(ತಂ) ಯಾವುದೇ ಯೋಜನೆಗೆ ಅವಶ್ಯವಾದ ಶಾಶ್ವತ ಯಂತ್ರ ಸಲಕರಣೆಗಳು, ಪರಿಕರಗಳು ಮತ್ತು ಸ್ಥಾವರಗಳು. ಒಂದು ದೇಶದ ಆರ್ಥಿಕ ಅಡಿಪಾಯ ಎಂದು ಪರಿಗಣಿಸಲ್ಪಟ್ಟ ರಸ್ತೆಗಳು, ಸೇತುವೆಗಳು ಇತ್ಯಾದಿ. ಆಧಾರ ರಚನೆ
infrastructure
ಅಧೋಲಂಬ
(ಗ) ವಕ್ರರೇಖೆಯ ಯಾವುದೇ ಬಿಂದು Pಯಲ್ಲಿ ಅದಕ್ಕೆ ಎಳೆದ ಲಂಬ y ಅಕ್ಷವನ್ನು Nನಲ್ಲಿ ಸಂಧಿಸಲಿ. ಆಗ y ಅಕ್ಷದ ಮೇಲೆ PNನ ಪ್ರಕ್ಷೇಪಕ್ಕೆ (=LN) ಈ ಹೆಸರಿದೆ
subnormal
ಅಧೋವರ್ತಿ
(ಸ) ರೆಕ್ಕೆಯ ರೂಪದಲ್ಲಿ ಕೆಳಕ್ಕೆ ಚಾಚಿ ಕಾಂಡವನ್ನು ಸುತ್ತುವರಿದ ಎಲೆಗಳ ತೊಟ್ಟು. ಉದಾ: ಬಾಳೆ ಎಲೆ
decurrent
ಅಧೋವಾಹನ
(ತಂ) ವಿಮಾನದ ಒಡಲಿನ ತಳಭಾಗ. ಇದರಲ್ಲಿ ಗಾಲಿಗಳು, ಆಘಾತತೀವ್ರತೆ ತಗ್ಗಿಸುವ ಸಾಧನಗಳು ಇತ್ಯಾದಿಗಳಿರುತ್ತವೆ. ಒಡಲತಳದ ಈ ಭಾಗಗಳನ್ನು ಉಪಯೋಗಿಸಿಕೊಂಡೇ ವಿಮಾನ ಕೆಳಗಿಳಿಯುವುದು. ಮೇಲೆ ಹಾರುತ್ತಿರುವಾಗ ಈ ಭಾಗಗಳು ಒಡಲಿನೊಳಗೆ ಮಡಿಚಿರುತ್ತವೆ
undercarriage
ಅಧೋವಿಕಾಸ
(ಜೀ) ವಿಕಸನದಲ್ಲಿ ಸಾಧಾರಣ ದಿಶೆಗೆ ಬದಲಾಗಿ (ಸರಳತೆಯಿಂದ ಸಂಕೀರ್ಣತೆಗೆ) ಪ್ರಾರಂಭದ ಸರಳತರ ರೂಪಕ್ಕೆ ಸಾಗುವ ಪ್ರಕ್ರಿಯೆ
katagenesis
ಅಧೋಸಾರಿ
(ಪ್ರಾ) ಮೀನುಗಳು ತತ್ತಿ ಇಡುವ ಸಮಯದಲ್ಲಿ ತಾವಿರುವ ಸ್ಥಳದ ನೀರಿನ ಸಾಂದ್ರತೆಗಿಂತ ಹೆಚ್ಚಿನ ಸಾಂದ್ರತೆಯ ನೀರಿರುವ ಸ್ಥಳಕ್ಕೆ ವಲಸೆ ಹೋಗುವುದು. ಉದಾ : ಸಿಹಿನೀರಿನ ಈಲ್ ಮೀನು ತತ್ತಿ ಇಡಲೋಸುಗ ತಾನಿರುವ ಸಿಹಿ ನೀರಿನ ಪ್ರದೇಶದಿಂದ ಹೆಚ್ಚು ಸಾಂದ್ರತೆಯ ಉಪ್ಪು ನೀರಿನ ಪ್ರದೇಶಕ್ಕೆ ವಲಸೆ ಹೋಗುತ್ತದೆ
katadromous
ಅಧೋಸ್ಪರ್ಶಕ
(ಗ) ವಕ್ರರೇಖೆಯ ಯಾವುದೇ ಬಿಂದು Pಯಲ್ಲಿ ಅದಕ್ಕೆ ಎಳೆದ ಸ್ಪರ್ಶಕವು x-ಅಕ್ಷವನ್ನು T ಬಿಂದುವಿನಲ್ಲಿ ಸಂಧಿಸಲಿ. ಆಗ, x-ಅಕ್ಷದ ಮೇಲೆ PTಯ ಪ್ರಕ್ಷೇಪಕ್ಕೆ (=TN) ಈ ಹೆಸರಿದೆ
subtangent
ಅಧ್ಯಾರೋಪಿಸು
(ಭೌ) ಒಂದು ಬಿಂಬದ ಮೇಲೆ ಇನ್ನೊಂದು ಬಿಂಬವನ್ನ್ನಿರಿಸಿ ಎರಡೂ ಕಾಣುವಂತೆ ಸೇರಿಸುವುದು
superimpose
ಅನ್‌ಹೈಡ್ರೈಟ್
(ಭೂವಿ) ನೈಸರ್ಗಿಕವಾಗಿ ಲಭಿಸುವ ನಿರ್ಜಲ ಕ್ಯಾಲ್ಸಿಯಮ್ ಸಲ್ಫೇಟ್, ಸುಲಭವಾಗಿ ಜಿಪ್ಸಮ್ ರೂಪ ತಳೆಯುತ್ತದೆ
anhydrite
ಅನ್‌ಹೈಡ್ರೈಡುಗಳು
(ರ) ನೀರಿನೊಡನೆ ಬೆರೆತಾಗ ಆಮ್ಲ ಅಥವಾ ಪ್ರತ್ಯಾಮ್ಲಗಳನ್ನು ಕೊಡುವ, ವಿಲೋಮವಾಗಿ, ಅವುಗಳಿಂದ ನೀರನ್ನು ನಿವಾರಿಸಿದಾಗ ತಾವೇ ಮೈದಳೆಯುವ ಪದಾರ್ಥಗಳು. ಉದಾ: ಲೋಹದ ಆಕ್ಸೈಡ್‌ಗಳು ಪ್ರತ್ಯಾಮ್ಲಗಳನ್ನು ಕೊಡುತ್ತವೆ. (Na2O+H2O O 2NaOH) ಅಲೋಹದ ಆಕ್ಸೈಡ್‌ಗಳು ಆಮ್ಲಗಳನ್ನು ಕೊಡುತ್ತವೆ. (SO3+H2O O H2SO4). ಅಸಿಟಿಕ್ ಆಮ್ಲದಿಂದ ನೀರನ್ನು ನಿವಾರಿಸಿದಾಗ ಅದರ ಅನ್‌ಹೈಡ್ರೈಡ್ ಉಂಟಾಗುತ್ತದೆ