(ಸಾ) ಎಲ್ಲರೂ ಅಂಗೀಕರಿಸಿರುವ, ಆದರೆ ರುಜುವಾತಿಸಲು/ಹುಸಿಯಾಗಿಸಲು ಸಾಧ್ಯವಾಗದ ಮೂಲ ಗ್ರಹಿಕೆ; ಯಾವುದೇ ವಾದದ ಅಸ್ತಿಭಾರವಿದು. ಆದ್ಯುಕ್ತಿ
assumption
ಅಭಿಗ್ರಾಹಕ
(ತಂ) ಪ್ರೇಷಣ ವ್ಯವಸ್ಥೆಯಲ್ಲಿ ಅಂತಿಮ ಘಟಕ. ಇದು ತನಗೆ ಬಂದ ಮಾಹಿತಿಯನ್ನು ಸಂಗ್ರಹಿಸುತ್ತದೆ, ದಾಖಲಿಸುತ್ತದೆ, ಇಲ್ಲವೇ ಅಗತ್ಯ ರೂಪಕ್ಕೆ ಪರಿವರ್ತಿಸುತ್ತದೆ
receiver
ಅಭಿಜಾತ ಭೌತವಿಜ್ಞಾನ
(ಭೌ) ಕ್ವಾಂಟಮ್ (೧೯೦೦) ಹಾಗೂ ಸಾಪೇಕ್ಷತಾ (೧೯೦೫) ಸಿದ್ಧಾಂತಗಳಿಗೂ ಮುನ್ನಿನ, ೧೯ನೆಯ ಶತಮಾನದ ಕೊನೆಯವರೆಗಿನ ಸೈದ್ಧಾಂತಿಕ ಭೌತವಿಜ್ಞಾನ. ಇದು ಬಹುಮಟ್ಟಿಗೆ ನ್ಯೂಟನ್ನನ ಬಲವಿಜ್ಞಾನ ಹಾಗೂ ಜೇಮ್ಸ್ ಕ್ಲರ್ಕ್ ಮಾಕ್ಸ್ವೆಲ್‌ನ ವಿದ್ಯುತ್ಕಾಂತತೆಗಳನ್ನು ಅವಲಂಬಿಸಿದ್ದಿತು. ಅತಿ ಶೀಘ್ರ ಸಾಪೇಕ್ಷ ಚಲನೆ ಇಲ್ಲದ ವಿದ್ಯಮಾನಗಳಿಗೆ ಇದನ್ನು ಈಗಲೂ ನಿಷ್ಕೃಷ್ಟತೆಯೊಂದಿಗೆ ಅನ್ವಯಿಸಬಹುದು. ನೋಡಿ: ಆಧುನಿಕ ಭೌತವಿಜ್ಞಾನ
classical physics
ಅಭಿಮುಖತೆ
(ಗ) ಸಂಖ್ಯಾಶಾಸ್ತ್ರೀಯ ದತ್ತಾಂಶಗಳ ಒಂದು ಗಣ. ಕಾಲಕ್ಕೆ ಸಂಬಂಧಿಸಿದಂತೆ ಅಥವಾ ಇನ್ನೊಂದು ಸದೃಶ ಗಣಕ್ಕೆ ಸಂಬಂಧಿಸಿದಂತೆ ಪ್ರದರ್ಶಿಸುವ ಸಾರ್ವತ್ರಿಕ ಒಲವು. ಪ್ರವೃತ್ತಿ
trend
ಅಭಿಮುಖತೆ
(ಸ) ಬಿಸಿಲು, ಗಾಳಿ ಮುಂತಾದ ನೈಸರ್ಗಿಕ ಬಲಗಳಿಗೆ ಸಸ್ಯ ಸಮುದಾಯವೊಂದರ ಒಡ್ಡಿಕೆ
(ಪ್ರಾ) ಜೀವಿಗಳ ನಿರಂತರ ಬೆಳವಣಿಗೆ ಯಲ್ಲಿ ನಿಯತಕಾಲಿಕವಾಗಿ ಪ್ರಕಟವಾಗುವ ಅವಿಪರ್ಯಯಶೀಲ ಬದಲಾವಣೆ. ಉದಾ : ಹುಡುಗರಲ್ಲಿ ಮೀಸೆ ಬರುವುದು, ಹುಡುಗಿಯರಲ್ಲಿ ಮೈನೆರೆಯುವುದು. ನೋಡಿ: ಬೆಳವಣಿಗೆ
development
ಅಭಿವಾಹ
(ಭೌ) ದ್ರವ, ಅನಿಲ, ಕಣಗಳು, ಶಕ್ತಿ ಮೊದಲಾದವು ಯಾವುದೇ ಗೊತ್ತಾದ ತಲಕ್ಕೆ ಲಂಬವಾಗಿ ಹರಿದು ಹೋಗುವ ಪ್ರಮಾಣವನ್ನು ಆ ತಲದ ಕ್ಷೇತ್ರಮಾನಕ್ಕೆ ಸಂಬಂಧಿಸಿದಂತೆ ಲೆಕ್ಕ ಹಾಕಿದ ದರ. (ರ) ಉಷ್ಣದಿಂದ ಸುಲಭವಾಗಿ ಕರಗುವಂತೆ ಮಾಡಲು ಲೋಹ ಮೊದಲಾದವುಗಳಿಗೆ ಬೆಸುಗೆಯ ಮುನ್ನ ಬೆರೆಸುವ ವಸ್ತು. ಸ್ರಾವಕ ವಸ್ತು (ಗ) ನಿರಂತರ ಚಲನೆ, ಸ್ರವಣ. ಉದಾ: ಬಿಂದುವಿನ ನಿರಂತರ ಚಲನೆಯೇ ರೇಖೆ
flux
ಅಭಿವಾಹಿ
(ಪ್ರಾ) (ಯಾವುದೇ ಅಂಗ ಅಥವಾ ಭಾಗದ) ಒಳಕ್ಕೆ ಹರಿಸುವ. ಉದಾ: ನರಗಳು ಆವೇಗಗಳನ್ನು ಕೇಂದ್ರ ನರಮಂಡಲಕ್ಕೆ ಒಯ್ಯುವುದು. ನೋಡಿ: ಅಪವಾಹಿ
afferent
ಅಭಿವಿನ್ಯಾಸ
(ರ) ಆರ್ಗ್ಯಾನಿಕ್ ಅಣುವಿನಲ್ಲಿ, ವಿಶೇಷ ವಾಗಿ ಬೆನ್ಝೀನ್ ಅಣುವಿನಲ್ಲಿ, ಬದಲಿ ಪರಮಾಣುಗಳ ಅಥವಾ ಪರಮಾಣು ವೃಂದಗಳ ಸ್ಥಾನ ನಿರ್ಧರಣೆ. (ಭೌ) ಸುತ್ತಲಿನ ವಸ್ತು ಗಳಿಗೆ ಸಾಪೇಕ್ಷವಾಗಿ ನಿರ್ದಿಷ್ಟ ವಸ್ತುವಿನ ಸ್ಥಾನ ಮತ್ತು ದಿಶೆ. ಕೆಲವು ನಿರ್ದಿಷ್ಟ ತಲಗಳಿಗೆ ಸಾಪೇಕ್ಷವಾಗಿ ಸ್ಫಟಿಕ ತಲಗಳ ನೆಲೆ. ಓರಣ