logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಮುಚ್ಚಳ
(ನಾ)
ಗಡಿಗೆ, ಪಾತ್ರೆಗಳನ್ನು ಮುಚ್ಚಲು ಬಳಸುವ ವಿವಿಧ ಗಾತ್ರದ ಮಣ್ಣಿನ ಪಾತ್ರೆಗಳ ಮೇಲೆ ಮುಚ್ಚಲು ಅನುವಾಗುವಂತೆ ತಯಾರಿಸಿದ ಮಣ್ಣಿನ ಮುಚ್ಚಳ. ಮುಚ್ಚಳಗಳನ್ನು ಸಾಮಾನ್ಯವಾಗಿ ಕೈಯಿಂದ ತೀಡಿ ಮಾಡುವರು. ಅಲ್ಯೂಮಿನಿಯಮ್ ಬಳಕೆಗೆ ಬರುವ ಮುನ್ನ ಬಡವರು ಮತ್ತು ಜೈಲುಗಳಲ್ಲಿ ಖೈದಿಗಳಿಗೆ ಊಟಕ್ಕೆ ಕೊಡಲು ಮುಚ್ಚಳಗಳನ್ನು ಬಳಸುತ್ತಿದ್ದರು. ಮುಚ್ಚಳದಲ್ಲಿ ತಿಂದು ಮೊಗೇಲೆ ಕೈ ಅದ್ದಿದಂಗೆ (ಗಾದೆ) ಗಡಿಗೆ ಉಸಿರು ಕಟ್ಟಿಸುವಾಕಿ (ಒಗಟು)

ಮುಟ್ಟಿ
(ನಾ)
ಮಣ್ಣಿನ ಪಾತ್ರೆ, ತುಳುಪದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಂದಿ ಅಂಗಡಿಗಳಲ್ಲಿ ಬಳಸುವರು.

ಮುಡಪಿನ ಕುಳ್ಳಿ
(ನಾ)
ದೇವರ ಮುಡುಪಾಗಿ ಹಣ ಸಂಗ್ರಹಿಸಿ ಇಡುವ ಚಿಕ್ಕ ಗಡಿಗೆ.

ಮೃತ್ ಶಿಲ್ಪ
(ನಾ)
ಮಣ್ಣಿನಲ್ಲಿ ಮಾಡಿದ ಕೊರೆದ ಶಿಲ್ಪ. ಮಾತೃದೇವತೆಯ ಸುಂದರವಾದ ಅನೇಕ ಮಣ್ಣಿನ ಮೂರ್ತಿಗಳು ಹರಪ್ಪ ಉತ್ಖನನದಲ್ಲಿ ದೊರೆತಿವೆ. ಗುಪ್ತರ ಕಾಲದಲ್ಲಿ ಮೃತ್ ಶಿಲ್ಪ ಬಹಳಷ್ಟು ಉನ್ನತಿಯನ್ನುಪಡೆಯಿತು. "Shilpa denotes both sculpture in stone and in clay"
">

ಮೃತ್ತಿಕೆ
(ನಾ)
ಮಣ್ಣು, ಕುಂಬಾರಿಕೆಯ ಮಣ್ಣು ಮಣ್ಣಿನಿಂದ ಮಾಡಿದ ಮೃಣ್ಮಯ ವಸ್ತುಗಳು "ಚಕ್ರಿಯ ಕುಲವಾಸದ ಮೃತ್ತಿಕೆಯಂತೆ" (ಮಾದಾರ ಚೆನ್ನಯ್ಯ) ಮೃತ್ತಿಕೆಯ ಹರಿಗೋಲನೇರಿ ನದಿಯ ತಪ್ಪಲಿಗೆ ಹೋಗಬಹುದೆ? (ಕೂಗಿನ ಮಾರಯ್ಯ)
">

ಮುದ್ದೆ ಕೈಪಳ
(ನಾ)
ಮುದ್ದೆ ಮಾಡಲು ಬಳಸುವ ತಳದಿಂದ ತುದಿಯವರೆಗೆ ಒಂದೇ ಆಕಾರದ ಉದ್ದನೆಯ ಚಟಗಿ.

ಮೂಸೆ
(ನಾ)
ಅಕ್ಕಸಾಲಿಗರು - ಪತ್ತಾರರು ಬಂಗಾರವನ್ನು ಕರಗಿಸಲು ಬಳಸುವ ಮಣ್ಣಿನ ಸಾಧನ.

ರಂಜಣಿಗೆ
(ನಾ)
ಕೊಪ್ಪರಿಗೆ, ದೊಡ್ಡ ಪಾತ್ರೆ, ವಾಡೆ, ನೀರು ಮತ್ತು ಕಾಳುಕಡಿ ಹಾಕಿಡಲು ಬಳಸುವ ಸಾಧನ, ರಂಜಣಿಗೆ ಎನ್ನುವ ಪದ ವಾಡೆಗೆ ಬದಲಾಗಿ ವಿಜಾಪುರ ಜಿಲ್ಲೆಯಲ್ಲ ಹೆಚ್ಚು ಬಳಕೆಯಲ್ಲಿದೆ ನೋಡಿ - ವಾಡೆ

ರಜ
(ನಾ)
ಕಸ, ಆವಿಗೆ ಸುಡುವಾಗ ಉಪಯೋಗಿಸುವ ಸೆದೆ.

ರಾಡಿ
(ನಾ)
ಕೌಳಿ, ಕೆಸರು, ಕುಂಬಾರಗಿತ್ತಿ ಕೈಯಿಂದ ಮಡಕೆ ಮಾಡುವಾಗ, ಕುಂಬಾರ ತಿಗುರಿಯಿಂದ ಮಡಕೆ ಗೇಯುವಾಗ ಕೈಗೆ ಅಂಟಿಕೊಳ್ಳುವ ತೆಳುವಾದ ಮಣ್ಣು. "ಕೈಯಾನ ರಾಡಿ ತೊಕ್ಕೋಳೋ" (ಆಡುಮಾತು. )
">


logo