logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abortion
ನಾಮವಾಚಕ
  • (ಮುಖ್ಯವಾಗಿ ಉದ್ದೇಶಪೂರ್ವಕವಾಗಿ ಹಾಗೂ ಕಾನೂನುಬಾಹಿರವಾಗಿ ಮಾಡಿಸಿದ) ಮೈಯಿಳಿತ; ಗರ್ಭಪಾತ; ಅಕಾಲ ಜನನ.
  • (ವೈದ್ಯಶಾಸ್ತ್ರ) ಗರ್ಭಸ್ರಾವ; ಗರ್ಭಪಾತ; ಇಪ್ಪತ್ತೆಂಟು ವಾರಗಳ ಒಳಗಿರುವ ಪ್ರಾಯಶಃ ಬದುಕಲಾರದ ಪಿಂಡದ ಯಾ ಭ್ರೂಣದ ಹೆರಿಗೆ.
  • (ಜೀವವಿಜ್ಞಾನ) ಯಾವುದೇ ಅಂಗದ ಕುಂಠಿತ ಬೆಳವಣಿಗೆ.
  • ಕುಬ್ಜ, ಅಂಗಹೀನ, ವಿಕೃತ–ಪ್ರಾಣಿ ಯಾ ವ್ಯಕ್ತಿ.
  • (ಯೋಜನೆ, ಕಾರ್ಯ, ಉದ್ದೇಶ, ಮೊದಲಾದವುಗಳ) ವಿಫಲತೆ; ನಿಷ್ಫಲತೆ; ವ್ಯರ್ಥವಾಗುವಿಕೆ; ಅಯಶಸ್ವಿಯಾಗುವಿಕೆ.

  • abortionist
    ನಾಮವಾಚಕ
    ಗರ್ಭಸ್ರಾವಕ; ಗರ್ಭಸ್ರಾವಿಕೆ; ಕಾನೂನುಬಾಹಿರವಾಗಿ ಬಸಿರು ತೆಗೆಯುವ, ಗರ್ಭಪಾತ ಮಾಡಿಸುವ ವ್ಯಕ್ತಿ.

    abortive
    ಗುಣವಾಚಕ
  • (ವೈದ್ಯಶಾಸ್ತ್ರ) ಮೈಯಿಳಿಸುವ; ಗರ್ಭಪಾತ ಮಾಡಿಸುವ.
  • ಅಕಾಲಿಕ; ಕಾಲಕ್ಕೆ ಮುಂಚೆ ಹುಟ್ಟುವ, ಸಂಭವಿಸುವ.
  • (ಜೀವವಿಜ್ಞಾನ) (ಅಂಗಾಂಗ ಮೊದಲಾದವುಗಳ ವಿಷಯದಲ್ಲಿ) ಅಪೂರ್ಣಾವಸ್ಥೆಯ; ಅಂಕುರಾವಸ್ಥೆಯ; ಕುಂಠಿತ ಬೆಳವಣಿಗೆಯ.
  • (ಕಾರ್ಯ, ಯೋಜನೆ, ಮೊದಲಾದವುಗಳ ವಿಷಯದಲ್ಲಿ) ಕೈಗೂಡದ; ವಿಫಲ; ವ್ಯರ್ಥ; ಅಯಶಸ್ವಿ.

  • abortively
    ಕ್ರಿಯಾವಿಶೇಷಣ
  • ಮೈಯಿಳಿಸುವಂತೆ; ಗರ್ಭಪಾತವಾಗುವಂತೆ.
  • ಅಕಾಲಿಕವಾಗಿ.
  • ಬೆಳೆವಣಿಗೆ ಕುಂಠಿತವಾಗಿ.
  • (ಕಾರ್ಯ ಮೊದಲಾದವು) ಕೈಗೂಡದೆ; ವಿಫಲಗೊಂಡು.

  • abortiveness
    ನಾಮವಾಚಕ
  • (ಜನನ ಮೊದಲಾದವುಗಳ) ಅಕಾಲಿಕತೆ; ಸರಿಯಾದ ಕಾಲಕ್ಕೆ ಮುಂಚೆಯೇ ಆಗುವಿಕೆ.
  • (ಉದ್ದೇಶ, ಯೋಜನೆ, ಮೊದಲಾದವುಗಳ) ಕೈಗೂಡದಿರುವಿಕೆ; ವಿಫಲತೆ; ವೈಫಲ್ಯ; ನಿಷ್ಫಲತೆ; ವ್ಯರ್ಥವಾಗುವಿಕೆ.

  • aboulia
    ನಾಮವಾಚಕ
    (ಮನಶ್ಶಾಸ್ತ್ರ) ಸಂಕಲ್ಪಾಭಾವ; ಸಂಕಲ್ಪನಾಶ; ಸಂಕಲ್ಪಶಕ್ತಿನಾಶ; ಕೆಲವು ಮನೋರೋಗಗಳ ಯಾ ನರವ್ಯಾಧಿಗಳ ಪರಿಣಾಮವಾಗಿ, ಯಾವುದೇ ಕೆಲಸ ಮಾಡುವುದರಲ್ಲಿ ಯಾ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಕಂಡುಬರುವ ಅಸಾಮರ್ಥ್ಯ.

    abound
    ಅಕರ್ಮಕ ಕ್ರಿಯಾಪದ
  • ತುಂಬಿ ತುಳುಕು.
  • ತುಂಬಿರು; ಸಮೃದ್ಧಿಯಾಗಿರು; ಯಥೇಚ್ಛವಾಗಿರು.
  • ಕಿಕ್ಕಿರಿದಿರು; ಇಡಿಕಿರಿದಿರು; ನಿಬಿಡವಾಗಿರು: the sky abounds in stars ಆಕಾಶವು ನಕ್ಷತ್ರಗಳಿಂದ ನಿಬಿಡವಾಗಿದೆ.

  • about
    ಕ್ರಿಯಾವಿಶೇಷಣ ಪದಗುಚ್ಛ ನುಡಿಗಟ್ಟು
  • ಹೊರಗೆ; ಸುತ್ತ: ಸುತ್ತಲೂ: compass it about ಅದರ ಸುತ್ತ ಸುತ್ತುವರಿ.
  • (ಒಂದು ಕೇಂದ್ರದ) ಸುತ್ತಲೂ; ಸುತ್ತಮುತ್ತ: ಎಲ್ಲ–ಕಡೆಗೂ, ದಿಕ್ಕಿಗೂ: look about ಸುತ್ತಲೂ ಯಾ ಸುತ್ತಮುತ್ತ ನೋಡು. he was taking her about a lot these days ಅವಳನ್ನು ಎಲ್ಲ ಕಡೆಗೂ (ಅಂದರೆ ಹೋಟೆಲು, ಸಿನಿಮಾ, ಔತಣ, ಮೊದಲಾದವುಗಳಿಗೆ) ಬಹಳ ಕರೆದುಕೊಂಡು ಹೋಗುತ್ತಿದ್ದ.
  • ಹತ್ತಿರದಲ್ಲಿ; ಸಮೀಪದಲ್ಲಿ: hang about ಹತ್ತಿರದಲ್ಲಿಯೇ ಸುಳಿದಾಡುತ್ತಿರು.
  • (ಸಂಖ್ಯೆ, ಪ್ರಮಾಣ, ಗುಣ, ಮೊದಲಾದವುಗಳ ವಿಷಯದಲ್ಲಿ) ಹತ್ತಿರ ಹತ್ತಿರ; ಸರಿಸುಮಾರು; ಹೆಚ್ಚುಕಡಮೆ: about half ಹೆಚ್ಚುಕಡಮೆ ಅರ್ಧದಷ್ಟು. about fifty ಸುಮಾರು ಐವತ್ತು. about right ಹೆಚ್ಚುಕಡಮೆ ಸರಿ. much about ಹತ್ತಿರ ಹತ್ತಿರ. I’m about tired of this ನನಗೆ ಇದರ ಬಗ್ಗೆ ಹೆಚ್ಚುಕಡಮೆ ಬೇಸರ ಹತ್ತಿದೆ.
  • ಸರದಿಯಲ್ಲಿ; ಪಾಳಿಯಲ್ಲಿ: take turns about ಸರದಿಯಂತೆ ಕೆಲಸದಲ್ಲಿರು. on duty (week and) week about ಕೆಲಸದ ಸರದಿ ವಾರದಲ್ಲಿ.
  • ಹಿಂದುಮುಂದಾಗಿ; ವಿರುದ್ಧ ದಿಕ್ಕಿಗೆ ತಿರುಗಿ: right about turn ಬಲಕ್ಕೆ ತಿರುಗಿ ಹಿಂದು ಮುಂದಾಗು. right about face = right about turn. about turn (ಸೈನ್ಯ ಮೊದಲಾದವುಗಳ ಕವಾಯತ್ತಿನಲ್ಲಿ ಒಂದು ಆಜ್ಞೆ) ಹಿಂದು ಮುಂದಾಗು. about face (ಅಮೆರಿಕನ್‍ ಪ್ರಯೋಗ) = about turn. the wrong way about ವಿರುದ್ಧ ದಿಕ್ಕಿನಲ್ಲಿ.
  • (ಒಂದರಲ್ಲಿ) ತೊಡಗಿ; ಮಾಡುತ್ತ; ನಿರತನಾಗಿ; ಉದ್ಯುಕ್ತನಾಗಿ: the building which is now about ಈಗ ಕಟ್ಟಲಾಗುತ್ತಿರುವ ಕಟ್ಟಡ.
  • ಅಲ್ಲಿ ಇಲ್ಲಿ; ಅಲ್ಲಲ್ಲಿ; ಚೆಲ್ಲಾಪಿಲ್ಲಿಯಾಗಿ; ಅಸ್ತವ್ಯಸ್ತವಾಗಿ: tools lying about ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಉಪಕರಣಗಳು. measles is about ದಡಾರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. move about ಅಲ್ಲಿಂದಿಲ್ಲಿಗೆ ಸುತ್ತಾಡು.
  • ಕಾರ್ಯಗತಿಯಲ್ಲಿ; ಘಟನಾವಳಿಯ ಗತಿಯಲ್ಲಿ: brought it about (ಕಾರ್ಯಗತಿಯಲ್ಲಿ) ಅದನ್ನು ಮಾಡಿದೆ; ಅದು ಆಗುವಂತೆ ಮಾಡಿದೆ. it came about(ಘಟನೆಗಳ ಅನುಕ್ರಮದಂತೆ) ಅದು ಸಂಭವಿಸಿತು.

  • about
    ಉಪಸರ್ಗ ಪದಗುಚ್ಛ
  • ಹೊರಗೆ; ಸುತ್ತಲೂ: the fields about Mysore ಮೈಸೂರಿನ ಸುತ್ತಲೂ ಇರುವ ಜಮೀನು.
  • ಅಲ್ಲಿ; ಸ್ಥಳದಲ್ಲಿ; ಜಾಗದಲ್ಲಿ: about street corners ರಸ್ತೆಯ ಮೂಲೆಗಳಲ್ಲಿ. he is about my path ಅವನು ನನ್ನ ದಾರಿಯಲ್ಲಿದ್ದಾನೆ.
  • (ಒಂದು ಕೇಂದ್ರದಿಂದ) ಸುತ್ತುಮುತ್ತ; ಸುತ್ತಲೂ; ಎಲ್ಲ-ಕಡೆಯಲ್ಲಿಯೂ, ದಿಕ್ಕಿನಲ್ಲಿಯೂ: look about you ನಿನ್ನ ಸುತ್ತಲೂ ನೋಡು. traveling about the world ಪ್ರಪಂಚದ ಎಲ್ಲ ಕಡೆಗೂ ಹೋಗುತ್ತ.
  • ಹತ್ತಿರ; ಸಮೀಪದಲ್ಲಿ: people about us ನಮ್ಮ ಹತ್ತಿರದಲ್ಲಿರುವ ಜನ. objects about us ನಮ್ಮ ಸುತ್ತಮುತ್ತಲ ವಸ್ತುಗಳು.
  • ಒಯ್ದ; ಹತ್ತಿರ ಇಟ್ಟುಕೊಂಡ: I have no money about me ನನ್ನ ಹತ್ತಿರ (ಯಾ ನನ್ನ ಜೇಬಿನಲ್ಲಿ) ಸ್ವಲ್ಪವೂ ಹಣವಿಲ್ಲ.
  • ಅಲ್ಲಿ ಇಲ್ಲಿ; ಚೆಲ್ಲಾಪಿಲ್ಲಿಯಾಗಿ; ಅಸ್ತವ್ಯಸ್ತವಾಗಿ: dotted about the fields ಚುಕ್ಕೆ ಹೊಯ್ದಂತೆ ಜಮೀನಿನಲ್ಲಿ ಚೆಲ್ಲಿರುವ.
  • ಹತ್ತಿರ ಹತ್ತಿರ; ಹೆಚ್ಚುಕಡಮೆ ನನ್ನ ಗಾತ್ರ.
  • ತೊಡಗಿ; ನಿರತನಾಗಿ; ಉದ್ಯುಕ್ತನಾಗಿ: about my father’s business ನನ್ನ ತಂದೆಯ ವ್ಯಾಪಾರದಲ್ಲಿ ತೊಡಗಿ. send him about his business ಅವನ ಕೆಲಸದಲ್ಲಿ ತೊಡಗಿರುವಂತೆ, ಅವನ ಕೆಲಸ ನೋಡಿಕೊಳ್ಳುವಂತೆ–ಕಳುಹಿಸು. what are you about? ನೀನು ಯಾವುದರಲ್ಲಿ ತೊಡಗಿದ್ದೀಯೆ? ನೀನು ಏನು ಮಾಡಲು ಹೊರಟಿದ್ದೀಯೆ? while you are about it ನೀನು ಅದನ್ನು ಮಾಡುತ್ತಿರುವಾಗ; ನೀನು ಅದರಲ್ಲಿ ತೊಡಗಿರುವಾಗ.
  • ಒಂದನ್ನು ಕುರಿತು; ಒಂದರ–ಬಗ್ಗೆ, ವಿಷಯವಾಗಿ; ಒಂದಕ್ಕೆ ಸಂಬಂಧಿಸಿದಂತೆ: quarrels about money ಹಣದ ವಿಷಯವಾಗಿ ಜಗಳಗಳು. have read about it ಅದನ್ನು ಕುರಿತು ಓದಿದ್ದೇವೆ. symmetry about a line ರೇಖೆಗೆ ಸಂಬಂಧಿಸಿದಂತೆ ಸಮಸೂತ್ರತೆ ಯಾ ಸಮಪಾರ್ಶ್ವತೆ.

  • about
    ಸಕರ್ಮಕ ಕ್ರಿಯಾಪದ
    (ಹಡಗಿನ) ದಿಕ್ಕು ಬದಲಾಯಿಸು: (ಹಡಗನ್ನು) ವಿರುದ್ಧ ದಿಕ್ಕಿಗೆ ತಿರುಗಿಸು.


    logo