(ಖ) ಆಕರ್ಷಣ ಕೇಂದ್ರವನ್ನು ಪರಿಭ್ರಮಿಸುವ ಕಾಯದ ದೀರ್ಘವೃತ್ತ ಕಕ್ಷೆಯಲ್ಲಿ ಅತಿ ದೂರದ (ಅಪ-) ಬಿಂದುವನ್ನೂ ಅತಿ ಸಮೀಪದ (ಪುರ-) ಬಿಂದುವನ್ನೂ ಜೋಡಿಸುವ ರೇಖೆ. ದೀರ್ಘವೃತ್ತದ ದೀರ್ಘಾಕ್ಷ. ನೀಚೋಚ್ಚರೇಖೆ
apse line
ಅಪಬ್ರಹ್ಮಾಂಡ
(ಖ) ಸೂರ್ಯನಲ್ಲಿ ಅಥವಾ ಬೇರೆ ನಕ್ಷತ್ರದಲ್ಲಿ ಆಕಾಶಗಂಗೆಯಿಂದ ಅತಿ ದೂರದ ಬಿಂದು
apogalacteum
ಅಪಭೂಮಿ
(ಖ) ಭೂಮಿಯನ್ನು ಪರಿಭ್ರಮಿಸುತ್ತಿರುವ ಕಾಯದ ಕಕ್ಷೆಯಲ್ಲಿ ಭೂಮಿಯಿಂದ ಅತಿ ದೂರದ ಬಿಂದು. ಭೂಮ್ಯುಚ್ಚ ಬಿಂದು
apogee
ಅಪಮೌಲ್ಯೀಕರಣ
(ಸಾ) ಒಂದು ದೇಶದ ನಾಣ್ಯದ ಶಾಸನಬದ್ಧ ವಿನಿಮಯ ದರವನ್ನು ಚಿನ್ನದ ಸಮಾನ ಬೆಲೆಗಿಂತ ಕಡಿಮೆ ಮಾಡುವುದು. ಅಪಮೌಲ್ಯನ
devaluation
ಅಪಯುಗ್ಮನ
(ಸ) ಯುಗ್ಮಕಗಳ ಸಂಮಿಲನವಾಗದೇ ಯುಗ್ಮಕವು ಸಸ್ಯದ ಕೋಶದಿಂದ ನೇರವಾಗಿ ಬೀಜಕ ಸಸ್ಯವಾಗಿ ಅಭಿವರ್ಧನೆಗೊಳ್ಳುವುದು. ಇದರಲ್ಲಿ ಕ್ರೋಮೊಸೋಮ್‌ಗಳು ಮಾತೃಯುಗ್ಮಕ ಸಸ್ಯದಲ್ಲಿರುವಷ್ಟೇ ಇರುವುವು
apogamy
ಅಪರಗಾಮಿ ಕಿರಣ
(ಭೌ) ವಿಸರ್ಜನಾ ನಳಿಗೆಯಲ್ಲಿ ಕ್ಯಾಥೋಡ್‌ನಿಂದ ದೂರ ಸರಿಯುವ, ಆದರೆ ಧನಾವೇಶಯುಕ್ತ ಪರಮಾಣುಗಳಿಂದ ರಚಿತವಾದ ಅಥವಾ ರಚಿತವಾದಂತೆ ತೋರುವ ಕಿರಣ
retrograde ray
ಅಪರವಿ
(ಖ) ಸೂರ್ಯನನ್ನು ಪರಿಭ್ರಮಿಸುವ ಕಾಯದ ಕಕ್ಷೆಯಲ್ಲಿ ಸೂರ್ಯನಿಂದ ಅತಿ ದೂರದ ಬಿಂದು. ಸೂರ್ಯೋಚ್ಚ ಬಿಂದು. ನೋಡಿ : ಪುರರವಿ
aphelion
ಅಪರಸಂಯುಗ್ಮನ
(ಜೀ) ಹಲವಾರು ಶಿಲೀಂಧ್ರ, ಶೈವಲ ಮತ್ತು ಮೇಲ್ವರ್ಗದ ಸಸ್ಯಗಳಲ್ಲಿ ನೇರ ಲೈಂಗಿಕ ಕ್ರಿಯೆಯ ಬದಲು ಲೈಂಗಿಕ ಕೋಶಗಳ/ನ್ಯೂಕ್ಲಿಯಸ್‌ಗಳ ದ್ವಿತೀಯಕ ಜೋಡಣೆ
deuterogamy
ಅಪರಾಹ್ನ
(ಖ) ನಡು ಹಗಲಿನಿಂದ ಸಂಜೆತನಕದ ಕಾಲ. ನೋಡಿ: ಪೂರ್ವಾಹ್ನ
afternoon
ಅಪರಿಪೂರ್ಣ
(ಸಾ) ರೂಪದಲ್ಲಿ ಅಥವಾ ಅಭಿವರ್ಧನೆ ಯಲ್ಲಿ ಪೂರ್ಣವಾಗಿಲ್ಲದಿರುವುದು, ಪೂರ್ಣ ಸಂಖ್ಯೆಯಲ್ಲಿ ಅಂಗ ಭಾಗಗಳಿಲ್ಲದಿರುವುದು