logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಹಳಗ
(ನಾ)
ಹಳಗೆ, ನೀರು ಕಾಯಿಸುವ ಗಡಿಗೆ

ಹಾಂಡ
(ನಾ)
ಕುಂಬಾರ, ಕುಲಾಲ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಕುಂಬಾರರು ತಮ್ಮ ಹೆಸರಿನ ಮುಂದೆ ಹಾಂಡ ಎಂದು ಹಚ್ಚಿಕೊಳ್ಳುವರು "ಹಂಡೆ" ಪದದಿಂದ ಹಾಂಡ ಬಂದಿರಬೇಕು.
">

ಹ್ಯಾಂಗಿಂಗ್ ಪಾಟ್
(ನಾ)
ಇದು ಇಂಗ್ಲಿಷ್ ಶಬ್ದ. ಕನ್ನಡ ಪದ ಎನ್ನುವಷ್ಟರ ಮಟ್ಟಿಗೆ ದಕ್ಷಿಣ ಕರ್ನಾಟಕದಲ್ಲಿ ಬಳಕೆಯಲ್ಲಿದೆ. ಇದರ ಕಂಠಕ್ಕೆ ಮೂರು ಕಡೆ ರಂಧ್ರ ಮಾಡಿ ಹಗ್ಗ ಅಥವಾ ತಂತಿಯಿಂದ ತಕ್ಕಡಿ ರೀತಿ ಕಟ್ಟಿ ಮಣ್ಣನ್ನು ತುಂಬಿ ಅಲಂಕೃತ ಸಸ್ಯ ಬೆಳೆಸಿ ಮನೆಮುಂದುಗಡೆ ತೂಗುಹಾಕುವರು.

ಹಾರುಹೊಡಿ
(ಕ್ರಿ)
1. ಆವಿಗೆಯನ್ನು ತೆಗೆದು ಮಡಕೆಗಳು ಆರಲೆಂದು ಬಿಡುವುದು. 2. ಮಡಕೆಗಳು ಕೆಂಪುಬಣ್ಣ ಪಡೆಯಲೆಂದು ಆವಿಗೆ ಹಿಂದೆ ಇಟ್ಟ ಕಿಂಡಿಗಳನ್ನು ತೆರೆದಿಡುವರು.

ಹಾಲರವಿ
(ನಾ)
ಹಾಲರವಿ, ಹಾಲು ತುಂಬಿದ ಹರವಿ, ಗ್ರಾಮ ದೇವತೆಯ ಹಬ್ಬದಲ್ಲಿ ಕುಂಬಾರರ ಮನೆಯಿಂದ ಒಯ್ಯುವರು.

ಹಾಸಗಲ್ಲು
(ನಾ)
ಆಡಿಗಲ್ಲು. ಹೆಂಗಸರು ಮಣ್ಣಿನ ಕೆಲಸ ಮಾಡುವಾಗ ಉಪಯೋಗಿಸುವ ದುಂಡಗಿನ ಚಪ್ಪಟೆಯಾದ ಕಲ್ಲು. ಸಾಮಾನ್ಯವಾಗಿ 30 ಸೆಂ.ಮೀ. ವ್ಯಾಸವುಳ್ಳದ್ದು ನೆಲ್ಲದಲ್ಲಿಯೆ ಶಾಶ್ವತವಾಗಿ ಕೂರಿಸಿರುತ್ತಾರೆ. ಹಾಸುಗಲ್ಲಿನ ಮೇಲೆ ಮಣ್ಣಿನ ಉರುಳೆಗಳನಿಟ್ಟು ಜಜ್ಜುವ ಕಲ್ಲಿನಿಂದ ಉರುಳೆಯನ್ನು ಜಜ್ಜಿ ಚಪ್ಪಟೆ ಮಾಡಿ ಅಚ್ಚಿಗೆ ಹಾಕುವರು.

ಹಿಡಕಿ
(ನಾ)
ಹಿಡಿಕೆ, ಮಣ್ಣಿನ ವಿವಿಧ ಮಡಿಕೆಗಳನ್ನು ಕೈಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಮಣ್ಣಿನ ಹಿಡಿಕೆಗಳನ್ನು ಪ್ರತ್ಯೇಕವಾಗಿ ತಯಾರಿಸಿ, ಹೂಜಿ ತತ್ರಾಣಿ, ಜಗ್ಗು ಇತ್ಯಾದಿ ಮಣ್ಣಿನ ವಸ್ತುಗಳಿಗೆ ಅವು ಅರೆ ಹಸಿ ಇರುವಾಗಲೆ ಅಂಟಿಸುವರು.

ಹಿರೆಕೊಪ್ಪರಿಗೆ
(ನಾ)
ಮಣ್ಣಿನ ದೊಡ್ಡ ಪಾತ್ರೆ, ಜಾತ್ರೆಗಳಲ್ಲಿ ಹುಗ್ಗಿ ಮಾಡಲು ಹಾಗೂ ನೀರು ತುಂಬಿಡಲು ಬಳಸುವರು ಬೆಳಗಾಂವ್ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಹುಗ್ಗಿ ಗಡಿಗೆ
(ನಾ)
ಹುಗ್ಗಿ ಮಾಡಲು ಬಳಸುವ ಗಡಿಗೆ

ಹುಡಿಮಣ್ಣು
(ನಾ)
ಪುಡಿ, ಹುಡಿಮಣ್ಣು ಹೆಂಟೆಯನ್ನು ಒಡೆದು ಹುಡಿ ಮಾಡಿದ ಮಣ್ಣು ನೀರುಹಾಕದೆ ಇರುವಂತಹುದು.


logo