logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅನುವೇದಕ ನರಮಂಡಲ
(ವೈ) ಇದು ಸ್ವಾಯತ್ತ ನರಮಂಡಲದ ಒಂದು ಭಾಗ. ಕುತ್ತಿಗೆ ಮತ್ತು ಪಾವನಾಸ್ಥಿಗಳ ನಡುವೆ, ಬೆನ್ನುಮೂಳೆಯ ಅಕ್ಕಪಕ್ಕದಲ್ಲಿರುವ ನರ ಗಂಟುಗಳ ಸರಪಳಿ. ಇದರ ನರಕೊನೆಗಳು ಬಿಡುಗಡೆ ಮಾಡುವ ಅಡ್ರಿನಾಲಿನ್ ಹಾಗೂ ನಾರ್‌ಅಡ್ರಿನಾಲಿನ್ ಎಂಬ ರಾಸಾಯನಿಕಗಳು ಉಪಾನುವೇದಕ ನರಮಂಡಲದ ಕ್ರಿಯೆಗೆ ವಿರುದ್ಧವಾದ ಕ್ರಿಯೆಯನ್ನು ಉಂಟುಮಾಡಿ ದೇಹದಲ್ಲಿ ಸಮತೋಲವನ್ನು ಸ್ಥಾಪಿಸುತ್ತವೆ. ಉದಾಹರಣೆಗೆ, ಅನುವೇದಕ ನರಮಂಡಲವು ಜೊಲ್ಲು ಗ್ರಂಥಿಸ್ರಾವವನ್ನು ಕುಗ್ಗಿಸುತ್ತದೆ, ಹೃದಯ ಮಿಡಿತದ ದರವನ್ನು ಹೆಚ್ಚಿಸುತ್ತದೆ, ರಕ್ತನಾಳಗಳನ್ನು ಕಿರಿದು ಮಾಡುತ್ತದೆ. ಉಪಾನುವೇದಕ ನರಮಂಡಲವಾದರೋ ಇದಕ್ಕೆ ವಿರುದ್ಧ ಪರಿಣಾಮಗಳನ್ನು ಉಂಟುಮಾಡುತ್ತದೆ. ಹಾಗೆ ಸಮತೋಲ ಸ್ಥಾಪನೆಯಾಗುತ್ತದೆ
sympathetic nervous system

ಅನುವೇದನೆ
(ವೈ) ಪರಸ್ಪರ ತೀರ ಸಮೀಪವಿರದ ಮತ್ತು ನೇರ ಸಂಬಂಧವೂ ಇರದ ಎರಡು ಭಾಗಗಳ ನಡುವಿನ ಸಂಬಂಧ. ಒಂದರಲ್ಲಿ ಆಗುವ ವ್ಯತ್ಯಯವು ಇನ್ನೊಂದರಲ್ಲಿ ಉಂಟುಮಾಡುವ ಪರಿಣಾಮ
sympathy

ಅನುಸ್ಥಾಪನ
(ಭೌ) ಯಾವುದೇ ನಿಯತ ಸಮತಲ ವ್ಯವಸ್ಥೆ ಕುರಿತಂತೆ ಸ್ಫಟಿಕದಲ್ಲಿ ಮುಖ್ಯವಾಗಿ ಸಮತಲ ತಂಡಗಳ ಸ್ಥಾನ ನಿರ್ದೇಶನ. ವಿನ್ಯಾಸ
orientation

ಅನೃತ ಶೋಧಕ
(ತಂ) ನೋಡಿ: ಪಾಲಿಗ್ರಾಫ್
lie detector

ಅನೇಕ ಪದಿ
(ಗ) ಎರಡು ಅಥವಾ ಅಧಿಕ ಪದಗಳ ಮೊತ್ತವಾಗಿರುವ ಬೈಜಿಕೋಕ್ತಿ. ನೋಡಿ : ಬಹುಪದಿ
multinomial

ಅನೈಚ್ಛಿಕ
(ವೈ) ಮನಸ್ಸಂಕಲ್ಪವಿಲ್ಲದೆ ಕ್ರಿಯೆ ಜರಗಿಸುವ (ಸ್ನಾಯುಗಳು, ಸ್ನಾಯುತಂತುಗಳು)
involuntary

ಅನೈಚ್ಛಿಕ ಮೂತ್ರಸ್ರಾವ
(ವೈ) ಮಕ್ಕಳಲ್ಲಿ ಕಂಡುಬರುವ ಮೂತ್ರ ವಿಸರ್ಜನಾ ಸಮಸ್ಯೆ. ಮೂತ್ರವನ್ನು ತಡೆಹಿಡಿಯುವ ವಯಸ್ಸಾದರೂ, ಮೂತ್ರವನ್ನು ನಿಯಂತ್ರಿಸಲಾಗದ ಸ್ಥಿತಿ. ಸಾಮಾನ್ಯವಾಗಿ ರಾತ್ರಿ ಮಲಗಿರುವಾಗ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಾರೆ. ಶಯನ ಮೂತ್ರಸ್ರಾವ
enuresis

ಅನೌರಸ
(ವೈ) ಕಾನೂನು ಸಮ್ಮತವಲ್ಲದ, ಅನೈತಿಕ ಸಂಬಂಧದಿಂದ ಹುಟ್ಟಿದ. ಜಾರಜ
illegitimate

ಅನ್ನಕ್ಷೀರ
(ಜೀ) ಕಶೇರುಕಗಳಲ್ಲಿ ಜೀರ್ಣಕ್ರಿಯೆಗಳ ಉತ್ಪನ್ನ ಗಳನ್ನು ಒಳಗೊಂಡಿರುವ ದುಗ್ಧರಸ. ಇದರಲ್ಲಿ ಮೇದಸ್ಸು ಮತ್ತು ತೈಲ ಇಮಲ್ಷನ್ ರೂಪದಲ್ಲಿ ಬೆರೆತಿರುವುದರಿಂದ ಹಾಲಿನಂಥ ಬಿಳುಪು ಬಣ್ಣ. ಕರುಳಿನಲ್ಲಿಯ ಅನ್ನರಸ
chyle

ಅನ್ನಭೇದಿ
(ರ) ನೋಡಿ: ಕಾಪರಸ್
copperas


logo