(ಭೌ) ಬೆಳಕಿನ ದೂಲದ ಅಭಿಸರಣವನ್ನು (ಒಂದೇ ಬಿಂದುವಿನಲ್ಲಿ ಸೇರು ವುದನ್ನು) ಹೆಚ್ಚು ಮಾಡುವ ಅಥವಾ ಅಪಸರಣವನ್ನು (ಬೇರೆ ಬೇರೆ ಹೋಗು ವುದನ್ನು) ಕಡಿಮೆ ಮಾಡುವ ಮಸೂರ
convergent lens
ಅಭಿಸರಣ ಶ್ರೇಣಿ
(ಗ) ಅನಂತ ಮೌಲ್ಯಗಾಮಿಯಾಗದೆ ಸಾಂತ ಪರಿಮಿತಿ ಗಾಮಿಯಾಗುವ ಸರಣಿ. ಇದು ೨ಕ್ಕೆ ಅಭಿಸರಿ ಸುತ್ತದೆ. 1+2+3+4+....1 ಇದು ಅನಂತಕ್ಕೆ ಅಪಸರಿಸುತ್ತದೆ
convergent series
ಅಭಿಸರಣೆ
(ಗ) ಸರಳರೇಖೆಗಳು, ಕಿರಣಗಳು ಮುಂತಾದವು ಹತ್ತಿರ ಹತ್ತಿರ ಸರಿಯುತ್ತ ಒಂದೇ ಬಿಂದುವಿನಲ್ಲಿ ಐಕ್ಯವಾಗುವುದು. ೧. a1, a2.....,an,.... ಎಂಬ ಅನಂತ ಶ್ರೇಣಿಯಲ್ಲಿ n ಅನಂತಗಾಮಿಯಾದಂತೆ an ಒಂದು ನಿರ್ದಿಷ್ಟ ಪರಿಮಿತಿ a-ಗಾಮಿಯಾದರೆ ಇದೊಂದು ಅಭಿಸರಣ ಶ್ರೇಣಿ. ಈ ಅಭಿಸರಣ ಶ್ರೇಣಿಯನ್ನು ಸಾಂಪ್ರದಾಯಿಕವಾಗಿ ಹೀಗೆ ನಿರೂಪಿಸಲಾಗುತ್ತದೆ:
convergence
ಅಭಿಸಾರೀ
(ಸಾ) ಒಂದೆಡೆಗೆ, ಒಂದು ಗುರಿಗೆ ಅಥವಾ ಒಂದು ಬಿಂದುವಿಗೆ ಸರಿಯುವ
convergent
ಅಭೇದೀಕೃತ ಜೀವಕೋಶ
(ವೈ) ವಯಸ್ಕರಲ್ಲಿರುವ ಎಲ್ಲ ಜೀವಕೋಶಗಳೂ ಭೇದೀಕೃತವಾಗಿ ಇರುತ್ತವೆ. ಅಂದರೆ ಅವು ನಿರ್ದಿಷ್ಟ ಅಂಗದಲ್ಲಿ ನಿರ್ದಿಷ್ಟ ಕೆಲಸ ವನ್ನು ಮಾಡುತ್ತಿರುತ್ತವೆ. ಈ ಸಾರ್ವತ್ರಿಕ ನಿಯಮಕ್ಕೆ ಕೆಲವು ಕೋಶಗಳು ಅಪವಾದ. ಇವು ಅಗತ್ಯಕ್ಕೆ ತಕ್ಕಂತೆ ಯಾವುದೇ ರೀತಿಯ ಜೀವಕೋಶವಾಗಿ ಬದಲುವ ಸೀಮಿತ ಸಾಮರ್ಥ್ಯ ಪಡೆದಿರುತ್ತವೆ. ಇವೇ ಅಭೇದೀಕೃತ ಜೀವಕೋಶಗಳು
undifferentiated cell
ಅಭ್ಯರ್ಥಿ
(ಸಾ) ನಿರ್ದಿಷ್ಟ ಅವಶ್ಯಕತೆಗಳಿಗೆ ಹೊಂದಬಲ್ಲ ಜೀವಿ ಅಥವಾ ವಸ್ತು
candidate
ಅಭ್ಯಾಸ
(ಸಾ) ಪುನರಾವರ್ತಿಸುವ ವರ್ತನಾ ಪ್ರರೂಪ. ನಿಯತವಾಗಿ ಮಾಡುವ, ಹಾಗಾಗಿ ಮತ್ತೆ ಮತ್ತೆ ಮಾಡುವ ಪ್ರವೃತ್ತಿ ರೂಪಿಸುವ, ಕ್ರಿಯೆ. ಪದ್ಧತಿ, ರೂಢಿ
habit
ಅಭ್ರಕ
(ಭೂವಿ) ಏಕನತ ವ್ಯವಸ್ಥೆಯಲ್ಲಿ ಸ್ಫಟಿಕೀಕರಣಗೊಳ್ಳುವ ಸಿಲಿಕೇಟ್‌ಗಳ ಒಂದು ಗುಂಪು. ಇವು ಒಂದೇ ತೆರನಾದ ರಾಸಾಯನಿಕ ಸಂಯುಕ್ತಗಳನ್ನು ಒಳಗೊಂಡಿರುತ್ತವೆ, ಪದರ ಪದರವಾಗಿರುತ್ತವೆ. ಅತ್ಯುತ್ಕೃಷ್ಟ ವಿದ್ಯುನ್ನಿರೋಧಕ. ಭಾರತದ ಆಂಧ್ರಪ್ರದೇಶ, ಬಿಹಾರ ಹಾಗೂ ರಾಜಸ್ಥಾನಗಳಲ್ಲಿ ಅಧಿಕವಾಗಿ ಲಭ್ಯ. ಇದರ ಮಾತೃಶಿಲೆ ಪೆಗ್ಮಟೈಟ್. ಮಿತಪಾರಕ. ಉತ್ತಮ ಬಗೆಯ ಸೀಳುಗಳಿರುವ ಕಾರಣ ಪುಸ್ತಕದ ಹಾಳೆಗಳಂತೆ ಬಿಡಿಸಬಹುದು. ಉತ್ತಮ ಸ್ಥಿತಿಸ್ಥಾಪಕ ಶಕ್ತಿ ಉಳ್ಳವು. ಕಾಠಿಣ್ಯಾಂಕ ೨-೨.೫ ಅಂದರೆ ಉಗುರಿನಿಂದ ಗೀರಬಹುದು. ಸಾಸಂ ೨.೭೫-೩. ವಿದ್ಯುತ್ ಸಲಕರಣೆ ಗಳಲ್ಲಿ ನಿರೋಧಕವಾಗಿ ಬಳಕೆ. ಕಾಗೆಬಂಗಾರ. ಐಸಿಂಗ್ಲಾಸ್
mica
ಅಮಟೋಲ್
(ರ) ೮೦% ಅಮೋನಿಯಮ್ ನೈಟ್ರೇಟ್, ೨೦% ಟಿಎನ್‌ಟಿ ಇರುವ ಸಿಡಿಮದ್ದು
amatol
ಅಮಲು
(ವೈ) ೧. ವಿಷ ಪರಿಣಾಮ ಉಂಟು ಮಾಡುವುದು. ೨. ಮತ್ತು ಬರಿಸುವ ವಸ್ತುಗಳ ಸೇವನೆಯಿಂದ ವ್ಯಕ್ತಿಯಲ್ಲಿ ಆತ್ಮಸಂಯಮ ನಷ್ಟವಾಗಿ ಉಗ್ರವಾಗುವ ಇಲ್ಲವೇ ಜಡವಾಗುವ, ಅಸಹಜ ನಿದ್ರೆಯಲ್ಲಿ ಕೊನೆಗಾಣುವ ಸ್ಥಿತಿ