logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಹೂಕುಂಡ
(ನಾ)
ಹೂದಾನಿ, ಕುಂಡ, ಫ್ಲವರ್ ಪಾಟ್, ಮನೆ, ಆಫೀಸು ಮುಂತಾದ ಸ್ಥಳಗಳಲ್ಲಿ ವಿವಿಧ ಗಿಡ-ಬಳ್ಳಿಗಳನ್ನು ಬೆಳಸಲು ಮಾಡಿರುವ ಕುಂಡ. 'ಹೂವಿನ ಗೋಣಮುರಿದು ಹೂದಾನಿಯಲ್ಲಿ ಇರಿಸುತ್ತೇನೆ' (ಸವಿತಾ ನಾಗಭೂಷಣ)

ಹೂಜಿ
(ನಾ)
1. ಹೂಜೆ, ಮಣ್ಣಿನಿಂದ ಮಾಡಿದ ಉದ್ದವಾದ ಕಂಠವಿರುವ ನೀರು ತುಂಬುವ ಪಾತ್ರೆ. ನೀರು ತುಂಬಿಡುವ ಪಾತ್ರೆ. 2. ಮಣ್ಣಿನ ಮಗೆಯ ಮೇಲೆ ಇರಿಸುವ ಸ್ತೀ ದೇವತೆಯ ಆಕಾರದ ಆರೇಳು ಸೆಂ.ಮೀ. ಎತ್ತರದ ಮಣ್ಣಿನ ಮುಚ್ಚಿಗೆ ಇದನ್ನೆ ಕೆಲವೆಡೆ ಭರಣಿ ಎಂತಲೂ ಕರೆಯುವರು. 'ಓಜನ್ ಒಕ್ಕಲು ಅಲ್ಲ ಹೂಜಿ ಭಾಣ್ದ ದೊಳಲ್ಲ' (ಸರ್ವಜ್ಞ) ಪೂಜೆ ಮಾಡಿದರೂ ಹೂಜೆ ಸಜ್ಜಾಗಲಿಲ್ಲ (ಗಾದೆ)

ಹೆಂಡದ ಮಡಿಕೆ
(ನಾ)
ಹೆಂಡ ಹಾಕಿಡುವ ಮಡಕೆ ಸೆರೆಗಡಿಗೆ ಬಳಕೆಗನುಗುಣವಾಗಿ ಇವುಗಳನ್ನು ವಿವಿಧ ವಿಧದಲ್ಲಿ ತಯಾರಿಸುವರು. ಈಚಲ ಮರ ಮತ್ತು ತಾಳೆಮರದಿಂದ ಹೆಂಡ ಇಳಿಸಲು ಮರಕ್ಕೆ ಕಟ್ಟುವ ಮಡಿಕೆಗೆ ಗೊಬ್ಬೆ, ಗೊಬ್ಬಿ, ಸುಬ್ಬಿ ಎಂದು ಕರೆಯುವರು. ಇದರ ಕಂಠ ಚಿಕ್ಕದಾಗಿರುವುದು. ಹೆಂಡದ ಮಡಕೆ ಗೊಬ್ಬೆಗಿಂತ ಸ್ವಲ್ಪ ಭಿನ್ನವಾಗಿದ್ದು, ಗಾತ್ರದಲ್ಲಿ ದೊಡ್ಡದಿರುತ್ತದೆ ರೋಮನ್ನರು ದೊಡ್ಡ ದೊಡ್ಡ ಮಡಿಕೆಗಳಲ್ಲಿ ಮಧ್ಯವನ್ನು ತುಂಬಿ ಹಡಗುಗಳ ಮೂಲಕ ಹೊರದೇಶಗಳಿಗೆ ಮಧ್ಯವನ್ನು ರವಾನಿಸುತ್ತಿದ್ದರು. ಅವರು ಆ ಮಡಿಕೆಗಳಿಗೆ ಎಂಫೋರಾ ಎಂದು ಕರೆಯುತ್ತಿದ್ದರು. ಕಳ್ಳ ಭಟ್ಟಿ ಇಳಿಸಲು ದೊಡ್ಡ ಪಡಗವನ್ನು ಬಳಸುವರು. "ಭಾಂಡ ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಕೆಯ ಹೊರಗೆ ತೊಳೆದಂತೆ" (ಬಸವಣ್ಣ) "ಸೆರೆಗಡಿಗೆಗೆ ಬೂದಿಸಲೆ ಬಳಿದೋಡೇನು?" (ಯೋಗಿ ವೇಮನ)
">

ಹೆಂಡ ಕುಡಿಯುವ ಮಡಿಕೆ
(ನಾ)
ಪಾನಪಾತ್ರೆ, ಚಿಕ್ಕ ಗಡಿಗೆ, ಸುರೆಯಗಡಿಗೆ, ಇದು ಲೋಟಾದಂತೆ ಇರುವುದು.

ಹೆಂಟೆ
(ನಾ)
ಮಣ್ಣಿನ ಹೆಂಡೆ

ಹೆಡಿಗೆ
(ನಾ)
ದೊಡ್ಡ ಗಾತ್ರದ ಪಿಂಗಾಣಿ ಭರಣಿ, ಬುಟ್ಟಿ, ರಾಜರ ಕಾಲದಲ್ಲಿ ಅರಮನೆಗಳಲ್ಲಿ ದ್ರಾಕ್ಷಾರಸ ಸಂಗ್ರಹಿಸಲು ಇದನ್ನು ಬಳಸುತ್ತಿದ್ದರು. ಕುಂಬಾರರು ಅದರಲ್ಲಿ ಮಡಕೆ ತುಂಬಿಕೊಂಡು ಮಾರುವರು.

ಹೆಪ್ಪಿನ ಗಡಿಗೆ
(ನಾ)
ಹಾಲು ಕಾಸಿ ಹೆಪ್ಪು ಹಾಕಲು ಬಳಸುವ ಗಡಿಗೆ. ಇದಕ್ಕೆ ಹಾಲಿನ ಗಡಿಗೆ ಎಂತಲೂ ಕರೆಯುವರು.

ಹೆರಿ
(ಕ್ರಿ)
ಮಣ್ಣು ಹೆರಿ, ಕುಂಬಾರರು, ಹದಮಾಡಿಟ್ಟ ಮಣ್ಣನ್ನು ಒಟ್ಟುವರು ಬೇಕಾದಾಗ, ಹೆರಿಕತ್ತಿ, ಚೂರಿಯಿಂದ ಮಣ್ಣನ್ನು ಹೆರೆದು ತೆಗೆಯುವರು.

ಹೆರಿದೆಬ್ಬೆ
(ನಾ)
ಚಿಕ್ಕತಗಡಿನ ತುಂಡು, ಕುಂಬಾರಗಿತ್ತಿಯರು ಅಚ್ಚಿನಲ್ಲಿ ಮಾಡಿದ ಮಡಕೆಗಳ ತಳವನ್ನು ನುಣ್ಣಗೆ ಮಾಡಲು ತಗಡಿನ ತುಂಡನ್ನು ಬಳಸುವರು.

ಹೆರೆಬಳೆ
(ನಾ)
ಬ್ಲೇಡವುಳ್ಳ ದುಂಡನೆಯ ಕಬ್ಬಿಣದ ಬಳೆ ಮಡಕೆ ಮಾಡಲು ತಂದ ಮಣ್ಣನ್ನು ರಾಸಿ ಹಾಕಿಟ್ಟನಂತರ ರಾಶಿಯಿಂದ ಕೆಲಸಕ್ಕೆ ಬೇಕಷ್ಟು ಮಣ್ಣನ್ನು ಹೆರೆದು ತೆಗೆಯುವ ಬ್ಲೇಡನ್ನೊಳಗೊಂಡ ದುಂಡನೆಯ ಕಬ್ಬಿಣದ ಬಳೆ.


logo