logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅನನುರೂಪತೆ
(ಭೂವಿ) ಸ್ತರದ ಪೇರಿಕೆಯ ಸರಣಿಯಲ್ಲಿ ಕಂಡುಬರುವ ವಿಚ್ಛಿನ್ನತೆ
unconformity

ಅನಪ್ಲಾಸಿಯ
(ವೈ) ಜೀವಕೋಶಗಳು ಬೇರೆ ಬೇರೆ ಭಾಗಗಳಾಗಿ ಒಡೆದು ಸ್ವತಂತ್ರ ಕಣಗಳೇರ್ಪಟ್ಟು ಸಂತಾನ ಬೆಳೆಯುವ ಚಟುವಟಿಕೆಗೆ ಸಂಬಂಧಿಸಿದಂತೆ ಕೋಶ ವಿಭೇದನ ಕ್ರಿಯೆ ನಷ್ಟವಾಗುವುದು. ಮಾರಕ ಅರ್ಬುದ ರೋಗ ಲಕ್ಷಣ
anaplasia

ಅನಫಿಲ್ಯಾಕ್ಸಿಸ್
(ವೈ) ಒಂದು ಪ್ರತಿಜನಕವನ್ನು ನೀಡಿರುವವರಿಗೆ ಅದೇ ಪ್ರತಿಜನಕವನ್ನು ಮತ್ತೊಂದು ಸಲ ನೀಡಿದಾಗ ದೇಹವು ಅತಿ ತೀವ್ರ ಸ್ವರೂಪದ ಅತಿ ಸಂವೇದನೆಯನ್ನು ತೋರುವುದು. ಇದು ಜೀವಹಾರಕವೂ ಆಗಬಲ್ಲುದು. ಜೀವವನ್ನು ರಕ್ಷಿಸುವ ಉದ್ದೇಶದಿಂದ ನೀಡುವ ಈ ವಸ್ತುಗಳು, ಕೆಲವು ಸಂದರ್ಭದಲ್ಲಿ ಜೀವವನ್ನೇ ತೆಗೆಯಬಹುದಾದ ಕಾರಣ, ಈ ಪ್ರಕ್ರಿಯೆಯನ್ನು ಅಪರಕ್ಷಣೆ ಎಂದು ಕರೆಯುವರು. ಉದಾ: ಪೆನಿಸಿಲಿನ್ ಚುಚ್ಚುಮದ್ದಿನ ಅತಿನೀಡಿಕೆ
anaphylaxis

ಅನಫೇಸ್
(ಜೀ) ಮೈಟೊಟಿಕ್ ಅಥವಾ ಮಯೋಟಿಕ್ ಬೀಜ ವಿಭಜನೆಯಲ್ಲಿ ಕ್ರೋಮೊಸೋಮ್‌ಗಳು/ಅರೆ ಕ್ರೋಮೊ ಸೋಮ್‌ಗಳು ಸಮಭಾಜಕೀಯ ಫಲಕದಿಂದ ದೂರವಾಗಿ ಕದಿರಿನ ಧ್ರುವಗಳತ್ತ ಚಲಿಸುವ ಘಟ್ಟ. ಅರೆ ಕ್ರೋಮೋಸೋಮ್‌ಗಳು ಹೊಸಕೋಶಗಳ ನ್ಯೂಕ್ಲಿಯಸ್‌ಗಳನ್ನು ರೂಪಿಸುವ ನೆಲೆ ಕೈಗೊಳ್ಳುವ ಮೈಟಾಸಿಸ್‌ನಲ್ಲಿಯ ಒಂದು ಘಟ್ಟ. ನೋಡಿ: ಅವಿಯೋಜನ
anaphase

ಅನಫೊರೀಸಿಸ್
(ರ) ನಿಲಂಬಿತ ಕಣಗಳು ವಿದ್ಯುತ್ ಕ್ಷೇತ್ರದ ಪ್ರಭಾವದಲ್ಲಿ ಆನೋಡ್ ಕಡೆಗೆ ವಲಸೆ ಹೋಗುವುದು. ಆನೋಡ್‌ವಹನ. ನೋಡಿ: ವಿದ್ಯುತ್ ಕಣ ಸಂಚಲನ
anaphoresis

ಅನಭಿವರ್ಧನೆ
(ವೈ) ದೇಹದ ಯಾವುದೇ ಭಾಗದ ಅಪರಿಪೂರ್ಣ ಅಭಿವರ್ಧನೆ ಅಥವಾ ಅಭಿವರ್ಧನೆಯಲ್ಲಿ ವೈಫಲ್ಯ
agenesis

ಅನಮಾರ್ಫ್
(ಸ) ಶಿಲೀಂಧ್ರದ ಅಲೈಂಗಿಕ ಅಪರಿಪೂರ್ಣ ಘಟ್ಟ
anamorph

ಅನಮಾರ್ಫಾಸಿಸ್
(ಜೀ) ಸರಳತರ ರೂಪದಿಂದ ತೊಡಗಿ ಕ್ರಮಕ್ರಮವಾಗಿ ಸಂಕೀರ್ಣತರ ರೂಪಕ್ಕೆ ವಿಕಾಸ ವಾಗುವುದು. (ಭೌ) ಪರಸ್ಪರ ಲಂಬವಾಗಿರುವ ಎರಡು ಅಕ್ಷಗಳಲ್ಲಿ ಬೇರೆ ಬೇರೆ ಪ್ರಮಾಣದ ವರ್ಧನೆಯುಳ್ಳ ಹಾಗೂ ವಿಶೇಷ ಸಲಕರಣೆಯ ಮೂಲಕ ನೋಡಿದಾಗಲಷ್ಟೆ ಸರಿಯಾದ ಹಾಗೂ ನೈಜರೂಪದಲ್ಲಿ ಕಾಣುವ ಚಿತ್ರ. ವಿಕೃತ ರೂಪಾಂತರ
anamorphosis

ಅನಮಾರ್ಫಿಕ್ ಮಸೂರ
(ತಂ) ಅಗಲ ತೆರೆ ಚಲಚ್ಚಿತ್ರ ಪ್ರಕ್ರಿಯೆಯಲ್ಲಿ ಬಳಸುವ ವಿಶೇಷ ಮಸೂರ. ದೃಶ್ಯದ ಅಗಲ ಹರವನ್ನು ಫಿಲ್ಮ್‌ನ ಸೀಮಿತ ವ್ಯಾಪ್ತಿಗೆ ಸಂಕೋಚಿಸುವ ಸಲುವಾಗಿ ಕ್ಯಾಮೆರಾದಲ್ಲಿಯೂ ಈ ಸಂಕೋಚಿತ ಚಿತ್ರವನ್ನು ಫಿಲ್ಮ್‌ನಿಂದ ಅಗಲ ತೆರೆಯ ಮೇಲೆ ದೃಶ್ಯದ ಸಹಜ ಹರವು ಹಾಗೂ ರೂಪಕ್ಕೆ ಸರಿಹೊಂದುವಂತೆ ಪ್ರಕ್ಷೇಪಿಸಲು ಪ್ರಕ್ಷೇಪಕದಲ್ಲಿಯೂ ಈ ಮಸೂರದ ಬಳಕೆಯಾಗುತ್ತದೆ
anamorphic lens

ಅನಮಾರ್ಫಿಸಮ್
(ಭೂವಿ) ಉಷ್ಣ , ನೀರು ಮತ್ತು ಮೇಲ್ಪದರಗಳ ತೂಕ ಇವುಗಳ ಕಾರಣವಾಗಿ ಭೂಮಿಯ ಕೆಳಭಾಗಗಳಲ್ಲಿಯ ಶಿಲೆಗಳಲ್ಲಿ ಕಂಡುಬರುವ ಸಂಕೀರ್ಣ ಬದಲಾವಣೆಗಳು. ಸರಳ ಖನಿಜಗಳು ಸಂಕೀರ್ಣ ಖನಿಜಗಳಾಗಿ ಮಾರ್ಪಡುವುದು. ರೂಪಾಂತರಣ
anamorphism


logo