logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅನರ್ಜಿ
(ವೈ) ಒಂದು ಪ್ರತಿಜೈವಿಕವನ್ನು (ಆಂಟಿ ಬಯೋಟಿಕ್) ಎರಡನೆಯ ಸಲ ಚುಚ್ಚಿದಾಗ ಸಾಮಾನ್ಯವಾಗಿ ಅಪರಕ್ಷಣೆಯನ್ನು ನಿರೀಕ್ಷಿಸುತ್ತಾರೆ. ಆದರೆ ಅಪರಕ್ಷಣೆ ಸಂಭವಿಸು ವುದಿಲ್ಲ. ಆ ಸ್ಥಿತಿಯೇ ಅನರ್ಜಿ ಅಥವಾ ಅಪರಕ್ಷಣ ಕೊರತೆ. ಇದಕ್ಕೆ ಅಪರಕ್ಷಣೆಯಲ್ಲಿ ಪಾಲ್ಗೊಳ್ಳುವ ಜೀವಕೋಶ/ರಾಸಾಯನಿಕಗಳ ಕೊರತೆ ಅಥವಾ ನಿಗ್ರಹ ಕಾರಣವಾಗಿರಬಹುದು
anergy

ಅನಲಾಗ್ ಕಂಪ್ಯೂಟರ್
(ಕಂ) ತಾನು ನಿರ್ವಹಿಸುವ ಮಾಪನೆಗಳನ್ನು ಪ್ರತಿನಿಧಿಸಲು ಮತ್ತು ಅವುಗಳಲ್ಲಿ ಪರಿಕರ್ಮಗಳನ್ನೆಸಗಲು ಅಂಕಿಗಳಿಗೆ ಬದಲಾಗಿ ವೋಲ್ಟೇಜ್, ಒತ್ತಡ ಮುಂತಾದ ಸತತವಾಗಿ ಬದಲಾಗುತ್ತಿರುವ ಭೌತ ಪರಿಮಾಣಗಳನ್ನು ಬಳಸುವ ಸಾಧನ. ಈಗ ಸಾಮಾನ್ಯವಾಗಿ ವೈಜ್ಞಾನಿಕ ಪ್ರಯೋಗಗಳಲ್ಲಿ, ಕೈಗಾರಿಕಾ ನಿಯಂತ್ರಣ ಇತ್ಯಾದಿಗಳಲ್ಲಿ ಬಳಸುವ ಒಂದು ವಿಶೇಷವಾದ ಉದ್ದೇಶ ಪಡೆದಿರುವ ಕಂಪ್ಯೂಟರ್. ಇದು ಸಾದೃಶ್ಯ ಕಂಪ್ಯೂಟರ್. ಹೋಲಿಸಿ: ಡಿಜಿಟಲ್ ಕಂಪ್ಯೂಟರ್
analogue computer

ಅನವಧಿಯುತ
(ಭೌ) ಸಾಕಷ್ಟು ಮಂದನದ ವಿದ್ಯುತ್ ಪ್ರವಾಹ. ಯಾಂತ್ರಿಕ ಅಥವಾ ಧ್ವನಿಕ ಕಂಪನಶೀಲ ವ್ಯವಸ್ಥೆಯನ್ನು ಆಘಾತಿಸಿದಾಗ ನಿರ್ದಿಷ್ಟ ಅವಧಿಗಳಲ್ಲಿ ಕಂಪಿಸದು. ಅನಾವರ್ತಕ
aperiodic

ಅನಾಖ್ಯಾತ (ಅವ್ಯಾಖ್ಯಾತ)
(ಗ) ಒಂದು ಗಣಿತೀಯ ತಾರ್ಕಿಕ ವ್ಯವಸ್ಥೆಯಲ್ಲಿ ಆರಂಭದಲ್ಲಿ ಕೆಲವು ವ್ಯಾಖ್ಯೆಯಿಲ್ಲದ ಪದಗಳು ಹಾಗೂ ಅವುಗಳನ್ನು ಬಳಸುವ ‘ಆದ್ಯುಕ್ತಿ’ (ಆಕ್ಸಿಯಮ್) ಗಳು ಇರಬೇಕಾಗುತ್ತದೆ. ಇವುಗಳನ್ನು ಆಧರಿಸಿ ಮುಂದೆ ಪ್ರಮೇಯ -ಉಪಪ್ರಮೇಯಗಳನ್ನು ಸಾಧಿಸಲಾಗುವುದು. ಆಧುನಿಕ ಗಣಿತ ಶಾಸ್ತ್ರದಲ್ಲಿ ‘ಗಣ’ (ಸೆಟ್), ‘ಬಿಂದು’ (ಪಾಯಿಂಟ್) ಮುಂತಾದವು ಅನಾಖ್ಯಾತ (ಅವ್ಯಾಖ್ಯಾತ) ಪದಗಳು
undefined

ಅನಾಫಿಲಿಸ್
(ಪ್ರಾ) ಸೊಳ್ಳೆಯ ಒಂದು ಪ್ರಭೇದ. ಹೆಣ್ಣು ಅನಾಫಿಲಿಸ್ ಮಲೇರಿಯ ವಾಹಕ
anopheles

ಅನಾಮ್ನಿಯೋಟ
(ಪ್ರಾ) ಗರ್ಭವೇಷ್ಟನವಿರದೆ ಭ್ರೂಣಾಭಿವರ್ಧನೆಯಾಗುವ ಕಶೇರುಕಗಳು. ಉದಾ: ಉಭಯ ಜೀವಿಗಳು ಹಾಗೂ ಮೀನು
anamniota

ಅನಾರೋಗ್ಯ ಸ್ವಭಾವದ
(ವೈ) ೧. ದೈಹಿಕವಾಗಿ ರೋಗ ಸ್ವಭಾವ, ವ್ಯಾಧಿ ಲಕ್ಷಣ ತೋರುವ ಅಥವಾ ರೋಗಸೂಚಕ ಲಕ್ಷಣಗಳಿರುವ. ೨. ಮಾನಸಿಕವಾಗಿ ದುಮ್ಮಾನದ, ವಿಷಾದದ ಅಥವಾ ವಿಷಣ್ಣತೆಯ ಸ್ಥಿತಿ ಇರುವ
morbid

ಅನಾರ್ಥೈಟ್
(ಭೂವಿ) ಅಗ್ನಿಶಿಲೆಗಳಲ್ಲಿ ಬಲು ಸಾಮಾನ್ಯ ವಾಗಿರುವ, CaAl2(SiO4)2ನಿಂದ ರೂಪಿತವಾದ, ಬಿಳಿ ಅಥವಾ ಬೂದು ಫೆಲ್ಡ್‌ಸ್ಪಾರ್. ಆಲ್ಟೈಟ್-ಅನಾರ್ಥೈಟ್ ಸಮರೂಪಿ ಶ್ರೇಣಿಯಲ್ಲಿ ಕೊನೆಯದು
anorthite

ಅನಾವೃತ ಬೀಜಿ
(ಸ) ಕವಚರಹಿತ ಬೀಜವಿರುವ ಸಸ್ಯ. ಉದಾ: ಶಂಕುಮರ
gymnosperm

ಅನಿಯತತಾಪಿ ಪ್ರಾಣಿಗಳು
(ಪ್ರಾ) ಪರಿಸರೋಷ್ಣತೆಯನ್ನು ಅವಲಂಬಿಸಿ ದೇಹೋಷ್ಣತೆ ಏರುಪೇರಾಗುತ್ತ ಹೋಗುವ, ಅಂದರೆ ಉಷ್ಣತೆ ಸ್ಥಿರವಾಗಿರದ ಪ್ರಾಣಿಗಳು. ಉದಾ: ಹಾವು, ಕಪ್ಪೆ ಇತ್ಯಾದಿ. ಈ ವರ್ಗದ ಪ್ರಾಣಿಗಳು ಸ್ಥಳೀಯವಾಗಿ ಮಾತ್ರ ಬಾಳಬಲ್ಲವು. ನೋಡಿ: ನಿಯತತಾಪಿ ಪ್ರಾಣಿಗಳು
coldblooded animals


logo