logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಹೊನ್ನೆ
(ನಾ)
ಜರಡಿ, ಸಾಣಿಗೆ, ಮಣ್ಣಿನಲ್ಲಿರುವ ಕಸ-ಕಡ್ಡಿಯನ್ನು ಬೇರ್ಪಡಿಸಲು

ಹೊಮ್ಮಣ್ಣು
(ನಾ)
ಬಿಂಗ, ಒಂದು ವಿಧದ ಮಣ್ಣು, ಹೆಂಟೆಯ ರೂಪದಲ್ಲಿ ದೊರೆಯುವುದು. ಇದು ಬೂದಿ ಬಣ್ಣದ್ದಿರುವುದು. ಮಡಕೆಗಳಿಗೆ ಹೊಳಪು ಬರಲು ಈ ಮಣ್ಣನ್ನು ಹಸಿ - ಮಡಕೆಗಳಿಗೆ ಹಚ್ಚುವರು. ಈ ಮಣ್ಣು ಧಾರವಾಡ, ಹಾವೇರಿ ಮತ್ತು ಬೆಳಗಾಂವಿ ಜಿಲ್ಲೆಯಲ್ಲಿ ಭೂಮಿಯಲ್ಲಿ ದೊರೆಯುವುದು.

ಹೋಕು
(ನಾ)
ಬಳಕೆಗೆ ನಿರುಪಯುಕ್ತವಾದ ಸುಟ್ಟ ಮಡಿಕೆ. ಆವಿಗೆಯಲ್ಲಿ ಮಡಕೆಗಳನ್ನು ಸುಟ್ಟಾಗ ಕೆಲವು ಹಸಿ ಬಿಸಿ ಸುಡುವವು ಮತ್ತು ಕೆಲವು ಮುಕ್ಕಾಗುವವು. ಇಂಥ ಗಡಿಗೆಗಳಿಗೆ ಹೋಕು ಎನ್ನುವರು. 'ಮಳೆಗಾಲ್ದಾಗ ಆವಿಗಿ ಸುಟ್ರ ಹೋಕ ಬಾಳಪ್ಪಾ' ಕುಂಬಾರರ ಆಡುನುಡಿ.


logo