logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಮೊನಾಲ್
(ರ) ಟ್ರೈನೈಟ್ರೋಟಾಲ್ವೀನ್ (ಟಿಎನ್‌ಟಿ), ಅಮೋನಿಯಮ್ ನೈಟ್ರೇಟ್ ಮತ್ತು ಅಲ್ಯೂಮಿನಿಯಮ್ ಚೂರ್ಣ ಮಿಶ್ರಿತ ಸಿಡಿಮದ್ದು. ಅಮೆಟಾಲ್
ammonal

ಅಮೋನಿಯ
(ರ) ಪ್ರೋಟೀನ್, ಪ್ಯೂರೀನ್‌ಗಳು
ammonia

ಅಮೋನಿಯ ಗಡಿಯಾರ
(ತಂ) ಅಮೋನಿಯ ಅಣುವಿನ ಲಯಬದ್ಧ ವಿಪರ್ಯಯ ಕ್ರಿಯೆಯಿಂದ ನಿಯಂತ್ರಿತವಾಗಿ ಆವೃತ್ತಿ ೨.೩೭೮೬x೧೦೧೦ ಹರ್ಟ್ಸ್ ಇರುವ ಅತಿನಿಷ್ಕೃಷ್ಟ ಕಾಲಮಾಪಕ. ನೋಡಿ : ಪರಮಾಣು ಗಡಿಯಾರ
ammonia clock

ಅಮೋನಿಯಮ್ ಅಸೆಟೇಟ್
(ರ) CH3.COONH4 ಬಿಳಿ ಜಲಾಕರ್ಷಕ ಘನ. ಕಬಿಂ. ೧೧೪0ಸೆ. ಮಾಂಸ ಸಂರಕ್ಷಕ. ರಂಗುಗಳ ತಯಾರಿಕೆಯಲ್ಲಿ ಬಳಕೆ
ammonium acetate

ಅಮೋನಿಯಮ್ ಸಲ್ಫೇಟ್
(ರ) (NH4)2SO4 ಬಿಳಿ ಹರಳುರೂಪಿ ವಿಲೇಯ ಘನ. ಕಲ್ಲಿದ್ದಲ ಅನಿಲ ತಯಾರಿಕೆಯಲ್ಲಿ ಉಪೋತ್ಪನ್ನ. ರಸಗೊಬ್ಬರವಾಗಿ ಬಳಕೆ
ammonium sulphate

ಅಮ್ಮೀನ್‌ಗಳು
(ರ) ಲವಣದ ಅಥವಾ ತತ್ಸದೃಶ ಸಂಯುಕ್ತದ ಅಣುವಿಗೆ ಒಂದು ಅಥವಾ ಹೆಚ್ಚು ಅಮೋನಿಯ ಅಣುಗಳನ್ನು ಸೇರಿಸಿದಾಗ ದೊರೆಯುವ ಸಂಕೀರ್ಣ ಇನಾರ್ಗ್ಯಾನಿಕ್ (ಅಕಾರ್ಬನಿಕ) ಸಂಯುಕ್ತಗಳು
ammines

ಅಯನ
(ಖ) ವಿಷುವ ಬಿಂದುಗಳ ವಕ್ರ ಚಲನೆ. ಮೇಷ ಮತ್ತು ತುಲಾ ಬಿಂದುಗಳು (ಕ್ರಾಂತಿ-ವಿಷುವದ್ವೃತ್ತಗಳು ಪರಸ್ಪರ ಛೇದಿಸುವ ಎರಡು ಬಿಂದುಗಳು) ಕ್ರಾಂತಿವೃತ್ತದ ನೇರ ಪೂರ್ವ-ಪಶ್ಚಿಮ ದಿಶೆಯಲ್ಲಿ ಸರಿಯುವುದು: ಕ್ರಾಂತಿ ವೃತ್ತದ ಮೇಲೆ ವಿಷುವದ್ವೃತ್ತ ಪೂರ್ವ-ಪಶ್ಚಿಮ ದಿಶೆಯಲ್ಲಿ ಜಾರುತ್ತಿದೆಯೋ ಎಂಬಂತೆ. ಈ ಚಾಂದ್ರ-ಸೌರ ಅಯನವೂ ಸಣ್ಣ ಗ್ರಹಾಂತರ ಅಯನವೂ ಜೊತೆಗೂಡಿ ವಾರ್ಷಿಕ ೫೦.೨೭' ಬೆಲೆಯ ಸಾರ್ವತ್ರಿಕ ಅಯನವನ್ನು ನೀಡುತ್ತವೆ. ಸುಮಾರು ೨೫,೮೦೦ ವರ್ಷಗಳಲ್ಲಿ ಪೂರ್ಣ ಪರಿಭ್ರಮಣೆ ಮುಗಿಯುತ್ತದೆ. ಸೂರ್ಯ ಚಂದ್ರರ ಸಂಯುಕ್ತ ಗುರುತ್ವಾಕರ್ಷಣ ಬಲ ಮತ್ತು ಭೂಮಿಯಲ್ಲಿಯ ಉಬ್ಬರವಿಳಿತಗಳ ತಾಡನ ಬಲ ಎಲ್ಲ ಸೇರಿ ಭೂಮಿಯ ಅಕ್ಷ (ಭೂಮಿ-ಧ್ರುವ ನಕ್ಷತ್ರ ರೇಖೆ) ಕ್ರಾಂತಿವೃತ್ತ ಧ್ರುವರೇಖೆಯ ಸುತ್ತ ಪೂರ್ವ-ಪಶ್ಚಿಮ ದಿಶೆಯಲ್ಲಿ ಸುತ್ತುತ್ತಿದೆ. ಇದರ ಪರಿಣಾಮವೇ ಅಯನ. ಕ್ರಿಪೂ ಸುಮಾರು ೧೫೦೦ರಲ್ಲಿ ಹಿಪ್ಪಾರ್ಕಸ್ ಈ ವಿದ್ಯಮಾನವನ್ನು ಮೊತ್ತಮೊದಲಿಗೆ ಆವಿಷ್ಕರಿಸಿದ. (ಭೌ) ಕ್ರಿಯಾತ್ಮಕ ಬಲದ ವ್ಯವಸ್ಥೆಯಲ್ಲಿ ಕ್ರಮಬದ್ಧವಾದ ಆವರ್ತನ ಚಲನೆ. ಇದರಲ್ಲಿ ಯುಕ್ತವಾಗಿ ಆಯ್ದ ನಿರ್ದೇಶಕಗಳ ಪೈಕಿ ಒಂದನ್ನುಳಿದು ಎಲ್ಲವೂ ಸ್ಥಿರವಾಗಿರುತ್ತವೆ
precession

ಅಯನ ಉನ್ಮಂಡಲ
(ಖ) ಖಗೋಳ ಧ್ರುವಗಳ ಮತ್ತು ಅಯನ ಸಂಕ್ರಾಂತಿಗಳ ಮೂಲಕ ಹಾದು ಹೋಗುವ ಮಹಾವೃತ್ತ. ನೋಡಿ: ವಿಷುವ ಉನ್ಮಂಡಲ
solstitial colure

ಅಯನ ಸಂಧಿಗಳು
(ಖ) ಸೂರ್ಯನ ವಾರ್ಷಿಕ ಚಲನದಿಶೆ ಬದಲಾಗುವ ಎರಡು ಬಿಂದುಗಳು. ವಸಂತ ವಿಷುವ ಬಿಂದುವಿನಿಂದ ೯೦೦ ಪೂರ್ವಕ್ಕೆ ಕ್ರಾಂತಿವೃತ್ತದಲ್ಲಿ ಗ್ರೀಷ್ಮ ಅಯನ ಸಂಧಿಯೂ ೯೦೦ ಪಶ್ಚಿಮಕ್ಕೆ ಶಿಶಿರ ಅಯನ ಸಂಧಿಯೂ ಇವೆ. ಗ್ರೀಷ್ಮ ಅಯನ ಸಂಧಿಗೆ ಸೂರ್ಯ ಜೂನ್ ೨೧/೨೨ರಂದೂ ಶಿಶಿರ ಅಯನ ಸಂಧಿಗೆ ಡಿಸೆಂಬರ್ ೨೧/೨೨ರಂದೂ ಬರುತ್ತದೆ. ಶಿಶಿರ ಅಯನ ಸಂಧಿಯಿಂದ ಗ್ರೀಷ್ಮ ಅಯನ ಸಂಧಿಯವರೆಗೆ ಸೂರ್ಯ ದಕ್ಷಿಣದಿಂದ ಉತ್ತರಾಭಿಮುಖವಾಗಿಯೂ ಗ್ರೀಷ್ಮ ಅಯನ ಸಂಧಿಯಿಂದ ಶಿಶಿರ ಅಯನ ಸಂಧಿಯವರೆಗೆ ಉತ್ತರದಿಂದ ದಕ್ಷಿಣಾಭಿಮುಖವಾಗಿಯೂ ಚಲಿಸುವುದು. ಎಂದೇ ಶಿಶಿರ ಅಯನ ಸಂಧಿಗೆ ಉತ್ತರಾಯನ ಆರಂಭಬಿಂದುವೆಂದೂ ಗ್ರೀಷ್ಮ ಅಯನ ಸಂಧಿಗೆ ದಕ್ಷಿಣಾಯನ ಆರಂಭಬಿಂದುವೆಂದೂ ಹೆಸರು. ಮೊದಲನೆಯ ದಿನಾಂಕ (ಅಂದರೆ, ಶಿಶಿರ ಅಯನ ಸಂಧಿಯನ್ನು ಒಳಗೊಂಡ ದಿನಾಂಕ)ದಂದು ಸೂರ್ಯ ಪೂರ್ವ ಬಿಂದುವಿನಿಂದ ೨೩೦ ೨೬’ ೨೩" ದಕ್ಷಿಣದಲ್ಲಿ ಮೂಡಿ ಪಶ್ಚಿಮ ಬಿಂದುವಿನಿಂದ ಅಷ್ಟೇ ದಕ್ಷಿಣಕ್ಕೆ ಮುಳುಗುತ್ತದೆ. ಎರಡನೆಯ ದಿನಾಂಕ (ಅಂದರೆ, ಗ್ರೀಷ್ಮ ಅಯನ ಸಂಧಿಯನ್ನೊಳಗೊಂಡ ದಿನಾಂಕ)ದಂದು ಸೂರ್ಯ ಪೂರ್ವ ಬಿಂದುವಿನಿಂದ ೨೩೦ ೨೬’ ೨೩" ಉತ್ತರದಲ್ಲಿ ಮೂಡಿ ಪಶ್ಚಿಮ ಬಿಂದುವಿನಿಂದ ಅಷ್ಟೇ ಉತ್ತರದಲ್ಲಿ ಮುಳುಗುತ್ತದೆ. ಭೂಮಿಯ ಉತ್ತರಾರ್ಧದವರೆಗೆ ಇವು ಕ್ರಮವಾಗಿ ಗರಿಷ್ಠ ಇರುಳು-ಕನಿಷ್ಠ ಹಗಲು ಮತ್ತು ಗರಿಷ್ಠ ಹಗಲು-ಕನಿಷ್ಠ ಇರುಳು ಇರುವ ದಿನಾಂಕಗಳು. ಅಯನಾಂಕಗಳು
solstitial points

solstitial points

">

ಅಯಾನ್ ಸೆರೆ
(ಭೌ) ಸಂಕೀರ್ಣ ರಚನೆಯಲ್ಲಿ ಲೋಹದ ಅಯಾನುಗಳನ್ನು ಬಚ್ಚಿಟ್ಟು ಅವನ್ನು ನಿಷ್ಕ್ರಿಯಗೊಳಿಸುವ ವಿದ್ಯಮಾನ. ಇದು ಅಯಾನುಗಳನ್ನು ಸಂರಕ್ಷಿತ ರೂಪದಲ್ಲಿ ಸರಬರಾಜು ಮಾಡುವ ಒಂದು ವಿಧಾನವೂ ಹೌದು. ಉದಾ : ಉಪ್ಪು ಮಣ್ಣಿನ ಪ್ರದೇಶಗಳಲ್ಲಿನ ಗಿಡಗಳಿಗೆ ಸಂರಕ್ಷಿತ ಕಬ್ಬಿಣದ ದ್ರಾವಣಗಳ ಸರಬರಾಜು ಮಾಡುವುದು
sequestration


logo