(ಗ) ಜ್ಯಾಮಿತಿ ಯಲ್ಲಿ ಸಮಾಂತರ ರೇಖೆಗಳನ್ನು ಉಳಿಸಿಕೊಳ್ಳುವ ಪರಿವರ್ತನೆ. ಬೀಜಗಣಿತದಲ್ಲಿ ಪ್ರತಿಲೋಮನಶೀಲ ಪರಿವರ್ತನೆ
affine transformation
ಅಫೀಮು
(ಸ) ಪಪಾವರೇಸೀ ಕುಟುಂಬ, ಪಪಾವರ್ ಸಾಮ್ನಿಫೆರಮ್ ಪ್ರಭೇದದ ಗಿಡ. ಇದರ ಅಪಕ್ವ ಹಣ್ಣಿಗೆ ಕಚ್ಚು ಮಾಡಿದಾಗ ಸ್ರವಿಸುವ ಹಾಲನ್ನು ಶೇಖರಿಸಿ, ಒಣಗಿಸಿ ಅಫೀಮನ್ನು ಉತ್ಪನ್ನ ಮಾಡ ಲಾಗುತ್ತದೆ. ಯೂರೋಪು ಮತ್ತು ಪೂರ್ವ ಏಷ್ಯಾಗಳ ಮೂಲದ ಬಿಳಿ, ಕೆಂಪು ಮತ್ತು ಊದಾ ಹೂವುಗಳನ್ನು ಬಿಡುವ ಗಸಗಸೆ ಗಿಡ. ರಾಸಾಯನಿಕ ವಾಗಿ ಅಫೀಮು ಒಂದು ಅಂಟುರಾಳ (ಗಮ್ ರೆಸೀನ್). ಕಚ್ಚಾ ಅಫೀಮಿನಲ್ಲಿ ಮಾರ್ಫಿನ್ (೫-೧೫%), ನಾರ್ಕೊಟಿನ್ (೨-೮%), ಕೊಡೈನ್ (೦.೧-೨.೫%) ಮುಂತಾದ ಆಲ್ಕಲಾಯ್ಡ್‌ಗಳು ಇವೆ. ಅತಿ ಸೂಕ್ಷ್ಮ ಪ್ರಮಾಣಗಳಲ್ಲಿ ಔಷಧವಾಗಿ ಬಳಕೆ. ಇದರಲ್ಲಿಯ ಸಸ್ಯಕ್ಷಾರ ಥೆಖಾಯಿನ್ ಮತ್ತು ನಾರ್ಶಿಯನ್ ಆರೋಗ್ಯಕ್ಕೆ ಬಲು ಅಪಾಯಕಾರಿ. ಅತಿ ಹೆಚ್ಚಿನ ಬಳಕೆ ಬೆನ್ನುಹುರಿಯನ್ನು ಸಂಕುಚಿತ ಗೊಳಿಸುತ್ತದೆ. ಇದರ ಸೇವನೆ ಒಂದು ಚಟ
opium poppy
ಅಬನಾಸಿ
(ಸ) ಎಬಿನೇಸೀ ಕುಟುಂಬಕ್ಕೆ ಸೇರಿದ ಉಷ್ಣವಲಯವಾಸಿಯಾದ ಪ್ರಮುಖ ವೃಕ್ಷಜಾತಿ. ಭಾರತ, ಮಲೇಶಿಯ ಮತ್ತು ಈಸ್ಟ್ ಇಂಡೀಸ್‌ಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೆಲವು ಪ್ರಭೇದಗಳು ಆಫ್ರಿಕದಲ್ಲೂ ಬೆಳೆಯುವುವು. ಡಯಾಸ್ಪೈರಸ್ ಎಬೆನಮ್ ಎಂಬ ಕರಿಮರ ಅತ್ಯುತ್ಕೃಷ್ಟ. ಪೀಠೋಪಕರಣ, ಕೆತ್ತನೆ ಕೆಲಸ ಮತ್ತು ಸಂಗೀತೋಪಕರಣಗಳಲ್ಲಿ ಬಳಕೆ. ಚರ್ಮರೋಗ, ರಕ್ತರೋಗ, ಸಂಧಿವಾತ ಇತ್ಯಾದಿಗಳ ನಿವಾರಣೆಗಾಗಿಯೂ ಅತಿಸಾರ ಕಣ್ಣು ನೋವು ಶಾಮಕವಾಗಿಯೂ ಬಳಕೆ. ಎಬನಿ
diospyros
ಅಬೀಜೀಯ ಫಲನ
(ಗ) ಸಾಂತ ಸಂಖ್ಯೆಯ ಬೈಜಿಕ ಪರಿಕರ್ಮಗಳಿಂದ ನಿರೂಪಿಸಲು ಸಾಧ್ಯವಾಗದ ಫಲನ. ಉದಾ: sin x, ex
transcendental function
ಅಬೀಜೀಯ ಸಂಖ್ಯೆ
(ಗ) ಪರಿಮೇಯ ಸಹಾಂಕಗಳಿರುವ ಯಾವುದೇ ಬೈಜಿಕ ಸಮೀಕರಣದ ಮೂಲವಾಗಿ ನಿರೂಪಿಸಲಾಗದ ಸಂಖ್ಯೆ ಉದಾ: ಅಥವಾ e
transcendental number
ಅಬೇಸಿಯ
(ವೈ) ನಿತ್ರಾಣದ ಹಾಗೂ ಸ್ನಾಯು ಹೊಂದಾಣಿಕೆ ಇಲ್ಲದ ಪರಿಣಾಮವಾಗಿ ನಡೆಯಲಾಗದಿರುವಿಕೆ. ಗತಿಭ್ರಂಶ
abasia
ಅಭಯಾತ್ಮಕ ವರ್ಣವಿನ್ಯಾಸ
(cryptic) colouration (ಪ್ರಾ) ಗುಪ್ತಸಾಧಕ ವರ್ಣವಿನ್ಯಾಸ. ಕೆಲವು ಪ್ರಾಣಿಗಳು (ಉದಾ: ಊಸರವಳ್ಳಿ, ಕೆಲವು ಜಾತಿಯ ಚಿಟ್ಟೆಗಳು) ಬೇಟೆ ಪ್ರಾಣಿಗಳ ಕಣ್ಣು ತಪ್ಪಿಸಿ ರಕ್ಷಿಸಿಕೊಳ್ಳಲು ತಮ್ಮ ಶರೀರದ ಬಣ್ಣ ಬದಲಾಯಿಸಿಕೊಳ್ಳುವ ಕ್ರಿಯೆ
apatetic
ಅಭಿಕಾರಕ
(ರ) ರಾಸಾಯನಿಕ ವಿಶ್ಲೇಷಣೆಯಲ್ಲಿ ವಿಶಿಷ್ಟ ಕ್ರಿಯೆ ಉಂಟುಮಾಡಲು ಉಪಯೋಗಿಸುವ ವಸ್ತು ಅಥವಾ ದ್ರಾವಣ. ಕಾರಕ
reagent
ಅಭಿಗಮನ
(ವೈ) ನಿರ್ದಿಷ್ಟ ನೆಲೆಯತ್ತ ದ್ರವದ ಹರಿವು. ಉದಾ: ತಲೆಗೆ ರಕ್ತದ ಅಭಿಗಮನ