logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅನಂತ
(ಗ) ಅಂತ ಅಥವಾ ಅಂತ್ಯ ಇಲ್ಲದ್ದು. ಯಾವುದೇ ನಿರ್ದಿಷ್ಟ ಸಂಖ್ಯೆಗಿಂತ ಅಧಿಕವಾದದ್ದು. ಇದನ್ನು ಸೂಚಿಸಲು ಬಳಸುವ ಪ್ರತೀಕ . ನೋಡಿ: ಅನಂತತೆ, ಸಾಂತ
infinite

ಅನಂತ ಗಣ
(ಗ) ಅನಂತ ಸಂಖ್ಯೆಯ ಧಾತುಗಳಿರುವ ಗಣ ಉದಾ : ಧನ ಪೂರ್ಣಾಂಕಗಳ ಗಣ A={1,2.....{ }
infinite set

ಅನಂತಗಾಮಿ
(ಗ) )))
tends to infinity

ಅನಂತ ಗುಣಲಬ್ಧ
(ಗ) ಅನಂತ ಕಾರಕಗಳನ್ನು ಒಟ್ಟು ಗುಣಿಸಿದಾಗ ದೊರೆಯುವ ಫಲ (1-x) (1-x2) (1-x3) ............
infinite product

ಅನಂತತೆ
(ಗ) ಗಣಿತದಲ್ಲಿ ಇದೊಂದು ಪರಿಕಲ್ಪನೆ. ಯಾವುದೇ ನಿರ್ದಿಷ್ಟ ರಾಶಿಗಿಂತ ಅಧಿಕವೆಂದು ಅರ್ಥ. ಇದರ ಪ್ರತೀಕ . ಪರಂತು, . ಅಂದರೆ, nನ ಬೆಲೆ ಅಧಿಕಾಧಿಕವಾಗಿ ವರ್ಧಿಸಿದಂತೆ, ನ ಬೆಲೆ ೦ಯನ್ನು ಸಮೀಪಿಸುತ್ತದೆ.
infinity

ಅನಂತ ಪರ್ಯಂತ
(ಗ) ಅನಂತದವರೆಗೆ, ಅಂತ್ಯ ಇರದೆ ಸಾಗುವ. ಒಂದೇ ರೀತಿಯಲ್ಲಿ ಅನಿರ್ದಿಷ್ಟವಾಗಿ ಮುಂದು ವರಿಯುತ್ತ ಹೋಗುವ
ad infinitum

ಅನಂತಸ್ಪರ್ಶಕ
(ಗ) ಯಾವುದೇ ವಕ್ರರೇಖೆ ಕುರಿತಂತೆ ಸತತವಾಗಿ ಸಮೀಪಿಸುವ ಆದರೆ ಸಾಂತ ದೂರದಲ್ಲೆಲ್ಲೂ ಸ್ಪರ್ಶಿಸದ ಸರಳರೇಖೆ. ಅನಂತದಲ್ಲಿ ಸ್ಪರ್ಶಿಸುತ್ತದೆ ಎಂಬುದು ಇಂಗಿತ. ಅಸಂಪಾತ ರೇಖೆ
asymptote

ಅನಂತಾಲ್ಪ
(ಗ) ಯಾವುದೇ ಪರಿಮಾಣ ಕುರಿತಂತೆ ಅದೃಶ್ಯವಾಗುವಷ್ಟು ಅಲ್ಪವಾದ, ಆದರೆ ಸೊನ್ನೆ ಅಲ್ಲದ ಸೂಕ್ಷ್ಮಾತಿ ಸೂಕ್ಷ್ಮ ಭಾಗ. ಇದು ಮೂಲ ಪರಿಮಾಣದ ಆಯಾಮಗಳನ್ನು ಅಥವಾ ಇತರ ಗುಣಗಳನ್ನು ಉಳಿಸಿಕೊಂಡಿದ್ದರೂ ಅದರೊಂದಿಗೆ ಹೋಲಿಸಿದಲ್ಲಿ, ನಿರ್ಲಕ್ಷಿಸಬಹುದಾದಷ್ಟು ಅಲ್ಪ. ಅನಂತಸೂಕ್ಷ್ಮ
infinitesimal

ಅನಟೇಸ್
(ಭೂವಿ) ನೈಸರ್ಗಿಕವಾಗಿ ಲಭಿಸುವ ಸ್ಫಟಿಕಾತ್ಮಕ ಟೈಟಾನಿಯಮ್ ಡೈಆಕ್ಸೈಡ್‌ನ ಮೂರು ರೂಪಗಳ ಪೈಕಿ ಒಂದು. ಆಕ್ಟಹಿಡ್ರೈಟ್ ಎಂದೂ ಹೆಸರು. ರುಟೈಲ್ ಮತ್ತು ಬ್ರೂಕೈಟ್ ಇದರ ಇತರ ಬಹುರೂಪಿಗಳು
anatase

ಅನತರೇಖೆ
(ಭೂ) ಕಾಂತೀಯ ನಮನ ಇಲ್ಲದ ಬಿಂದುಗಳನ್ನು ಸೇರಿಸುವ ರೇಖೆ; ಭೂತಲದಲ್ಲಿ ಯಾವ ಸ್ಥಳದಲ್ಲಿ ಕಾಂತಸೂಚಿ ಕೆಳಕ್ಕೆ ಬಾಗದೆ ಕ್ಷಿತಿಜೀಯವಾಗಿ ತೂಗಾಡುವುದೋ ಆ ಸ್ಥಳಗಳನ್ನು ಸೇರಿಸುವ ಕಾಲ್ಪನಿಕ ರೇಖೆ. ಸಮಭಾಜಕದ ಸಮೀಪದಲ್ಲಿದೆ. ಅನಮ್ಯರೇಖೆ, ಕಾಂತೀಯ ಅಕ್ಷರೇಖೆ
aclinic line


logo