logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಪಸೆಣಬು
(ಸ) ನಾರು ಮತ್ತು ಹಸುರೆಲೆ ಗೊಬ್ಬರ ಕ್ಕಾಗಿ ಬೆಳೆಸುವ ಸಸ್ಯ. ಕ್ರೋಟಲೇರಿಯ ಜೆನ್ಸಿಯ ವೈಜ್ಞಾನಿಕ ನಾಮ. ನಾರಿನ ಉತ್ಪನ್ನದಲ್ಲಿ ಮೊದಲನೆಯದು ಸೆಣಬು, ಎರಡನೆಯದು ಅಪಸೆಣಬು. ಬತ್ತದ ಬಿತ್ತನೆಗೆ ಮುಂಚೆ ಇವನ್ನು ಬೆಳೆಸಿ ಉತ್ತುಬಿಡುವುದರಿಂದ ಭೂಮಿ ಸಾರವತ್ತಾಗಿ ಬೆಳೆಗೆ ಅನುಕೂಲವಾಗುತ್ತದೆ. ಬೇರು ಸಹಿತ ಕಿತ್ತು, ಜಜ್ಜಿ ನಾರು ತಯಾರಿಸುತ್ತಾರೆ
sunn hemp

ಅಪಸ್ಫೋಟನ
(ತಂ) ೧. ಪ್ರತ್ಯಾಗಮನ (ರೆಸಿಪ್ರೊಕೇಟಿಂಗ್ -ಚಲಿಸುವ ಕೊಂತಗಳುಳ್ಳ) ಎಂಜಿನ್‌ನಲ್ಲಿ ಶಿಥಿಲಗೊಂಡ ಹೊರಳುಗಳು ನಿಯತಕಾಲಿಕವಾಗಿ ಹೊರಡಿಸುವ ಲಟಲಟ ಸದ್ದು. ೨. ಪೆಟ್ರೋಲ್ ಎಂಜಿನ್‌ನಲ್ಲಿ ವಿಸ್ಫೋಟನೆಯ ಕಾರಣವಾಗಿ ಅಥವಾ ಡೀಸೆಲ್ ಎಂಜಿನ್‌ನಲ್ಲಿ ದಹನದಿಂದಾಗಿ ಒತ್ತಡದಲ್ಲಿ ತಲೆದೋರುವ ಕ್ಷಿಪ್ರವೃದ್ಧಿಯ ಕಾರಣವಾಗಿ ಅನುನಾದಿಸುವ ವಿಶಿಷ್ಟ ಲೋಹೀಯ ಸದ್ದು. ನೋಡಿ: ಬಡಿತ
knock

ಅಪಸ್ಮಾರ
(ವೈ) ಇದು ಮಿದುಳಿಗೆ ಸಂಬಂಧಪಟ್ಟ ನರಗಳ ರೋಗ. ಮಿದುಳಿನ ವಿದ್ಯುತ್ ಚಟುವಟಿಕೆಯಲ್ಲಿ ಹಠಾತ್ ಏರುಪೇರಾದಾಗ, ಮಿದುಳಿನ ಕಾರ್ಯಗಳೂ ಏರುಪೇರಾಗಿ ಸಾಮಾನ್ಯವಾಗಿ ಪ್ರe ತಪ್ಪುತ್ತದೆ. ವ್ಯಕ್ತಿ ಕೆಳಕ್ಕೆ ಬಿದ್ದು ಸೆಳವಿಗೆ ಒಳಗಾಗಬಹುದು. ಈ ವೈಪರೀತ್ಯ ಅಲ್ಪಾವಧಿಯದು. ಅನಂತರ ವ್ಯಕ್ತಿ ತಂತಾನೆ ಎಚ್ಚರಗೊಳ್ಳುತ್ತಾನೆ. ಬೀಳುರೋಗ, ಮೂರ್ಛೆ ರೋಗ
epilepsy

ಅಪಾಕ್ಷೀಯ
(ಪ್ರಾ,ಭೌ,ಸ) ಅಕ್ಷದಿಂದ ಹೊರಚಾಚಿರುವ
abaxial

ಅಪಾಕ್ಷೀಯ
(ಪ್ರಾ) ಉಭಯ ಪಕ್ಷ ಸಮಮಿತಿ ಇರುವ ಪ್ರಾಣಿಗಳಲ್ಲಿ ಸಾಧಾರಣವಾಗಿ ನೆಲಕ್ಕೆ ತಾಗಿರದ ದೇಹ ಭಾಗ. ಬೆನ್ನು (ವೈ) ಬೆನ್ನು, ಪೃಷ್ಠೀಯ
dorsal

ಅಪಾಕ್ಷೀಯ ರಕ್ತನಾಳ
(ಪ್ರಾ) ಮಾನವ ಶರೀರದ ಬೆನ್ನಿನ ಭಾಗಕ್ಕೆ ರಕ್ತ ಹರಿಸುವ ನಾಳ
dorsalis

ಅಪಾದಿ
(ಪ್ರಾ) ಪಾದವಿಲ್ಲದ. ಪಾದರಹಿತ. ಕಾಲುಗಳಿಲ್ಲದ ಅಥವಾ ಕಾಲು ಬೆಳೆಯದ ಪ್ರಾಣಿಗಳು (ಉದಾ: ಹಾವು) ಮತ್ತು ಈಜುರೆಕ್ಕೆಗಳಿಲ್ಲದ ಅಥವಾ ಈಜುರೆಕ್ಕೆಗಳು ಬೆಳೆಯದ ಮೀನುಗಳು (ಉದಾ: ಹಾವು ಮೀನು)
apod

ಅಪಾನವಾಯು
(ವೈ) ಜಠರ ಅಥವಾ ಕರುಳಿನಲ್ಲಿ ವಾಯು ತುಂಬಿರುವ ಸ್ಥಿತಿ. ಇದು ಸಾಮಾನ್ಯವಾಗಿ ಆಸನದಿಂದ ಹೊರಬೀಳುತ್ತದೆ. ಪ್ರತಿಯೊಬ್ಬರೂ ದಿನಕ್ಕೆ ೧೨ರಿಂದ ನೂರಾರು ಸಲ ಒಟ್ಟು ೪೦೦-೧೨೦೦ ಘನ ಸೆಂ.ಮೀ. ಅಪಾನವಾಯುವನ್ನು ಹೊರದೂಡುತ್ತಾರೆ. ದೊಡ್ಡಕರುಳಿನಲ್ಲಿ ಇರುವ ವಾಯುವಿನಲ್ಲಿ ಹೈಡ್ರೊಜನ್, ಮೀಥೇನ್, ಸ್ಕಟೋಲ್, ಇಂಡೋಲ್, ಕಾರ್ಬನ್ ಡೈಆಕ್ಸೈಡ್ ಹಾಗೂ ಅಲ್ಪ ಪ್ರಮಾಣದ ಆಕ್ಸಿಜನ್ ಮತ್ತು ನೈಟ್ರೋಜನ್‌ಗಳಿರುತ್ತವೆ. ಇವುಗಳಲ್ಲಿ ಕೆಲವು ಹೊತ್ತಿಕೊಂಡು ಉರಿಯಬಲ್ಲವಾದ ಕಾರಣ ಜಠರದ ಅಥವಾ ಕರುಳಿನ ಶಸ್ತ್ರಕ್ರಿಯೆ ಮಾಡುವ ಮುನ್ನ ಕರುಳನ್ನು ಸ್ವಚ್ಛಗೊಳಿಸುವುದು ಅತಿಮುಖ್ಯವಾಗುತ್ತದೆ
flatulence

ಅಪಾಯಸೂಚಕ
(ಪ್ರಾ) ಕೆಲವು ಪ್ರಾಣಿಗಳು ತಮ್ಮ ರಕ್ಷಣೆಗಾಗಿ ಶತ್ರುಪ್ರಾಣಿಗಳು ಸಮೀಪ ಬಾರದಂತೆ ಮೈಬಣ್ಣ ಅಥವಾ ಮೈಗುರುತುಗಳಿಂದ ಅವುಗಳಿಗೆ ಎಚ್ಚರಿಕೆ ನೀಡುವುದು
sematic

ಅಪಾರಕ
(ಭೌ) ನಿರ್ದಿಷ್ಟ ಅಲೆಯುದ್ದದ ಕಿರಣಗಳನ್ನು ಸಂಪೂರ್ಣವಾಗಿ ಹೀರಿಕೊಂಡು ತನ್ನ ಮೂಲಕ ಹೋಗಗೊಡ ದಂಥ ಗುಣವುಳ್ಳ ವಸ್ತು. ಉದಾ: ಮರದ ತುಂಡು ಗೋಚರ ಬೆಳಕಿಗೆ ಅಪಾರಕ, ಆದರೆ ಅವಕೆಂಪು ಕಿರಣಗಳಿಗೆ ಸ್ವಲ್ಪಮಟ್ಟಿಗೆ ಪಾರಕ ಮತ್ತು ಎಕ್ಸ್-ಕಿರಣಗಳಿಗೆ ಸಂಪೂರ್ಣವಾಗಿ ಪಾರಕ
opaque


logo