(ಭೌ) ಯಾವುದೇ ವಸ್ತುವಿನ ಮೇಲ್ಮೈಯ ಒಂದು ಪಕ್ಕದ ಸಾಮಗ್ರಿ ಇನ್ನೊಂದು ಪಕ್ಕದ ಸಾಮಗ್ರಿಯನ್ನು ಸಮಾಂತರವಾಗಿರುವ ಬಲದೊಂದಿಗೆ ತಳ್ಳುವಂಥ ಪೀಡನ. ವಪನಪೀಡನ
shearing stress
ಅಪರೂಪಣ ಬಲ
(ಭೌ) ಸಮತಲಕ್ಕೆ ಲಂಬ ವಾಗಿರದೆ, ಕರ್ಷಕ ಅಥವಾ ಸಂಪೀಡಕ ಬಲದಂತೆ ಅದಕ್ಕೆ ಸಮಾಂತರವಾಗಿ ವರ್ತಿಸುವ ಬಲ. ವಪನಬಲ
shearing force
ಅಪರ್ಣಿ
(ಸ) ಎಲೆ ಇರದ. ಪತ್ರ ರಹಿತ
aphyllous
ಅಪರ್ಯಾಪ್ತತೆ
(ರ) ಆರ್ಗ್ಯಾನಿಕ್ ಸಂಯುಕ್ತ ವೊಂದರ ಸರಪಳಿ ಅಥವಾ ಬಳೆಯ ಪರಮಾಣವಿಕಬಂಧಗಳು ಪೂರ್ತಿ ಸಂತೃಪ್ತವಾಗಿರದ ಒಂದು ಸ್ಥಿತಿ. ಸಾಧಾರಣವಾಗಿ ಕಾರ್ಬನ್‌ಗೆ ಅನ್ವಯ. ಇತರ ಬಳೆ ಅಥವಾ ಸರಪಳಿ ಪರಮಾಣು ಗಳನ್ನೂ ಒಳಗೊಳ್ಳಬಹುದು. ಅಪರ್ಯಾಪ್ತತೆಯ ಫಲಿತಾಂಶ ಸಾಧಾರಣವಾಗಿ ದ್ವಿಬಂಧ ಇಲ್ಲವೇ ತ್ರಿಬಂಧ. ಅಸಂತೃಪ್ತತೆ
unsaturation
ಅಪವರ್ತನ
(ಗ) ದತ್ತ ಸಂಖ್ಯೆ ಅಥವಾ ಬಹುಪದಿಯನ್ನು ನಿಶ್ಶೇಷವಾಗಿ ಭಾಗಿಸುವ ಸಂಖ್ಯೆ ಅಥವಾ ಬಹುಪದಿ. ೨,೩, ಸಂಖ್ಯೆಗಳು ೬ರ ಅಪವರ್ತನಗಳು; ೬ ಇವುಗಳ ಅಪವರ್ತ್ಯ. (x–1) ಮತ್ತು (x+1) ಇವು (x2–1)ರ ಅಪವರ್ತನಗಳು
factor
ಅಪವರ್ತನ ಪ್ರಮೇಯ
(ಗ) x=aಯು ಬಹುಪದಿ f(x)ನ ಒಂದು ಮೂಲವಾಗಿದ್ದರೆ ಆಗ (x-a)ಯು f(x)ನ ಒಂದು ಅಪವರ್ತನ. ಈ ಪ್ರಮೇಯವನ್ನು ಶೇಷ ಪ್ರಮೇಯದಿಂದ ನಿಗಮಿಸಿದೆ
factor theorem
ಅಪವರ್ತನೀಕರಣ
(ಗ) ದತ್ತ ಸಂಖ್ಯೆ/ಬಹುಪದಿ ಯನ್ನು ಅದರ ಅಪವರ್ತನಗಳ ಮೂಲಕ ಬರೆಯುವ ಪ್ರಕ್ರಿಯೆ. ಉದಾ: 28 = 7x4 = 14x2, x2–5x+6 = (x–3) (x –2)