(ಭೌ) ಯಾವುದೇ ಬಗೆಯ ಆಪಾತ ಅಲೆಯನ್ನು (ಉದಾ: ಬೆಳಕು, ಶಬ್ದ ಅಥವಾ ವಿದ್ಯುತ್ತಿನ ಅಲೆ) ಹೀರಿಕೊಂಡು ತನ್ನ ಮೂಲಕ ಸಾಗಗೊಡದ ಕಾಯದ ಗುಣ
opacity
ಅಪಾರಣೀಯ
(ಭೌ) ಉಷ್ಣವು ಹೊರಕ್ಕಾಗಲೀ ಒಳಕ್ಕಾಗಲೀ ಹರಿಯದಿರುವ, ಉಷ್ಣದಲ್ಲಿ ನಷ್ಟ ಅಥವಾ ಲಾಭ ಆಗದಿರುವ ಸ್ಥಿತಿ. ಸ್ಥಿರೋಷ್ಣ
adiabatic
ಅಪಾರಣೀಯ ಬದಲಾವಣೆ
(ಭೌ) ಆವರಣಕ್ಕೂ ಬಾಹ್ಯವಲಯಕ್ಕೂ ನಡುವೆ ಉಷ್ಣ ವಿನಿಮಯ ವಾಗದೆ ಆ ಆವರಣದೊಳಗಿನ ಘನಗಾತ್ರ ಮತ್ತು ಒತ್ತಡ ಎರಡರಲ್ಲಿಯೂ ಉಂಟಾಗುವ ವ್ಯತ್ಯಾಸ
adiabatic change
ಅಪಾರಣೀಯ ವಿಕಾಂತೀಕರಣ
(ಭೌ) ಪೊಟ್ಯಾಸಿಯಂ ಕ್ರೋಮ್ ಆಲಮ್‌ನಂಥ ಪಾರ ಕಾಂತೀಯ ಲವಣವೊಂದನ್ನು ಸುಮಾರು ನಿರಪೇಕ್ಷ ಶೂನ್ಯ ಉಷ್ಣತೆಗೆ ತಂಪಾಗಿಸುವ ಒಂದು ತಂತ್ರ. ಲವಣವನ್ನು ವಿದ್ಯುತ್ ಕಾಂತವೊಂದರ ಧ್ರುವಗಳ ನಡುವೆ ಇರಿಸಲಾಗುತ್ತದೆ. ಕಾಂತೀಕರಣದ ಸಮಯದಲ್ಲಿ ಉಂಟಾಗುವ ಉಷ್ಣವನ್ನು ದ್ರವ ಹೀಲಿಯಂ ಉಪಯೋಗಿಸಿ ತೊಡೆದುಹಾಕಲಾಗುವುದು. ಅನಂತರ ಆ ಲವಣವನ್ನು ಸುತ್ತಮುತ್ತಲಿನಿಂದ ಔಷ್ಣೀಯವಾಗಿ ಪ್ರತ್ಯೇಕಿಸಿ ಕ್ಷೇತ್ರದ ಸ್ವಿಚ್ ಆರಿಸಲಾಗುವುದು. ಲವಣವನ್ನು ಅಪಾರಣೀಯವಾಗಿ ವಿಕಾಂತೀ ಕರಿಸಲಾಗುವುದು. ಆಗ ಅದರ ಉಷ್ಣತೆ ಇಳಿಯುತ್ತದೆ, ಏಕೆಂದರೆ, ವಿಕಾಂತೀಕರಣ ಸ್ಥಿತಿಯು ಅಷ್ಟು ಸುವ್ಯವಸ್ಥಿತವಲ್ಲದ್ದರಿಂದ ಅದಕ್ಕೆ ಕಾಂತೀಕರಣ ಸ್ಥಿತಿಗಿಂತ ಹೆಚ್ಚಿನ ಉಷ್ಣತೆ ಅವಶ್ಯ. ಅದಕ್ಕೆ ಈ ಹೆಚ್ಚಿನ ಉಷ್ಣತೆ ವಸ್ತುವಿನ ಆಂತರಿಕ ಅಥವಾ ಔಷ್ಣಿಕ ಶಕ್ತಿಯಿಂದಷ್ಟೆ ಬರಬೇಕಷ್ಟೆ. ಹಾಗಾಗಿ ವಸ್ತುವಿನ ಉಷ್ಣತೆ ಇಳಿಯುತ್ತದೆ. ಈ ರೀತಿ 10-2K ಉಷ್ಣತೆಗಿಂತ ಕಡಿಮೆ ಉಷ್ಣತೆಯನ್ನು ಪಡೆಯಬಹುದು.
adiabatic demagnetisation
ಅಪಾಸ್ಟ್ರಫಿ
(ಸ) ಉಜ್ಜ್ವಲ ಪ್ರಕಾಶ ಬಿದ್ದಾಗ ಹರಿದ್ರೇಣುಗಳು ಪತ್ರಕೋಶಗಳ ಪಾರ್ಶ್ವಭಿತ್ತಿಗಳಲ್ಲಿ ಸಾಲು ಗೂಡುವುದು. (ಸಾ) ಷಷ್ಠೀ ವಿಭಕ್ತಿ ಚಿಹ್ನೆ. ಅಕ್ಷರಗಳ ಅಥವಾ ಸಂಖ್ಯೆಗಳ ಲೋಪಚಿಹ್ನೆ. ಉದಾ: ’೦೬=೨೦೦೬
apostrophe
ಅಪುಟಿತ
(ಭೌ) ನೋಡಿ: ಅಸ್ಥಿತಿಸ್ಥಾಪಕ
inelastic
ಅಪುಟಿತ ಸಂಘಟ್ಟನೆ
(ಭೌ) ಸಂಘಟ್ಟನೆಯ ಅನಂತರ ಕಣಗಳ ಒಟ್ಟು ಚಲನಶಕ್ತಿ ಅದಕ್ಕೆ ಮುನ್ನ ಇದ್ದಷ್ಟೇ ಇರದಂಥ ಸಂಘಟ್ಟನೆ. ಚಲಿಸುತ್ತಿರುವ ಎರಡು ಕಾಯಗಳು ಡಿಕ್ಕಿ ಹೊಡೆದಾಗ ಅವುಗಳ ಚಲನಶಕ್ತಿಯಲ್ಲಿ ಸ್ವಲ್ಪಭಾಗ ಯಾವುದಾದರೂ ರೂಪದ ಶಕ್ತಿಯಾಗಿ ಪರಿವರ್ತಿತವಾಗುವಂಥ ಸಂಘಟ್ಟನೆ
inelastic collision
ಅಪೊಪ್ರೋಟಿನ್
(ಜೀ) ಅನುವರ್ತಿ ಪ್ರೋಟೀನ್ ನಲ್ಲಿಯ ಪ್ರೋಟೀನ್ ಘಟಕ; ಹೀಮೊಗ್ಲಾಬಿನ್‌ನಲ್ಲಿಯ ಗ್ಲಾಬಿನ್
apoprotein
ಅಪೊಪ್ಲೆಕ್ಸಿ
(ವೈ) ೧. ಮಿದುಳಿನ ರಕ್ತನಾಳದಲ್ಲಿ ಉಂಟಾಗುವ ರಕ್ತಸ್ರಾವ, ರಕ್ತಗರಣೆ, ರಕ್ತನಾಳ ಸೆಡೆತ ಇತ್ಯಾದಿ ಕಾರಣಗಳಿಂದಾಗಿ ರಕ್ತಪ್ರವಾಹದಲ್ಲಿ ಅಡಚಣೆ ಉಂಟಾಗಿ, ಮಿದುಳಿನ ಜೀವಕೋಶ ಗಳಿಗೆ ಆಕ್ಸಿಜನ್, ಆಹಾರಾಂಶಗಳ ಕೊರತೆಯುಂಟಾಗಿ ನಿಷ್ಕ್ರಿಯ ವಾಗುವಿಕೆ. ಇದರ ಫಲವಾಗಿ ವಿವಿಧ ಪ್ರಮಾಣಗಳಲ್ಲಿ ಪಾರ್ಶ್ವ ವಾಯು ಉಂಟಾಗಬಹುದು. ೨. ಯಾವುದಾದರೂ ಅಂಗ ಅಥವಾ ಅವಯವದಲ್ಲಿ ರಕ್ತಸ್ರಾವವಾಗಿ, ಊತಕದಲ್ಲಿ ರಕ್ತ ಹರಿಯುವಿಕೆ. ಲಕ್ವ. ಪಾರ್ಶ್ವವಾಯು
apoplexy
ಅಪೊಮಾರ್ಫೀನ್
(ವೈ) ವಾಂತಿಕಾರಕ ಸಸ್ಯ ಕ್ಷಾರ. ಮಾರ್ಫೀನ್‌ನ ನಿರ್ಜಲೀಕರಣದಿಂದ ಪಡೆದ ಮಾರ್ಫೀನ್ ಶ್ರೇಣಿಯ ಒಂದು ಆಲ್ಕಲಾಯ್ಡ್ (ಸಸ್ಯಕ್ಷಾರ). ಇದು ನಿದ್ರಾಜನಕವಲ್ಲ, ಆದರೆ ಕಫ ವಿಸರ್ಜಕ ಹಾಗೂ ವಮನಕಾರಿ