logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅನಿಷೇಕ ಫಲನ
(ಸ) ಪರಾಗಸ್ಪರ್ಶ ಇಲ್ಲದೆಯೇ ಹಣ್ಣು ಮೈದಾಳುವುದು. ಹೀಗೆ ಲಭಿಸುವ ಫಲ ಸಾಮಾನ್ಯವಾಗಿ ಬೀಜರಹಿತವಾಗಿದ್ದು ಸಸ್ಯದ ಪುನರುತ್ಪಾದನೆಗೆ ನೆರವಾಗುವುದಿಲ್ಲ
parthenocarpy

ಅನುಕರಣ ಚಂದ್ರ
(ಖ) ಚಂದ್ರನ ಪರಿವೇಷದಲ್ಲಿ ಕಾಣುವ ಕಾಂತಿ ಪ್ರದೇಶ. ಸೂರ್ಯನ ಸುತ್ತ ಇರುವ ಪ್ರಭೆಯಂತೆ ಅದೇ ರೂಪ ಹಾಗೂ ದೃಕ್ ಮೂಲಗಳಿರುವ ಪೇಲವ ವರ್ಣದ ಚಂದ್ರಪ್ರಭೆ. ಚಂದ್ರನ ತುಲನಾತ್ಮಕ ದುರ್ಬಲ ದೀಪ್ತಿಯ ಕಾರಣ ಅನುಕರಣಚಂದ್ರ ದರ್ಶನ ವಿರಳ. ತೋರ್ಕೆ ಚಂದ್ರ. ಪ್ರತಿಚಂದ್ರ. ಹುಸಿಚಂದ್ರ
paraselene

ಅನುಕರಿಸು
(ಜೀ) ರಕ್ಷಣೆಗಾಗಿ ಇಲ್ಲವೇ ನಿಜ ಸ್ವರೂಪ ಮರೆಮಾಚಲು ಜೀವಿಯ ಯಾವುದೇ ಪ್ರಭೇದ ಮತ್ತೊಂದರ ಬಣ್ಣ, ವರ್ತನೆ, ಶಬ್ದ ಅಥವಾ ರಚನೆಯನ್ನು ಅನುಕರಿಸುವುದು. ಉದಾ : ಊಸರವಳ್ಳಿಯಂಥ ಕೀಟವೊಂದು ಗಿಡದ ಎಲೆಯ ಅಥವಾ ರೆಂಬೆಯ ಬಣ್ಣ ತಾಳುವುದು
mimic

ಅನುಕಲ
(ಗ) ಆಗಿದ್ದರೆ ಆಗ x ಕುರಿತಂತೆ f (x)ನ ಅನುಕಲ f (x) ಎನ್ನುತ್ತೇವೆ. f(x) ಆದರೋ f (x)ನ ಅವಕಲ. ಪ್ರತೀಕಗಳಲ್ಲಿ F(x) dx= f (x)+C. ಇಲ್ಲಿ Cಗೆ ಅನುಕಲನಿಯತಾಂಕವೆಂದು ಹೆಸರು. ಮೇಲೆ ದೊರೆತಿರುವುದು f(x)ನ ಅನಿರ್ದಿಷ್ಟ ಅನುಕಲ. ಇಲ್ಲಿ xಗೆ ನಿರ್ದಿಷ್ಟ ವ್ಯಾಪ್ತಿ. (a,b)ಯನ್ನು ವಿಧಿಸಬಹುದು. a x b ಆದಾಗ ಅನಿರ್ದಿಷ್ಟ ಅನುಕಲ ನಿರ್ದಿಷ್ಟ ಅನುಕಲವಾಗುತ್ತದೆ ಮತ್ತು ಇದರ ಬೆಲೆ ನಿರ್ದಿಷ್ಟ ಸ್ಥಿರಾಂಕವಾಗಿರುತ್ತದೆ. ಪ್ರತೀಕಗಳಲ್ಲಿ ಇಲ್ಲಿ aಗೆ ನೀಚ (ಕೆಳ) ಪರಿಮಿತಿಯೆಂದೂ bಗೆ ಉಚ್ಚ (ಮೇಲು) ಪರಿಮಿತಿಯೆಂದೂ ಹೆಸರು
integral

ಅನುಕಲನ
(ಗ) ಫಲನದ ಅನುಕಲವನ್ನು ಗಣಿಸುವ ಪ್ರಕ್ರಿಯೆ. ನೋಡಿ : ಅವಕಲನ
integration

ಅನುಕಲನದಲ್ಲಿ ಚರವ್ಯತ್ಯಯ
(in integration) (ಗ) ಏಕಚರ ಅನುಕಲ್ಯದ ಚರವನ್ನು ಸಮುಚಿತ ಆದೇಶದ ಮೂಲಕ ಇನ್ನೂ ಸರಳ/ಸುಲಭ ಅನುಕಲನಶೀಲ ಫಲನವಾಗಿ ಪರಿವರ್ತಿಸಿ ಅನುಕಲಿಸುವ ಒಂದು ವಿಧಾನ
change of variable

ಅನುಕಲನ ನಿಯತಾಂಕ
(ಗ) ನೋಡಿ: ಅನುಕಲ, ಅವಕಲ
constant of integration

ಅನುಕಲ್ಯ
(ಗ) ಅನುಕಲನ ಪರಿಕರ್ಮಕ್ಕೆ ಗುರಿಯಾಗುವ ಫಲನ; ಅನುಕಲನ ಮಾಡಬೇಕಾಗಿರುವ ಫಲನ. ಅನುಕಲನೀಯ
integrand

ಅನುಕಾಂತೀಯತೆ
(ಭೌ) ಪದಾರ್ಥಗಳ ಪ್ರೇರ್ಯತೆ ಧನಾತ್ಮಕವಾಗಿದ್ದು, ವ್ಯಾಪ್ಯತೆ ಏಕಮಾನಕ್ಕಿಂತ ಸ್ವಲ್ಪ ಹೆಚ್ಚಾಗಿರುವ ವಿದ್ಯಮಾನ. ಅನ್ವಿತ ಕಾಂತಕ್ಷೇತ್ರ ಪರಮಾಣುಗಳ ಅಥವಾ ಅಣುಗಳ ಕಾಂತೀಯ ಮಹತ್ವಗಳು ಸಾಲು ಗೂಡುವಂತೆ ಪ್ರವರ್ತಿಸುತ್ತವೆ ಮತ್ತು ಆ ಪದಾರ್ಥವು ಕ್ಷೇತ್ರದ ದಿಶೆಯಲ್ಲಿ ಕಾಂತೀಕರಣ ಪಡೆಯುತ್ತದೆ. ಕ್ಷೇತ್ರವನ್ನು ನಿವಾರಿಸಿದಾಗ ಕಾಂತತ್ವ ಅದೃಶ್ಯವಾಗುತ್ತದೆ. ಉಷ್ಣಾಪಾರಣೀಯ ವಿಕಾಂತೀಕರಣದಿಂದ ಅತಿ ಕಡಿಮೆ ಉಷ್ಣತೆ ಪಡೆಯಲು ಉಪಯೋಗ
paramagnetism

ಅನುಕ್ರಿಯೆ
(ವೈ) ೧. ಒಂದು ಪ್ರಚೋದನೆಗೆ ಸ್ನಾಯು, ಗ್ರಂಥಿ ಅಥವಾ ಯಾವುದೇ ಅಂಗ ತೋರಬಹುದಾದ ವರ್ತನೆ. ಇದು ದೈಹಿಕವಾಗಿದ್ದರೆ ಅನುಕ್ರಿಯೆಯ ಪ್ರಮಾಣವನ್ನು ಗುರುತಿಸ ಬಹುದು ಅಥವಾ ಅಳೆಯಬಹುದು. ಮಾನಸಿಕವಾಗಿದ್ದಾಗ ಗುರುತಿಸಲು ಅಥವಾ ಅಳೆಯಲು ಸಾಧ್ಯವಾಗದಿರಬಹುದು. ೨. ಒಂದು ಅನಿರ್ದಿಷ್ಟ ಪ್ರಚೋದನೆಗೆ ಯಾವುದೇ ಜೀವಿ ಅಥವಾ ಮನುಷ್ಯ ತೋರಬಹುದಾದ ಪ್ರತಿಕ್ರಿಯೆ. ಇದು ಅನುವರ್ತನಾ ಕ್ರಿಯೆ (ರಿಫ್ಲೆಕ್ಸ್ ಆಕ್ಷನ್)ಗಿಂತ ಭಿನ್ನವಾದದ್ದು. ಅನುವರ್ತನಾ ಕ್ರಿಯೆಗಳಿಗೆ ನಿರ್ದಿಷ್ಟ ಪ್ರಚೋದನೆಯಿರುತ್ತದೆ
response


logo