logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಪಘರ್ಷಕ
(ತಂ) ಸಾಣೆ ಹಿಡಿಯುವಾಗ ಬಳಸುವ ಒರಟು ಪದಾರ್ಥ
abrasive

ಅಪಘರ್ಷಣ
(ಭೂವಿ) ಗಾಳಿ, ನೀರು ಮುಂತಾದ ನೈಸರ್ಗಿಕ ಕರ್ತೃಗಳು ಉಜ್ಜಿ ಶಿಲಾ ಮೇಲ್ಮೈಗಳ ಮೇಲೆ ಉಂಟು ಮಾಡುವ ಸವೆತ
abrasion

ಅಪಚಂದ್ರ
(ಖ) ಚಂದ್ರನನ್ನು ಪರಿಭ್ರಮಿಸುವ ಕಾಯದ ಕಕ್ಷೆಯಲ್ಲಿ ಚಂದ್ರನಿಂದ ಅತಿ ದೂರದ ಬಿಂದು. ಚಂದ್ರೋಚ್ಚ ಬಿಂದು. ನೋಡಿ: ಪುರಚಂದ್ರ
apocynthion

ಅಪಚಯ
(ವೈ) ದೇಹದೊಳಗೆ ಸಂಕೀರ್ಣ ಅಣುಗಳು ಸರಳ ಅಣುಗಳಾಗಿ ಒಡೆಯಲ್ಪಟ್ಟು , ನಿರುಪಯುಕ್ತ ಪದಾರ್ಥಗಳು ಬೇರ್ಪಟ್ಟು, ಶಕ್ತಿ ಬಿಡುಗಡೆಯಾಗುವ ಒಂದು ಉಪಾಪಚಯಕ ಪ್ರಕ್ರಿಯೆ. ನೋಡಿ: ಉಪಚಯ, ಉಪಾಪಚಯ
catabolism

ಅಪಛೇದನ
(ವೈ) ಕತ್ತರಿಸಿ ತೆಗೆದುಹಾಕುವುದು. (ಸ) ಎರಡು ಭಾಗಗಳು ಪ್ರತ್ಯೇಕಗೊಳ್ಳುವ ನೈಸರ್ಗಿಕ ಕ್ರಿಯೆ. ಉದಾ: ಕೊಂಬೆಯಿಂದ ಹೂವು, ಹಣ್ಣು, ಎಲೆಗಳು ಸಹಜವಾಗಿ ಉದುರುವುದು
abscission

ಅಪಟೈಟ್
(ಭೂವಿ) ಕ್ಯಾಲ್ಸಿಯಮ್ ಫಾಸ್ಫೇಟ್; ಹೆಚ್ಚಿನ ಶಿಲೆಗಳಲ್ಲಿ ವಿವಿಧ ಬಗೆಗಳಲ್ಲಿರುವ ಖನಿಜ; ಇದರ ಜೊತೆಗೆ ಆಯಾ ಬಗೆ ಕುರಿತಂತೆ ಫ್ಲೂರೈಡ್, ಕ್ಲೋರೈಡ್, ಹೈಡ್ರಾಕ್ಸಿಲ್ ಅಥವಾ ಕಾರ್ಬೊನೇಟ್ ಅಯಾನ್‌ಗಳೂ ಇರುತ್ತವೆ. (ವೈ) ಮನುಷ್ಯನ, ಇತರ ಕಶೇರುಕಗಳ ಹಲ್ಲು ಮತ್ತು ಮೂಳೆಗಳ ಪ್ರಧಾನ ಘಟಕ
apatite

ಅಪದಲನ
(ಭೂವಿ) ಕಲ್ಲಿನಲ್ಲಿ ಸೀಳಿಕೆಯಾಗಿ ಖನಿಜ ಕಣಗಳು ರಾಸಾಯನಿಕ ಪರಿವರ್ತನೆಗೆ ಒಳಗಾಗದೆ ಸ್ಥಾನಾಂತರ ಗೊಂಡು ಪ್ರಕಟವಾಗುವ ಶಿಲಾವಿರೂಪಣೆ. ಶಿಲಾದಲನ
cataclasis

ಅಪದ್ಯುತಿ ಅನುವರ್ತನೆ
(ಸ) ದ್ಯುತಿ ಅನುವರ್ತನೆಗೆ ವಿರುದ್ಧ. ಸಸ್ಯದ ಭಾಗವು ಬೆಳಕಿನಿಂದ ದೂರಕ್ಕೆ ತಿರುಗುವುದು
aphototropism

ಅಪಪತ್ರಣ
(ಸ) ಮರದ ತೊಗಟೆಯ ಪದರಗಳು ಕಳಚುವುದು (ಭೂವಿ) ಶಿಲೆಗಳ ಮೇಲ್ಮೈ ವಾತಾವರಣದ ಪ್ರಭಾವಕ್ಕೆ ಸಿಕ್ಕಿ ಪದರ ಪದರವಾಗಿ ಒಡೆಯುವುದು. ಉಷ್ಣತೆಯ ಏರಿಳಿತಗಳು ಅತಿಯಾಗಿರುವ ಎಡೆಗಳಲ್ಲಿ ಇದು ಹೆಚ್ಚಾಗಿ ಸಂಭವಿ ಸುತ್ತದೆ. (ಸಾ) ಎಲುಬು, ಚರ್ಮ, ಖನಿಜ ಮೊದಲಾದವುಗಳ ಮೇಲ್ಮೈ ಪದರಪದರವಾಗಿ ಎದ್ದು ಬರುವುದು
exfoliation

ಅಪಪುರಗಳು
(ಖ) ಆಕರ್ಷಣ ಕೇಂದ್ರವನ್ನು ಪರಿಭ್ರಮಿಸುವ ಕಾಯದ ದೀರ್ಘವೃತ್ತ ಕಕ್ಷೆಯಲ್ಲಿ ಅತಿ ದೂರದ (ಅಪ-) ಮತ್ತು ಅತಿ ಸಮೀಪದ (ಪುರ-) ಬಿಂದುಗಳು. ಅಪಬಿಂದುವಿನಲ್ಲಿ ಆಕರ್ಷಣ ಬಲ ಕನಿಷ್ಠ, ಪುರ ಬಿಂದುವಿನಲ್ಲಿ ಗರಿಷ್ಠ
apses


logo