(ತಂ) ವಸ್ತುವನ್ನು ನಿರ್ದಿಷ್ಟ ಉಚ್ಚ ಉಷ್ಣತೆಯಲ್ಲಿ ಕ್ಲುಪ್ತ ಕಾಲ ಇರುವಂತೆ ಏರ್ಪಡಿಸಿ ಅದರಲ್ಲಿ ಇರಬಹುದಾದ ಸ್ಥಾನಚ್ಯುತಿ, ಖಾಲಿ ನೆಲೆ ಮತ್ತು ಇತರ ಮಿತ,
annealing
ಅನ್ಯರೂಪೀಯ
(ಭೂವಿ) ಶಿಲಾಬಂಧ ಕುರಿತ ಪದ. ಶಿಲೆ ರೂಪುಗೊಳ್ಳುತ್ತಿರುವಾಗ ಖನಿಜಗಳು ಒಂದಕ್ಕೊಂದು ಅಡ್ಡಬರುವುದರಿಂದ ಅವುಗಳ ಸ್ವಂತ ಲಾಕ್ಷಣಿಕ ರೂಪಗಳು ಪ್ರಕಟವಾಗದಿರುವ ಸ್ಥಿತಿ
xenomorphic
ಅನ್ಯಶಿಲೆ
(ಭೂವಿ) ಅಗ್ನಿಶಿಲಾಂತರ್ಗತ ಪರಕೀಯ ಶಿಲೆ
xenolith
ಅನ್ಯೂರಿಸಮ್
(ವೈ) ೧. ಧಮನಿಯ ಭಿತ್ತಿಯು ತೆಳುವಾದ ಕಾರಣ ದುಂಡಾಗಿ ಹಿಗ್ಗಿರುವುದು. ೨. ರಕ್ತಭರಿತ ಗಂತಿಗೆ ರಕ್ತನಾಳದ ಒಳಭಾಗದೊಡನೆ ನೇರವಾಗಿ ಸಂಪರ್ಕ ಇರುವುದು. ಧಮನಿಯ ಊತ
aneurism
ಅನ್ಯೋನ್ಯ ಸಂಖ್ಯೆಗಳು
(ಗ) ಒಂದು ಸಂಖ್ಯೆಯ ಸಮುಚಿತ ಭಾಜಕಗಳ ಮೊತ್ತ ಇನ್ನೊಂದು ಸಂಖ್ಯೆ ಆಗಿರುವ ಸಂಖ್ಯಾಯುಗ್ಮ. ಪೈಥಾಗೊರಸನ ಅನುಯಾಯಿಗಳು ಇವುಗಳ ಮೊದಲ ಅಧ್ಯಯನಿಗಳು. ಕನಿಷ್ಠ ಅನ್ಯೋನ್ಯ ಸಂಖ್ಯೆಗಳು ೨೨೦ ಮತ್ತು ೨೮೪. ಈಗ ೨೨೦ರ ಭಾಜಕಗಳು : ೧, ೨, ೪, ೫, ೧೦, ೧೧, ೨೦, ೨೨, ೪೪, ೫೫ ಮತ್ತು ೧೧೦ ಇವುಗಳ ಮೊತ್ತ ೨೮೪. ಅಂತೆಯೇ ೨೮೪ರ ಭಾಜಕಗಳು. ೧, ೨, ೪, ೭೧ ಮತ್ತು ೧೪೨. ಇವುಗಳ ಮೊತ್ತ ೨೨೦. ಮೈತ್ರಿ ಸಂಖ್ಯೆಗಳು
amicable numbers
ಅನ್ವಯ
(ಸಾ) ಮೇಲಿಡುವುದು, ಆರೋಪ, ಉಪಯೋಗ, ಪ್ರಯೋಗ
application
ಅನ್ವಿತ
(ತಂ) ಯಾವುದೇ ವಿಜ್ಞಾನದ ತತ್ತ್ವಗಳನ್ನು ವಾಸ್ತವಿಕ ಪ್ರಯೋಗದಲ್ಲಿ ಬಳಸುವುದು
applied
ಅನ್ವಿತ ಗಣಿತ
(ಗ) ಭೌತ ವಸ್ತುಗಳ ವರ್ತನೆ ಕುರಿತ ಪ್ರಶ್ನೆಗಳನ್ನು ಬಿಡಿಸಲು ಗಣಿತದ ಅನ್ವಯ
applied mathematics
ಅನ್ವಿತ ಪರಿಸರ ವಿಜ್ಞಾನ
(ಪವಿ) ಜೀವಿ ಪರಿಸ್ಥಿತಿಶಾಸ್ತ್ರದಲ್ಲಿನ ಸಿದ್ಧಾಂತಗಳನ್ನೂ ಪರಿಕಲ್ಪನೆಗಳನ್ನೂ ಉಪಯುಕ್ತವಾಗಿ ಅನ್ವಯಿಸಿ ಮಾನವನನ್ನೂ ಸೇರಿದಂತೆ ಜೀವಿಗಳ ಅಭಿವೃದ್ಧಿಗಾಗಿ ಬಳಸುವ ವಿಜ್ಞಾನ ಶಾಖೆ
applied ecology
ಅನ್ವಿತ ಭೂವಿಜ್ಞಾನ
(ಭೂವಿ) ಮಾನವ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭೂವಿಜ್ಞಾನದ ಅನ್ವಯ