(ಗ) ನಿಷ್ಪತ್ತಿಯಲ್ಲಿ ಛೇದ. ಅಂದರೆ (a:b)ಯಲ್ಲಿ b. ಅಂಶಕ್ಕೆ (aಗೆ) ಪೂರ್ವಪದವೆಂದು ಹೆಸರು
consequent
ಅನುಗಾಮಿ ನದಿ
(ಭೂವಿ) ನೆಲದ ಸಹಜ ಇಳಿಜಾರಿನಲ್ಲಿ ಹರಿಯುವ ಹೊಳೆ ಇತ್ಯಾದಿ
consequent river
ಅನುಚಲನೆ
(ವೈ) ೧. ಒಂದು ನಿರ್ದಿಷ್ಟ ಪ್ರಚೋದನೆಗೆ ಜೀವಕೋಶದಲ್ಲಿರುವ ಕೋಶರಸ ತೋರುವ ಚಲನಾ ಪ್ರತಿಕ್ರಿಯೆ. ಪ್ರಚೋದಕವು ರಾಸಾಯನಿಕವಾಗಿದ್ದಾಗ ರಾಸಾಯನಿಕ ಅನುಚಲನೆ, ಬೆಳಕಾಗಿದ್ದಾಗ ದ್ಯುತಿ ಅನುಚಲನೆ, ಉಷ್ಣತೆಯಾಗಿದ್ದಾಗ ಉಷ್ಣಾನು ಚಲನೆ ಇತ್ಯಾದಿ. ೨. ಸ್ವಸ್ಥಿತಿ ಸ್ಥಾಪನೆ: ಅಂಡವಾಯು (ಹರ್ನಿಯ) ವಿನಿಂದಾಗಿ ಸ್ಥಾನಪಲ್ಲಟಗೊಂಡ ಮೂಳೆಯನ್ನು ಅಥವಾ ಅಂಗವನ್ನು ಕೈಯಿಂದ ಒತ್ತಿ ಸ್ವಸ್ಥಾನದಲ್ಲಿ ಸ್ಥಾಪಿಸುವಿಕೆ. ೩. ಕ್ರಮ ಜೋಡಣೆ: ಕ್ರಮಬದ್ಧವಾಗಿ ವರ್ಗೀಕರಿಸುವಿಕೆ ಅಥವಾ ಕ್ರಮಬದ್ಧವಾಗಿ ಜೋಡಿಸುವಿಕೆ
taxis
ಅನುದೀಪ್ತಿ
(ರ) ಬಿಳಿ ರಂಜಕವು ವಾಯು ವಿನಲ್ಲಿ ನಿಧಾನವಾದ ಉತ್ಕರ್ಷಣೆಗೆ (ಆಕ್ಸಿಡೇಶನ್) ಒಳಗಾಗುವಾಗ ಹೊಮ್ಮುವ ಹಸುರು ಮಿನುಗು. (ಭೌ) ಉದ್ದೀಪನಾನಂತರ ೦.೧ ನ್ಯಾನೊ ಸೆಕೆಂಡ್‌ಗಳಿಗೂ ಹೆಚ್ಚು ಕಾಲ ಇರುವ ದೀಪ್ತಿ. (ಪ್ರಾ) ಜೀವಿಗಳು ಉತ್ಪಾದಿಸುವ ದೀಪ್ತಿ. ಉದಾ: ಮಿಣುಕು ಹುಳು ದೀಪ್ತಿ. ನೋಡಿ : ಸ್ಫುರದೀಪ್ತಿ
phosphorescence
ಅನುಪಾತ
(ಗ) ಎರಡು ದಾಮಾಷಾ/ನಿಷ್ಪತ್ತಿಗಳ ಸಮತೆ; a/b = c/d ಆಗಿದ್ದರೆ, a, b, c, d ಈ ನಾಲ್ಕು ಪರಿಮಾಣಗಳೂ ಅನುಪಾತೀಯವಾಗಿರುತ್ತವೆ
proportion
ಅನುಪ್ರತಿಜ್ಞೆ
(ಗ) ಒಂದು ಪ್ರತಿಜ್ಞೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಂಬಂಧಪಟ್ಟು ಅದರ ತತ್ತ್ವಗಳ ಮೇಲೆ ಆಧಾರವಾದ ಪ್ರಶ್ನೆ. ಉಪಪ್ರತಿಜ್ಞೆ
rider
ಅನುಬಂಧ
(ಸ) ಸಸ್ಯದ ಬೆಳವಣಿಗೆಗೆ ಅಥವಾ ಸಂತಾನೋತ್ಪಾದನೆಗೆ ಅನವಶ್ಯವಾದ ಬಾಹ್ಯ ಹೊರಬೆಳೆತ
appendage
ಅನುಬದ್ಧ
(ಗ) ಚೌಕ ಮಾತೃಕೆಯ/ನಿರ್ಧಾರಕದ ಪರಿವರ್ತಿ
adjoint
ಅನುಬಿಂಬನ
(ಗ) ದ್ವಿಮಾನ ಪರಿಕರ್ಮಗಳನ್ನು ಸಂರಕ್ಷಿಸುವ ಎರಡು ಬೈಜಿಕ ಸಂರಚನೆಗಳ ನಡುವಿನ ಫಲನ.
homomorphism
ಅನುಬೋಧೆ
(ಮ) ಗೋಚರ ಸಂಗತಿಯನ್ನು ಮನೋಗತ ಸಂಗತಿಗಳ ಜೊತೆ ಹೊಂದಿಸಿ ಅನುಭವಕ್ಕೆ ತಂದುಕೊಂಡು ಅರ್ಥೈಸುವುದು