(ರ) ಪಾದರಸ ಮತ್ತು ಇತರ ಒಂದು ಅಥವಾ ಹೆಚ್ಚು ಲೋಹಗಳು ಸೇರಿ ಆಗಿರುವ ಪದಾರ್ಥ. ರಸಮಿಶ್ರ. ಉದಾ: ರಸಬಂಗಾರ
amalgam
ಅಮಾಲ್ಗಮೀಕರಣ
(ರ) ರಸಮಿಶ್ರಣ, ಏಕರೂಪತಾ ಸಂಯೋಗ
amalgamation
ಅಮಾವಾಸ್ಯೆ
(ಖ) ಸೂರ್ಯ-ಚಂದ್ರರ ಖಗೋಳೀಯ ರೇಖಾಂಶ ಸಮವಾಗಿರುವ ದಿನ ಯಾ ಕಾಲ. ಆಗ ಚಂದ್ರನ ಪ್ರಕಾಶಿತ ಗೋಳಾರ್ಧವು ಭೂಮಿಗೆ ಅಗೋಚರ. ನೋಡಿ: ಹುಣ್ಣಿಮೆ
new moon
ಅಮಿಲಮ್
(ಸ) ಪಿಷ್ಟ. ಅಮೈಲೇಸ್ ಹಾಗೂ ಅಮಿಲೊ ಪೆಕ್ಟಿನ್ ಎಂಬ ಎರಡು ರೂಪಗಳಲ್ಲಿ ವ್ಯವಸ್ಥೆಗೊಂಡ ಗ್ಲೂಕೋಸ್ ಘಟಕಗಳ ಸರಪಳಿಯನ್ನೊಳಗೊಂಡ ಪಾಲಿಸ್ಯಾಕರೈಡ್‌ಗಳು. ಹೆಚ್ಚಿನ ನೈಸರ್ಗಿಕ ಪಿಷ್ಟಗಳು (ಉದಾ: ಆಲೂಗೆಡ್ಡೆ ಹಾಗೂ ಧಾನ್ಯ ಪಿಷ್ಟಗಳು) ಈ ಎರಡೂ ರೂಪಗಳ ಮಿಶ್ರಣವಾಗಿರುತ್ತವೆ
amylum
ಅಮಿಲೊಲಿಸಿಸ್
(ಜೀ) ಪಚನದಲ್ಲಿ ಪಿಷ್ಟಗಳು ಶರ್ಕರಗಳಾಗಿ ಮಾರ್ಪಡುವುದು
amylolysis
ಅಮಿಲೋಸ್
(ಜೀ) ಹೆಚ್ಚಿನ ಧಾನ್ಯ ಪಿಷ್ಟಗಳ ಜಲ ವಿಲೇಯ ಘಟಕ
amylose
ಅಮಿಶ್ರಣೀಯ
(ರ) ಜೊತೆಗೆ ತಂದಾಗ ಒಂದರೊಡನೆ ಒಂದು ಬೆರೆತು ಸ್ವಜಾತೀಯ ವಸ್ತುವಾಗದೆ ಒಂದಕ್ಕಿಂತ ಹೆಚ್ಚಿನ ಪ್ರಾವಸ್ಥೆ ತಳೆಯುವ (ದ್ರವಗಳು). ಉದಾ: ಎಣ್ಣೆ ಹಾಗೂ ನೀರು
immiscible
ಅಮೀನ್‌ಗಳು
(ರ) ಅಮೋನಿಯದ ಅಣುವಿನ ೧, ೨ ಅಥವಾ ೩ ಹೈಡ್ರೊಜನ್ ಪರಮಾಣುಗಳನ್ನು ಹೈಡ್ರೊಕಾರ್ಬನ್ ಗುಂಪುಗಳಿಂದ ಪ್ರತಿಸ್ಥಾಪಿಸಿದಾಗ ದೊರೆಯುವ ಆರ್ಗ್ಯಾನಿಕ್ (ಕಾರ್ಬನಿಕ) ಉತ್ಪನ್ನಗಳು. ಅಮೀನೋ ಆಲ್ಕೈನ್‌ಗಳು
amines
ಅಮೀನೊ ಆಮ್ಲಗಳು
(ರ) ಒಂದು ಅಥವಾ ಹೆಚ್ಚು ಪ್ರತ್ಯಾಮ್ಲೀಯ ಅಮೀನೊ ಗುಂಪುಗಳನ್ನೂ ಒಂದು ಅಥವಾ ಹೆಚ್ಚು ಆಮ್ಲೀಯ ಕಾರ್ಬಾಕ್ಸಿಲ್ ಗುಂಪುಗಳನ್ನೂ ಒಳಗೊಂಡಿರುವ ಆರ್ಗ್ಯಾನಿಕ್ (ಕಾರ್ಬನಿಕ) ಸಂಯುಕ್ತಗಳು. ಜೀವಿಗಳಲ್ಲಿ ಗುರುತಿಸ ಲಾಗಿರುವ ೮೦ಕ್ಕಿಂತಲೂ ಹೆಚ್ಚು ಅಮೀನೋ ಆಮ್ಲಗಳ ಪೈಕಿ ಸುಮಾರು ೨೪ ಆಮ್ಲಗಳು ಪ್ರೋಟೀನ್‌ಗಳ ನಿರ್ಮಾಣ ಘಟಕಗಳು
amino acids
ಅಮೀಬ
(ಪ್ರಾ) ಪ್ರೋಟೊಜೋವ ವಿಭಾಗದ ಒಂದು ಜಾತಿ; ಬಲು ಚಿಕ್ಕ ಮತ್ತು ಅತಿ ಸರಳ ಜಲ ಪ್ರಾಣಿಗಳು; ಅರ್ಧ ದ್ರವಸ್ಥಿತಿಯಲ್ಲಿ ಇರುವ ಜೀವದ್ರವ್ಯ ಇವುಗಳ ಮೂಲ ವಸ್ತು; ರೂಪವು ಸದಾ ಬದಲಾಗುತ್ತಲೇ ಇರುವುದು