್ಟ ವ್ಯಾಪ್ತಿ ಪಡೆದಿದೆ. ರೇಡಿಯೊ ಅಲೆಗಳನ್ನು ಪ್ರತಿ ಫಲಿಸುವ ಮೂಲಕ ದೂರದ ರೇಡಿಯೊ ಪ್ರಸಾರಕ್ಕೆ ನೆರವಾಗುವ ವಾತಾವರಣದ ಭಾಗ
ionosphere
ಅಯಾನು ವಿನಿಮಯ
(ರ) ಯಾವುದೇ ದ್ರಾವಣ (ಸಾಮಾನ್ಯವಾಗಿ ಜಲೀಯ) ಮತ್ತು ಅದರೊಂದಿಗೆ ಸಂಪರ್ಕ ದಲ್ಲಿರುವ ಯಾವುದೇ ಘನ ಪದಾರ್ಥ ಇವುಗಳ ನಡುವೆ ಒಂದೇ ಆವೇಶದ ಅಯಾನುಗಳ ವಿನಿಮಯ. ಈ ಪ್ರಕ್ರಿಯೆ ನಿಸರ್ಗದಲ್ಲಿ ವ್ಯಾಪಕವಾಗಿ ಜರಗುತ್ತದೆ, ವಿಶೇಷವಾಗಿ ಮಣ್ಣು, ನೀರಿನಲ್ಲಿ ವಿಲೀನವಾಗುವ ಗೊಬ್ಬರಗಳನ್ನು ತನ್ನಲ್ಲಿ ಉಳಿಸಿಕೊಳ್ಳುವಾಗ ಹಾಗೂ ಹೀರಿಕೊಳ್ಳುವಾಗ. ಉದಾ : ಪೊಟ್ಯಾಸಿಯಮ್ ಲವಣವನ್ನು ನೀರಿನಲ್ಲಿ ವಿಲೀನಿಸಿ ಮಣ್ಣಿಗೆ ಹಾಕಿದಾಗ, ಮಣ್ಣು ಪೊಟ್ಯಾಸಿಯಮ್ ಅಯಾನುಗಳನ್ನು ಹೀರಿಕೊಳ್ಳುತ್ತದೆ ಮತ್ತು ಸೋಡಿಯಮ್ ಮತ್ತು ಕ್ಯಾಲ್ಸಿಯಮ್ ಅಯಾನುಗಳನ್ನು ಬಿಡುಗಡೆ ಮಾಡುತ್ತದೆ. ಈ ಪ್ರಸಂಗದಲ್ಲಿ ಮಣ್ಣು ಅಯಾನು ವಿನಿಮಯಕಾರಿ. ಇದೇ ರೀತಿ ನೀರಿನ ಗಡಸುತನವನ್ನು ನೀಗಲು ಅದರಲ್ಲಿಯ ಕ್ಯಾಲ್ಸಿಯಮ್ ಹಾಗೂ ಮೆಗ್ನೀಸಿಯಮ್ ಅಯಾನುಗಳನ್ನು ಸೋಡಿಯಮ್ ಹಾಗೂ ಪೊಟ್ಯಾಸಿಯಮ್ ಅಯಾನುಗಳೊಂದಿಗೆ ವಿನಿಮಯಿಸ ಲಾಗುತ್ತದೆ. ಇದಲ್ಲದೆ ಅಯಾನು ವಿನಿಮಯ ಅನೇಕ ಕೈಗಾರಿಕಾ ಬಳಕೆಗಳಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕಡಲಿನ ಉಪ್ಪು ನೀರನ್ನು ಪಾನಯೋಗ್ಯವಾಗಿಸಲು ಈ ತಂತ್ರ ಸಹಾಯಕ
ion exchange
ಅಯಾಲು
(ಪ್ರಾ) ಕುದುರೆ, ಸಿಂಹ ಮೊದಲಾದ ಪ್ರಾಣಿಗಳ ಕುತ್ತಿಗೆಯ ಮೇಲಿನ ಉದ್ದವಾದ ಕೂದಲು. ಕೇಸರ
mane
ಅಯುಗ್ಮಕ ಬೀಜಕ
(ಸ) ರೂಪದಲ್ಲಿ ಯುಗ್ಮ ಬೀಜಕವನ್ನು ಹೋಲುವ, ಆದರೆ ಯುಗ್ಮಕಗಳ ಪೂರ್ವಭಾವಿ ಲೈಂಗಿಕ ಮಿಲನದ ಫಲವಾಗಿರದ, ರಚನೆ
azygospore
ಅಯುಗ್ಮನ
(ಪ್ರಾ) ಜೋಡಿ ಆಗದಿರುವುದು; ಜೊತೆ ಭಾಗ ಇಲ್ಲದಿರುವುದು. ಒಂಟಿಯಾಗಿರುವ ಅಂಗ, ಭಾಗ
azygosis
ಅಯುಗ್ಮಿತ
(ಜೀ) ಶರೀರದ ವಿರುದ್ಧ ಪಕ್ಕಗಳಲ್ಲಿದ್ದು ಸಮತೋಲ ಏರ್ಪಡಿಸುವಂತಹುದಲ್ಲ, ಆದರೆ ಮಧ್ಯಮದಲ್ಲಿ ಇರುವ (ಅಂಗಭಾಗ). ಮಧ್ಯಸ್ಥ
unpaired
ಅಯುತಿ
(ಸ) ಮಯೊಸಿಸ್‌ನ ಆರಂಭಿಕ ಘಟ್ಟದಲ್ಲಿ ಎರಡು ಕ್ರೋಮೊಸೋಮ್‌ಗಳು ಒಟ್ಟಾಗಿ ಸೇರದ ಸ್ಥಿತಿ