logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಧೂಪದಾರತಿ
(ನಾ)
ಧೂಪಾರತಿ ದೂಪುಂಡಿಗೆ, ದೇವರ ಪೂಜೆ ಮಾಡುವಾಗ ಧೂಪ ಲೋಬಾನ ಹಾಕಲು ಮಾಡಿದ ಸಾಧನ.

ಧೂಪುಂಡಿಗೆ
(ನಾ)
ಧೂಪ ಹಾಕುವ ಬಟ್ಟಲು ಇದನ್ನು ಮಣ್ಣಿನಿಂದ ಮಾಡಿರುತ್ತಾರೆ. ನೆಲದ ಮೇಲೆ ಸರಿಯಾಗಿ ನಿಲ್ಲಲು ತಳಭಾಗದಲ್ಲಿ ವೃತ್ತಾಕಾರದ ಕಂಠ ಇರುತ್ತದೆ. ಈ ಬಟ್ಟಲಿಗೆ ಅಗಲವಾದ ಬಾಯಿ ಇರುತ್ತದೆ. ಇದರಲ್ಲಿ ಗಂಧ, ಪಚ್ಚೆ ಕರ್ಪೂರಗಳನ್ನು ಹಾಕಿ ಅದರ ಮೇಲೆ ಬೆಂಕಿ ಕೆಂಡಗಳನ್ನು ಇಡುವರು.

ನಾದು
(ಕ್ರಿ)
ಉಜ್ಜುವುದು, ಮಡಿಕೆ ಮಾಡಲು ಹದಮಾಡಿಟ್ಟ ಮಣ್ಣನ್ನು ಚೆನ್ನಾಗಿ ಮಿದಿಯುವುದು. ಕಲಸುವುದು.

ನೀರಹರವಿ
(ನಾ)
ನೀರು ತುಂಬಿದ ಹರವಿ, ಗ್ರಾಮದೇವತೆಯ ಹಬ್ಬದ ಸಂದರ್ಭದಲ್ಲಿ ಕುಂಬಾರನ ಮನೆಯಿಂದ ಹಾಲ ಹರವಿ ಜೊತೆಗೆ ನೀರಹರವಿಯನ್ನು ಒಯ್ದು ಹಾಲಹರವಿಯ ಜೊತೆ ಸ್ಥಾಪಿಸುವರು.

ನೀಲಗಾರ ಕುಂಬಾರ
(ನಾ)
ಸೀರಿಗೆ ನೀಲಿಬಣ್ಣ ಹಾಕುವ, ನೀಲಗಾರ ಕುಂಬಾರರಿದ್ದರು. ಅದೇ ಅವರ ಉದ್ಯೋಗವಾಗಿತ್ತು.

ನೀವಿ
(ಕ್ರಿ)
ತೀಡು, ಬೋಸಿತೀಡುವುದು.

ನುಣಿಸು
(ಕ್ರಿ)
ನುಣುಪು ಮಾಡುವುದು. ಮಡಿಕೆಯನ್ನು ತಯಾರಿಸಿದ ಮೇಲೆ ಕೊನೆಯ ಹಂತದಲ್ಲಿ ತೆಳುವಾದ ಸೊಳದಿಂದ ಗಟ್ಟಿಸುವ ಕ್ರಿಯೆಗೆ ನುಣಿಸುವುದು ಎನ್ನುವರು.

ನುಚ್ಚಿನಗಡಿಗಿ
(ನಾ)
ಜೋಳದ ನುಚ್ಚನ್ನು ಮಾಡಲು ಬಳಸುವ, ಮಡಕೆ, ಅಂಬ್ಲಿಗಡಿಗೆ, ಗಂಜಿಮಡಕೆ "ನುಚ್ಚಿನ ಗಡಗಿ ಸ್ವಚ್ಛ ತೊಳಿಯಮ್ಮ ಎಚ್ಚರದಿಂದ ನಿಗಾ ಇಡಮ್ಮ" ತತ್ವಪದ - ನಿಂಬೋಳಿ ತಿಪ್ಪಣ್ಣ
">

ಪಚೇಲಿ
(ನಾ)
ಪಚೇಲಿ, ನೀರನ್ನು ಕಾಯಿಸುವ ಗಡಿಗೆ, ನೀರಿನ ತಪ್ಪಲೆ ಆಚಾರ ಹೇಳೋದು ಪಚೇಲ್ಯಾಗ ಉಚ್ಚಿ ಹೊಯ್ಯೋದು. (ಗಾದೆ)

ಪಡ್ಡಿನ ಹಂಚು
(ನಾ)
ಗುಳಿ ಇರುವ ಮಣ್ಣಿನ ಹೆಂಚು. ಪಡ್ಡನ್ನು ಮಾಡಲು ಇದನ್ನು ಬಳಸುವರು. ಇದು ಹೆಚ್ಚು ದಪ್ಪವಾಗಿದ್ದು ಅದರಲ್ಲಿ ಆರರಿಂದ ಹನ್ನೆರಡು ಗುಳಿಗಳುಳ್ಳ ಹಂಚನ್ನು ತಯಾರಿಸುವರು. ಗ್ರಾಮೀಣ ಪ್ರದೇಶಗಳಲ್ಲಿ ಅಕ್ಕಿಹಿಟ್ಟಿನಿಂದ ಪಡ್ಡನ್ನು ತಯಾರಿಸಲು ಈ ಹಂಚನ್ನು ಬಳಸುವರು.


logo