logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಪೋಹನ
(ವೈ) ದ್ರಾವಣದಲ್ಲಿ ಸಣ್ಣ ಹಾಗೂ ದೊಡ್ಡ ಗಾತ್ರದ ಅಣುಗಳಿರುತ್ತವೆ. ಇವನ್ನು ಕ್ರಮವಾಗಿ ಹರಳು ರೂಪಿಗಳು ಹಾಗೂ ಕಲಿಲವೆಂದು ಕರೆಯುತ್ತೇವೆ. ಇವನ್ನು ಬೇರ್ಪಡಿಸಲು ದ್ರಾವಣವನ್ನು ಒಂದು ಅರೆಪೊರೆಯ ಮೂಲಕ ಹಾಯಿಸಬೇಕು. ವ್ಯಾಪ್ಯ ಪೊರೆಯ ಮತ್ತೊಂದು ಬದಿಯಲ್ಲಿ ನೀರಿರುತ್ತದೆ. ಸಣ್ಣ ಗಾತ್ರದ ಹರಳು ರೂಪಿಗಳು ಅರೆ ವ್ಯಾಪ್ಯ ಪೊರೆಯ ಮೂಲಕ ಹಾದು ನೀರನ್ನು ಸೇರುತ್ತವೆ. ದ್ರಾವಣದಲ್ಲಿ ಕಲಿಲ ಮಾತ್ರ ಉಳಿಯುತ್ತದೆ. ಮೂತ್ರಪಿಂಡ ವೈಫಲ್ಯವಾದಾಗ ಈ ತಂತ್ರವನ್ನು ಉಪಯೋಗಿಸಿ ಮೂತ್ರದಲ್ಲಿರುವ ಕಲ್ಮಶವನ್ನು ನಿವಾರಿಸಬಹುದು. ಪಾರಪೃಥಕ್ಕರಣ
dialysis

ಅಪ್ಪು ಬೇರು
(ಸ) ಬಂದಿಳಿಕೆ/ಬಳ್ಳಿ ತನ್ನ ಆಧಾರವನ್ನು ಹಿಡಿದು ನಿಲ್ಲಲು ನೆರವಾಗುವ ಚಾಚು ಕುಡಿ
clinging root

ಅಪ್ಪುಸಸ್ಯ
(ಸ) ಬೇರೊಂದು ಗಿಡದ ಮೇಲೆ ಆಶ್ರಯಕ್ಕಾಗಿ ಮಾತ್ರ ಬೆಳೆಯುವ (ಸಾಮಾನ್ಯವಾಗಿ ಅದರಿಂದ ಪೋಷಣೆ ಪಡೆಯದ) ಸಸ್ಯ. ಅಧಿಪಾದಪ
epiphyte

ಅಪ್ರಕಟ
(ಗ) y ಎಂಬ ಚರವು x ಎಂಬ ಸ್ವತಂತ್ರ ಚರದ ಫಲನ (ಉತ್ಪನ್ನ) ಆಗಿದ್ದು y ಮತ್ತು x ಚರಗಳ ಸಂಬಂಧವನ್ನು ಉದಾಹರಣೆಗೆ, x2+xy+y2 = 0 ಎಂಬಂತಹ ಒಂದು ಸಮೀಕರಣದ ಮೂಲಕ ಸೂಚಿಸಿದಾಗ ಇಲ್ಲಿ y ಚರವು ‘ಅಪ್ರಕಟ’ವಾಗಿ ನಮೂದಿತವಾಗಿರುತ್ತದೆ
implicit

ಅಪ್ರಭಾವಿ
(ಜೀ) ಮೆಂಡಲ್ ತತ್ತ್ವಾನುಸಾರ ಸಂಕರ ಸಂತಾನಗಳಲ್ಲಿ ಮೂಲ ತಂದೆ ತಾಯಿಗಳಲ್ಲಿ ಒಬ್ಬರಿಂದ ಬಂದು ಮೊದಲ ಪೀಳಿಗೆಯಲ್ಲಿ ಕಾಣಿಸಿಕೊಳ್ಳದೆ ಸುಪ್ತವಾಗಿದ್ದು ಎರಡನೆಯ ಅಥವಾ ಮುಂದಿನ ಪೀಳಿಗೆಗಳಲ್ಲಿ ಕಾಣಿಸಿಕೊಳ್ಳುವ ಗುಣ
recessive

ಅಪ್ರಾಕ್ಸಿಯ
(ವೈ) ೧. ಇದು ಇಚ್ಛಾ ಚಲನೆಗೆ ಸಂಬಂಧಿಸಿದ ವೈಪರೀತ್ಯ. ಸ್ನಾಯುಗಳು ಸಶಕ್ತವಾಗಿ ಸಂವೇದನೆ ಹಾಗೂ ಸೂಕ್ಷ್ಮ ಚಲನ ಸಾಮರ್ಥ್ಯ ಪಡೆದಿದ್ದರೂ ಇಚ್ಛಾ ಚಲನೆಯನ್ನು ಮಾಡಲು ಆಗದೇ ಇರುವಂತಹ ಸ್ಥಿತಿ. ೨. ಮನೋಚಲನ ವೈಪರೀತ್ಯ. ಒಂದು ವಸ್ತುವಿನ ಹೆಸರು, ಉಪಯೋಗ ತಿಳಿದಿದ್ದು ಅದನ್ನು ವರ್ಣಿಸುವ ಸಾಮರ್ಥ್ಯವಿದ್ದರೂ ಅದನ್ನು ಬಳಸಲಾಗದ ಸ್ಥಿತಿ
apraxia

ಅಪ್ಲೈಟ್
(ಭೂವಿ) ಸೂಕ್ಷ್ಮ ಆಂತರಿಕ ರಚನೆ ಮತ್ತು ಲಘು ವರ್ಣ ಇರುವ ಸಣ್ಣ ಕಣಗಳ ಗ್ರಾನೈಟ್
aplite

ಅಪ್ಸರೆ ಕೀಟ
(ಪ್ರಾ) ಮೊಟ್ಟೆಯಿಂದ ಹೊರಕ್ಕೆ ಬಂದು ಅಪೂರ್ಣ ರೂಪಾಂತರ ಹೊಂದಿ, ಕೊನೆಯ ಸಲ ಪೊರೆ ಬಿಟ್ಟು ಪ್ರಾಯಕ್ಕೆ ಬರುವ ಕೀಟದ ಮರಿ. ಮಿಡತೆ, ತಿಗಣೆ, ಕೊಡತಿಹುಳು ಮುಂತಾದ ಕೀಟಗಳ ಮರಿಗಳು. ಶರೀರ ರಚನೆ ಪ್ರಾಯಾವಸ್ಥೆ ಯಲ್ಲಿದ್ದರೂ ರೆಕ್ಕೆ ಮತ್ತು ಬಾಹ್ಯ ಜನನೇಂದ್ರಿಯ ಪೂರ್ತಿ ಬೆಳೆದಿರು ವುದಿಲ್ಲ. ಅಪ್ಸರೆ ಕೀಟಕ್ಕೆ ಪೊರೆಹುಳುವಿನ ಘಟ್ಟ ಇರುವುದಿಲ್ಲ. ಅದು ನೇರವಾಗಿ ಪ್ರಾಯದ ಹುಳುವಾಗಿ ಬೆಳೆಯುತ್ತದೆ
nymph

ಅಪ್ಸರೆ ಮೀನು
(ಪ್ರಾ) ಮನೆಯಲ್ಲಿ ಇರುವ ಮತ್ಸ್ಯಾಗಾರಗಳಲ್ಲಿ ಅಲಂಕಾರಕ್ಕಾಗಿ ಸಾಕುವ ಸುಂದರವಾದ ವರ್ಣಮಯ ಮೀನು
angel fish

ಅಫಲಿ
(ಸ) ಗೊಡ್ಡು ಸಸ್ಯ. ಹಣ್ಣು ಬಿಡದ ಮರ
acarpous


logo