(ಗ) ಎರಡು ಪೂರ್ಣಾಂಕಗಳೂ ಸರಿ ಅಥವಾ ಬೆಸ ಆಗಿರುವುದು. ಸಾಮ್ಯ
parity
ಅನುರೂಪತೆ
(ಭೂವಿ) ಶಿಲಾಸ್ತರಗಳು ಅನುಕ್ರಮವಾಗಿ ಒಂದರ ಮೇಲೊಂದಿರುವುದು
conformity
ಅನುರೂಪ ಶ್ರೇಣಿಗಳು
(ರ) ನಿಕಟ ಸಂಬಂಧ ಇರುವ ಆರ್ಗ್ಯಾನಿಕ್ ಸಂಯುಕ್ತಗಳ ಕುಟುಂಬ. ಅನುಕ್ರಮ ಸದಸ್ಯ ಸಂಯುಕ್ತಗಳ ಅಣುಸೂತ್ರಗಳಲ್ಲಿ – CH2 ವ್ಯತ್ಯಾಸ. ಕುಬಿಂ, ದ್ರಬಿಂ, ಸಾಂದ್ರತೆ ಮುಂತಾದ ಭೌತಲಕ್ಷಣಗಳಲ್ಲಿ ಕ್ರಮೇಣ ವ್ಯತ್ಯಾಸ. ರಾಸಾಯನಿಕ ಗುಣ ಮತ್ತು ರಚನೆಯಲ್ಲಿ ಏಕರೀತಿ. ಸದೃಶ ವಿಧಾನ ಗಳಿಂದ ತಯಾರಿಸಬಹುದು. ವಾಸ್ತವವಾಗಿ ಆರ್ಗ್ಯಾನಿಕ್ ರಸಾಯನ ವಿಜ್ಞಾನವೆಂಬುದು ಅನೇಕ ಅನುರೂಪ ಶ್ರೇಣಿಗಳ ಕ್ರಮಬದ್ಧ ಅಧ್ಯಯನ. ಪ್ರತಿಯೊಂದು ಶ್ರೇಣಿಗೂ ನಿರ್ದಿಷ್ಟ ಸಾರ್ವತ್ರಿಕ ಸೂತ್ರವಿದೆ. ನೋಡಿ: ಆಲ್ಕೇನ್, ಆಲ್ಕೀನ್ ಮತ್ತು ಆಲ್ಕೈನ್
homologous series
ಅನುರೇಖಕ
(ಸಾ) ಚಲಿಸುತ್ತಿರುವ ವಿತರಣೆ ಅಥವಾ ನೆಲೆ ಅರಿಯುವ ಸಲುವಾಗಿ ಅದಕ್ಕೆ ಬೆರೆಸಿದ/ಲಗತ್ತಿಸಿದ ಪರಕೀಯ, ಸಾಧಾರಣವಾಗಿ ವಿಕಿರಣಪಟು ವಸ್ತು. ಅನುರೇಖಕ ಧಾತು
tracer
ಅನುವರ್ತನೆ
(ಜೀ) ಬಾಹ್ಯ ಉದ್ದೀಪನೆಗೆ ಜೀವಕೋಶ ಅಥವಾ ಜೀವಿಯ ಪರಾವರ್ತಿತ ಪ್ರತಿವರ್ತನೆ. ಉದಾ: ಬೆಳಕು, ಸ್ಪರ್ಶ ಅಥವಾ ಗುರುತ್ವದ ಉದ್ದೀಪನೆಗೊಳಗಾಗಿ ಸಸ್ಯದ ಬೆಳವಣಿಗೆ. ಉದ್ದೀಪಕದತ್ತ ಬೆಳವಣಿಗೆಯು ಧನ- ಅನುವರ್ತನೆ; ಉದ್ದೀಪಕದಿಂದ ವಿಮುಖ ಬೆಳವಣಿಗೆಯು ಋಣ-ಅನುವರ್ತನೆ
tropism
ಅನುವರ್ತಿ
(ಗ) ಎರಡು ಕೋನಗಳ ಮೊತ್ತ ೩೬೦0 ಆದಾಗ ಅವು ಪರಸ್ಪರ ಅನುವರ್ತಿ ಕೋನಗಳು. ಎರಡು ಕಂಸಗಳು ಒಟ್ಟಾಗಿ ವೃತ್ತವನ್ನು ಪೂರ್ತಿಗೊಳಿಸಿದಾಗ ಅವು ಪರಸ್ಪರ ಅನುವರ್ತಿ ಕಂಸಗಳು
conjugate
ಅನುವರ್ತಿ ತ್ರಿಭುಜಗಳು
(ಗ) ಶಂಕುಜ ಕುರಿತಂತೆ ಎರಡು ತ್ರಿಭುಜಗಳಲ್ಲಿ ಒಂದರ ಶೃಂಗಗಳು ಇನ್ನೊಂದರ ಭುಜಗಳ ಧ್ರುವಗಳಾಗಿದ್ದರೆ ಅವುಗಳಿಗೆ ಈ ಹೆಸರಿದೆ
conjugate triangles
ಅನುವರ್ತಿ ಮಿಶ್ರಸಂಖ್ಯೆ
(ಗ) x+iy ಎಂಬ ಮಿಶ್ರ ಸಂಖ್ಯೆಯ ಅನುವರ್ತಿ ಮಿಶ್ರ ಸಂಖ್ಯೆ x - iy
conjugate complex number
ಅನುವರ್ತಿ ವ್ಯಾಸಗಳು
(ಗ) ಶಂಕುಜದ ಯಾವುದೇ ವ್ಯಾಸಕ್ಕೆ ಸಮಾಂತರವಾಗಿರುವ ಜ್ಯಾಗಳ ಮಧ್ಯ ಬಿಂದುಗಳು ಇನ್ನೊಂದು ವ್ಯಾಸವನ್ನು ರೂಪಿಸುತ್ತವೆ. ಇವೆರಡು ಪರಸ್ಪರ ಅನುವರ್ತಿ ವ್ಯಾಸಗಳು
conjugate diameters
ಅನುವೇದಕ
(ವೈ) ಅನುಕಂಪದ ಕಾರಣವಾಗಿ ಒಬ್ಬ ವ್ಯಕ್ತಿಯ ಭಾವನೆಯು ಮತ್ತೊಂದು ವ್ಯಕ್ತಿಯಲ್ಲಿ ಅಥವಾ ಶರೀರದ ಒಂದು ಭಾಗದ ಭಾವನೆಯು ಮತ್ತೊಂದು ಭಾಗದಲ್ಲಿ ಸದೃಶ ಪರಿಣಾಮ ಉಂಟುಮಾಡುವುದು. ಉದಾ: ಒಬ್ಬನಲ್ಲಿಯ ಅಥವಾ ದೇಹದ ಒಂದು ಭಾಗದಲ್ಲಿಯ ನೋವು ಅನುಕಂಪದಿಂದಾಗಿ ಮತ್ತೊಬ್ಬನಲ್ಲಿ ಅಥವಾ ದೇಹದ ಇನ್ನೊಂದು ಭಾಗದಲ್ಲಿ ನೋವನ್ನು ಉಂಟುಮಾಡುವುದು