(ಭೂವಿ) ವ್ಯವಸ್ಥಾತ್ಮಕ ಶೋಧನೆ, ಭೌಗೋಳಿಕ ಸಮೀಕ್ಷಣೆ, ಭೂಭೌತಿಕ ಪ್ರತೀಕ್ಷಣೆ, ಕೊಳವಿ ಅಥವಾ ಸುರಂಗ ಕೊರೆಯುವುದು - ಇವುಗಳ ಮೂಲಕ ಖನಿಜ, ಅದಿರು, ಅನಿಲ, ತೈಲ ಅಥವಾ ಕಲ್ಲಿದ್ದಲಿನ ಆರ್ಥಿಕ ನಿಕ್ಷೇಪಗಳಿಗಾಗಿ ಶೋಧನೆ ನಡೆಸುವುದು (ಸಾ) ಸಮಸ್ಯೆ, ರಹಸ್ಯ, ಅeತ ಗುಣ ಮುಂತಾದವುಗಳ ಮೂಲವನ್ನು ಶೋಧಿಸುವುದಕ್ಕಾಗಿ ನಡೆಸುವ ಪ್ರಯತ್ನ. ಭಾರತಕ್ಕೆ ಯೂರೋಪ್‌ನಿಂದ ನವ ಜಲಮಾರ್ಗವನ್ನು ಅನ್ವೇಷಿಸಲು ಹೊರಟ ಕೊಲಂಬಸ್ ಅಮೆರಿಕ ಖಂಡವನ್ನು ಕಂಡುಹಿಡಿದ. ನೋಡಿ: ಉಪe, ಆವಿಷ್ಕಾರ, ಸಂಶೋಧನೆ
exploration
ಅಪಕರ್ಷಕ
(ಪ್ರಾ) ಅಂಗವನ್ನು ಅಥವಾ ಅದರ ಭಾಗವನ್ನು ಮಧ್ಯರೇಖೆಯಿಂದ ದೂರಕ್ಕೆ ಎಳೆಯುವ ಸ್ನಾಯು
abductor
ಅಪಕರ್ಷಣ
(ರ) ಪರಮಾಣು ಅಥವಾ ಅಯಾನ್‌ಗೆ ಎಲೆಕ್ಟ್ರಾನನ್ನು ಸೇರಿಸುವ ಯಾವುದೇ ಪ್ರಕ್ರಿಯೆ. ಸಾಮಾನ್ಯ ಅಪಕರ್ಷಣಗಳೆಂದರೆ: ಅಣುವಿನಿಂದ ಆಕ್ಸಿಜನ್ನನ್ನು ತೆಗೆದು ಹಾಕುವುದು ಅಥವಾ ಅಣುವಿಗೆ ಹೈಡ್ರೊಜನ್ನನ್ನು ಸೇರಿಸುವುದು; ಯಾವುದೇ ಲೋಹದ ಸಂಯುಕ್ತಗಳಿಂದ ಆ ಲೋಹವನ್ನು ವಿಮುಕ್ತಗೊಳಿಸುವುದು; ಪರಮಾಣುವಿನ ಅಥವಾ ಅಯಾನ್‌ನ ಧನಾತ್ಮಕ ವೇಲೆನ್ಸಿಯನ್ನು (ಸಂಯೋಗ ಶಕ್ತಿ) ಕುಗ್ಗಿಸುವುದು. ಈ ಪ್ರಕ್ರಿಯೆಯ ಜೊತೆಜೊತೆಗೆ ಯಾವತ್ತೂ ಉತ್ಕರ್ಷಣ ಪ್ರಕ್ರಿಯೆಯೂ ಜರಗುತ್ತದೆ
reduction
ಅಪಕರ್ಷಣಕಾರಕ
(ರ) ಯಾವುದೇ ಸಂಯುಕ್ತದಿಂದ ಆಕ್ಸಿಜನ್ನನ್ನು ತೆಗೆದುಹಾಕುವ ಅಥವಾ ಅದಕ್ಕೆ ಹೈಡ್ರೊಜನ್ನನ್ನು ಸೇರಿಸುವ ವಸ್ತು. ಈ ಪ್ರಕ್ರಿಯೆಯಲ್ಲಿ ವಸ್ತು ತಾನೇ ಉತ್ಕರ್ಷಣಗೊಳ್ಳುತ್ತದೆ. ಅಪಕರ್ಷಣಕಾರಕಗಳು ಕಡಿಮೆ ಉತ್ಕರ್ಷಣ ಸಂಖ್ಯೆಯ ಪರಮಾಣುಗಳು, ಅಂದರೆ ಇವುಗಳಲ್ಲಿ ಹೆಚ್ಚಿನ ಎಲೆಕ್ಟ್ರಾನ್‌ಗಳನ್ನು ಗಳಿಸಿಕೊಂಡಿರುವಂಥ ಪರಮಾಣುಗಳು ಇರುತ್ತವೆ. ಇತರ ವಸ್ತುಗಳನ್ನು ಅಪಕರ್ಷಿಸುವಾಗ ಈ ವಸ್ತು ತನ್ನ ಎಲೆಕ್ಟ್ರಾನ್‌ಗಳನ್ನು ಆ ವಸ್ತುಗಳಿಗೆ ದಾನ ಮಾಡುತ್ತದೆ
reducing agent
ಅಪಕರ್ಷಿಸು
(ರ) ರಾಸಾಯನಿಕ ಸಂಯುಕ್ತದಿಂದ ಆಕ್ಸಿಜನ್ ಇಲ್ಲವೇ ಇತರ ಎಲೆಕ್ಟ್ರೊ-ನೆಗಟೀವ್ (ವಿದ್ಯುದ್ರುಣೀಯ) ಧಾತುವನ್ನು ತೆಗೆಯುವುದು ಇಲ್ಲವೇ ಎಲೆಕ್ಟ್ರಾನ್‌ಅನ್ನು ಸೇರ್ಪಡೆ ಮಾಡುವುದು
reduce
ಅಪಕೇಂದ್ರ
(ಖ) ಕಾಯದ ಕಕ್ಷೆಯಲ್ಲಿ ಆಕರ್ಷಣ ಕೇಂದ್ರ ದಿಂದ ಅತಿ ದೂರದಲ್ಲಿರುವ ಬಿಂದು. ಅಪಬಿಂದು, ಉಚ್ಚಬಿಂದು
apocentre
ಅಪಕ್ವ
(ವೈ) ಪೂರ್ಣ ಅಭಿವರ್ಧನೆಯ ಘಟ್ಟ ಅಲ್ಲದುದು. ಯುಕ್ತ ವೇಳೆಗಿಂತ ಮೊದಲೇ ಸಂಭವಿಸುವುದು. ಮಾನಸಿಕವಾಗಿ, ದೈಹಿಕವಾಗಿ ಪೂರ್ಣ ವಿಕಾಸವಿಲ್ಲದಿರುವಿಕೆ
immature
ಅಪಕ್ಷರಣ
(ಭೂವಿ) ನೀರಿನಿಂದಾಗಿ ಶಿಲೆಯಲ್ಲಾಗುವ ಸವೆತ. ಸಾಮಾನ್ಯವಾಗಿ ಹಿಮನದಿಗಳ ಹರಿವಿನಿಂದಾಗುವ ಸವೆತಕ್ಕೆ ಅನ್ವಯ