logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಪವರ್ತಿಸು
(ಗ) ಯಾವುದೇ ಸಂಖ್ಯೆಯನ್ನು ಅದರ ಅಪವರ್ತನಗಳಾಗಿ ಒಡೆ. ವಿಭಜಿಸು
factorise

ಅಪವರ್ತ್ಯ
(ಗ) ದತ್ತ ಸಂಖ್ಯೆ ಅಥವಾ ಬಹುಪದಿ ಅಪವರ್ತನವಾಗಿರುವ ಯಾವುದೇ ಸಂಖ್ಯೆ ಅಥವಾ ಬಹುಪದಿ. ಉದಾ : ೨೫ ಸಂಖ್ಯೆ ೫ರ ಅಪವರ್ತ್ಯ. ಗುಣಿತ
multiple

ಅಪವಹನ
(ಭೂವಿ) ಒಣಗಿದ ಮತ್ತು ಸಡಿಲವಾದ ಸಾಮಗ್ರಿಯನ್ನು, ವಿಶೇಷವಾಗಿ ಮಣ್ಣು ಅಥವಾ ಹೂಳನ್ನು, ಬೀಸುಗಾಳಿ ದೂರಕ್ಕೆ ತೂರುವುದು ಹಾಗೂ ಸಾಗಿಸುವುದು
deflation

ಅಪವಾಹಿ
(ವೈ) ಕೇಂದ್ರ ನರಮಂಡಲದಿಂದ ಹೊರಕ್ಕೆ ಒಯ್ಯುವುದು (ಪ್ರಾ) ಮೀನುಗಳಲ್ಲಿ ಕಿವಿರಿನಿಂದ ರಕ್ತವನ್ನು ಹೊರಕ್ಕೆ ಸಾಗಿಸುವುದು. ನೋಡಿ : ಅಭಿವಾಹಿ
efferent

ಅಪಶೋಷಣೆ
(ರ) ಘನ ಅಥವಾ ದ್ರವ ಪದಾರ್ಥವು ಅನಿಲವನ್ನು ಅಥವಾ ಘನ ಪದಾರ್ಥವು ದ್ರವ ಪದಾರ್ಥವನ್ನು ಹೀರಿಕೊಳ್ಳುವುದು. ಅಧಿಶೋಷಣೆಯಲ್ಲೂ ಇದೇ ರೀತಿಯ ಹೀರಿಕೆಯಾಗುವುದು, ಆದರೆ ಅದರಲ್ಲಿ, ಹೀರಲ್ಪಡುವ ಪದಾರ್ಥ ಹೀರುವ ಪದಾರ್ಥದ ಮೇಲ್ಮೈಯನ್ನಷ್ಟೆ ಆವರಿಸುತ್ತದೆ. ಅಪಶೋಷಣೆಯಲ್ಲಾದರೋ ಹೀರಲ್ಪಟ್ಟ ಪದಾರ್ಥವು ಹೀರುವ ಪದಾರ್ಥದ ಆದ್ಯಂತ ಪಸರಿಸುತ್ತದೆ. (ಭೌ) ವಿದ್ಯುತ್ಕಾಂತೀಯ ವಿಕಿರಣ ಅಥವಾ ಧ್ವನಿ, ಮಾಧ್ಯಮವೊಂದರ ಮೂಲಕ ಸಾಗಿ ಹೋಗುವಾಗ ಅವುಗಳ ಶಕ್ತಿ ತೀಕ್ಷ್ಣತೆ ಬದಲುವುದು. ಉದಾ: ಬೆಳಕಿನ ದೂಲ ಯಾವುದೇ ಮಾಧ್ಯಮದ ಮೂಲಕ ಸಾಗಿ ಹೋಗುವಾಗ ಮಾಧ್ಯಮದಲ್ಲಿಯ ಪರಮಾಣುಗಳು ಅಥವಾ ಅಣುಗಳು ಫೋಟಾನ್‌ಗಳನ್ನು ಹೀರಿಕೊಂಡು (ಇಲ್ಲವೇ ಬೆಳಕು ಚದರಿ) ಬೆಳಕಿನ ತೀಕ್ಷ್ಣತೆಯಲ್ಲಿ ನಷ್ಟವಾಗುವುದು. (ಜೀ) ಯಾವುದೇ ತರಲ ಅಥವಾ ವಿಲೀನಗೊಂಡ ವಸ್ತುವು ಕೋಶಪೊರೆಯ ಮೂಲಕ ಚಲಿಸುವುದು. ಉದಾ: ಪ್ರಾಣಿಗಳಲ್ಲಿ ಆಹಾರ ಸಾಮಗ್ರಿಯು ಅನ್ನನಾಳದ ಅಸ್ತರಿ ಕೋಶಗಳ ಮೂಲಕ ಪರಿಚಲನಾ ವ್ಯವಸ್ಥೆ ಯೊಳಕ್ಕೆ ಹೀರಲ್ಪಡುವುದು. ಸಸ್ಯಗಳಲ್ಲಿ ನೀರು ಅಥವಾ ಖನಿಜಯುತ ಲವಣಗಳು ಮಣ್ಣಿನಿಂದ ಬೇರುಗಳ ಮೂಲಕ ಹೀರಲ್ಪಡುವುದು
absorption

ಅಪಶ್ರುತಿ
(ಭೌ) ಪರಸ್ಪರ ಮೇಳನದಲ್ಲಿರದ ಎರಡು ಅಥವಾ ಹೆಚ್ಚು ವಾದ್ಯಗಳು ಶ್ರೋತೃವಿನಲ್ಲಿ ಉಂಟುಮಾಡುವ ಅಹಿತಕರ ಪರಿಣಾಮ
dissonance

ಅಪಸರಣ
(ಖ) ನೋಡಿ : ವಿಪಥನ
aberration

ಅಪಸರಣ ಶ್ರೇಣಿ
(ಗ) ಸಾಂತ ಪರಿಮಿತಿಗೆ ಅಭಿಸರಿಸದೆ ಅನಂತ ಮೌಲ್ಯಗಾಮಿಯಾಗುವ ಶ್ರೇಣಿ. 1+2+3+4+.... ಹೀಗಲ್ಲದೆ ಸಾಂತ ಪರಿಮಿತಿ ೨ಕ್ಕೆ ಅಭಿಸರಿಸುತ್ತದೆ
divergent series

ಅಪಸರಣೆ
(ಗ) ಸರಳರೇಖೆಗಳು, ಕಿರಣಗಳು ಮುಂತಾದವು ದೂರ ದೂರ ಸರಿಯುತ್ತ ಹೋಗುವುದು. ೧. a1, a2,...... an... ಅನಂತ ಶ್ರೇಢಿಯಲ್ಲಿ n ಅನಂತ ಗಾಮಿಯಾದಂತೆ an ಕೂಡ ಅನಂತಗಾಮಿಯಾದರೆ ಇದೊಂದು ಅಪಸರಣ ಶ್ರೇಢಿ. ಇದನ್ನು ನಿರೂಪಿಸುವ ಸಂಪ್ರದಾಯ: ೨. a1+a2+.....an+... ಎಂಬ ಅನಂತ ಶ್ರೇಣಿಯಲ್ಲಿ ಅನಂತ ಗಾಮಿಯಾದಂತೆ ಈ ಮೊತ್ತವೂ ಅನಂತಗಾಮಿಯಾದರೆ ಇದೊಂದು ಅಪಸರಣ ಶ್ರೇಣಿ ೩. a1, a2.....an...... ಎಂಬ ಅನಂತಗುಣಲಬ್ಧದಲ್ಲಿ n ಅನಂತಗಾಮಿಯಾದಂತೆ ಈ ಲಬ್ಧವೂ ಅನಂತಗಾಮಿಯಾದರೆ ಇದೊಂದು ಅಪಸರಣ ಗುಣಲಬ್ಧ ನೋಡಿ : ಅಭಿಸರಣೆ
divergence

ಅಪಸಾಮಾನ್ಯ
(ರ) ಯಾವುದೊಂದು ಪರಿಮಾಣ ನಿರೀಕ್ಷಿತ ಬೆಲೆಗಿಂತ ಭಿನ್ನ ಬೆಲೆಯನ್ನು ಪಡೆಯುವುದು. ಉದಾ: ಅಪಸಾಮಾನ್ಯ ಅಣುತೂಕ, ಅಪಸಾಮಾನ್ಯ ಕುದಿಬಿಂದು ಇತ್ಯಾದಿ. (ಮ) ಮಾನಸಿಕ ಸ್ಥಿತಿಯಲ್ಲಿ ಏರುಪೇರು
abnormal


logo