(ಸಾ) ಪ್ರಕೃತಿಯ ವಿದ್ಯಮಾನಗಳಲ್ಲಿ ಅಂತರ್ಗತವಾಗಿರುವ ವಿಧಿ-ನಿಯಮ-ಸೂತ್ರಗಳನ್ನು ಕೇವಲ ಅನುಭವದಿಂದ ಅರಿತುಕೊಳ್ಳುವುದು. ವೈಜ್ಞಾನಿಕ ವಿಧಾನದ ಮೊದಲ ಹಂತ
empirical
ಅನುಭವಾತ್ಮಕ ವಾದ
(ಜೀ) ಅನುಭವದಿಂದ ವಿಧಿನಿಯಮಗಳನ್ನು ತರ್ಕಿಸುವ ಇಲ್ಲವೇ ಕಾರ್ಯ (ಪರಿಣಾಮ)ದಿಂದ ಕಾರಣವನ್ನು ಊಹಿಸುವ ವಾದ
a posteriori
ಅನುಮಸ್ತಿಷ್ಕ
(ಜೀ) ತಲೆಯ ಕೆಳಗೆ ಹಿಂಭಾಗದಲ್ಲಿರುವ ಮಿದುಳಿನ ದುಂಡು ವಿಭಾಗ. ಸ್ನಾಯುಗಳ ಸುಸಂಬದ್ಧ ಕ್ರಿಯೆ ಹಾಗೂ ದೇಹದ ಸಮತೋಲ ಪ್ರಜ್ಞೆ ಕಾಯ್ದಿಡುವುದು ಇದರ ಒಂದು ಮುಖ್ಯಕ್ರಿಯೆ. ಸೆರೆಬೆಲೆಮ್
cerebellum
ಅನುಮಾಪನ
(ರ) ಟೈಟ್ರೀಕರಣ. ನಿರ್ದಿಷ್ಟ ಗಾತ್ರದ ಯಾವುದೇ ದ್ರಾವಣದೊಡನೆ ಸಂಪೂರ್ಣವಾಗಿ ವರ್ತಿಸಲು ಅಗತ್ಯವಾದ ಇನ್ನೊಂದು ದ್ರಾವಣದ ಗಾತ್ರವನ್ನು ನಿರ್ಣಯಿಸುವ ಪ್ರಯೋಗ ವಿಧಾನ. ಈ ರಾಸಾಯನಿಕ ಕ್ರಿಯೆಯಲ್ಲಿ ವ್ಯಕ್ತವಾಗುವ ವಿದ್ಯುದ್ವಿಭಜನೆ, ವಿದ್ಯುದ್ವಾಹಕತ್ವ, ರೋಧ, ಉಷ್ಣ, ವಕ್ರೀಭವನಾಂಕ, ಸ್ನಿಗ್ಧತೆ, ದ್ಯುತಿಪಟುತ್ವ ಮುಂತಾದ ಭೌತ ವ್ಯತ್ಯಯಗಳನ್ನು ಗಮನಿಸಿಯೂ ಅನುಮಾಪನ ಮಾಡುವುದುಂಟು. ನೋಡಿ : ಗಾತ್ರಮಾಪಕ ವಿಶ್ಲೇಷಣೆ
titration
ಅನುಮಿತ
(ಗ) ಗಣಿತ ಪ್ರಮೇಯದಿಂದ ಲಭಿಸಿದ್ದು. ಉಪಪ್ರಮೇಯ
corollary
ಅನುಮಿತಿ
(ಗ) ಅನುಗಮನ ಅಥವಾ ನಿಗಮನ ವಿಧಾನ ದಿಂದ ಮಾಡುವ ಊಹೆ ಅಥವಾ ಮಂಡಿಸುವ ಅಭಿಪ್ರಾಯ. ಅನುಮಾನ. (ಸಾ) ಕಾರ್ಯ-ಕಾರಣ ಸಂಬಂಧವಿರುವ ಉಕ್ತಿ: ಮೋಡ ಕವಿದರೆ ಮಳೆ ಬರಬಹುದು ಎಂಬ ಸಕಾರಣ ಊಹೆ
inference
ಅನುರಣಕ ಕೋಷ್ಠ
(ತಂ) ವಿದ್ಯುದ್ವಾಹಕ ಮೇಲ್ಮೈಗಳಿಂದ ಆವೃತವಾದ ಕೋಷ್ಠ. ಇದರಲ್ಲಿ ವಿದ್ಯುತ್ ಕಾಂತೀಯ ಶಕ್ತಿಯನ್ನು ಸಂಗ್ರಹಿಸಬಹುದು / ಪ್ರಚೋದಿಸಬಹುದು
resonant chamber
ಅನುರಣನಕಾರಿ
(ಭೌ) ಸುಸ್ಪಷ್ಟ ವಿದ್ಯುತ್, ಯಾಂತ್ರಿಕ ಅಥವಾ ಧ್ವನಿಕ ಅನುರಣನ ಪರಿಣಾಮವನ್ನು ಪ್ರಕಟಗೊಳಿಸುವ ಯಾವುದೇ ಉಪಕರಣ. ಅನುರಣಕ
resonator
ಅನುರಣನೆ
(ಭೌ) ಯಾಂತ್ರಿಕ ಅಥವಾ ಧ್ವನಿ ವೈಜ್ಞಾನಿಕ ಕಂಪನ ವ್ಯವಸ್ಥೆಯೊಂದನ್ನು ಆವರ್ತನೀಯ ಚಾಲಕ ಬಲದಿಂದ ಬಲವಂತವಾಗಿ ಕಂಪನಗಳಿಗೀಡುಮಾಡಿದಾಗ, ಅನ್ವಿತ ಆವೃತ್ತಿಯು ವ್ಯವಸ್ಥೆಯ ಸಹಜ ಆವೃತ್ತಿಗೆ ಸಮವಾಗಿದ್ದರೆ ಅಥವಾ ನಿಕಟವಾಗಿದ್ದರೆ ಗರಿಷ್ಠ ಪಾರವಿರುವ ಕಂಪನಗಳು ಉದ್ಭವಿಸುತ್ತವೆ. ಇದೇ ಅನುರಣನೆ