(ಖ,ಭೌ) ಎಲ್ಲ ನಾಲ್ಕು ಮೂಲ ಭೂತ ಬಲಗಳನ್ನೂ ಪರಸ್ಪರ ಸಂಬಂಧಿಸಲು ಯತ್ನಿಸುವ ಮತ್ತು ವಿಶ್ವದ ಆದಿ ವ್ಯಾಕೋಚನ ಸಂದರ್ಭದಲ್ಲಿ ಒಂದೊಂದು ಬಲವೂ ಪ್ರತ್ಯೇಕವಾಗಿ ಉದಯಿಸಿತೆಂಬ ಪ್ರತಿಪಾದನೆ. ನೋಡಿ: ವಿಶ್ವತಂತು
supersymmetry
ಅಧಿಸರಳ ಕೋನ
(ಗ) ೧೮೦0ಗೂ ಜಾಸ್ತಿ ಮತ್ತು ೩೬೦0ಗೂ ಕಡಿಮೆ ಇರುವ ಕೋನ. ೧೮೦0 < < ೩೬೦0
reflex angle
ಅಧೀನ ಚರ
(ಗ) y=ax2+bx+c ಸಮೀಕರಣದಲ್ಲಿ xನ್ನು ಸ್ವತಂತ್ರ ಚರವೆಂದೂ yನ್ನು ಅಧೀನ ಚರವೆಂದೂ ಭಾವಿಸುತ್ತೇವೆ
dependent variable
ಅಧೀನ ಸಮೀಕರಣಗಳು
(ಗ) ಸಮೀಕರಣಗಳ ಗಣ. ಇದರಲ್ಲಿ ಒಂದು ಸಮೀಕರಣ ಉಳಿದವನ್ನು ಅವಲಂಬಿಸಿರುವುದು. ಉದಾ: x+y=4, x(x+y)=4x. ಇವು ಅಧೀನ ಸಮೀಕರಣಗಳು. ಹೀಗಲ್ಲದೆ x+y=3, x+2y=6. ಇವು ಸ್ವತಂತ್ರ ಸಮೀಕರಣಗಳು
dependent equations
ಅಧೋಜಠರ
(ಪ್ರಾ) ನೋಡಿ: ಉದರತಲ
underbelly
ಅಧೋಬಿಂದು
(ಖ) ವೀಕ್ಷಕನನ್ನು ಕುರಿತಂತೆ ಖಗೋಳ ದಲ್ಲಿಯ ನಿಮ್ನತಮ ಬಿಂದು. ಇದಕ್ಕೆ ವ್ಯಾಸೀಯವಾಗಿ ವಿರುದ್ಧ ವಾದುದು ಖಮಧ್ಯ
nadir
ಅಧೋಮಹಾಸಿರೆ
(ವೈ) ಕಾಲುಗಳಿಂದ, ಕಟಿ ಪ್ರದೇಶದ ಬಹುಭಾಗದಿಂದ ಹಾಗೂ ಉದರಾಂಗಗಳಿಂದ ಹರಿದುಬರುವ ಆಕ್ಸಿಜನ್ ಕೊರತೆಯ ರಕ್ತವನ್ನು ಹೃದಯದ ಬಲ ಹೃತ್ಕರ್ಣದ ಹಿಂಭಾಗದಲ್ಲಿ ತಂದು ಸುರಿಯುವ ಸಿರೆ
inferior vena cava
ಅಧೋಮಾರ್ಗ
(ಭೂವಿ) ಗಣಿಯೊಳಕ್ಕೆ ಶುದ್ಧ ವಾಯುವನ್ನು ಒಳಬಿಡಲು ಅನುವಾಗುವ ತೆರಪು
downcast
ಅಧೋಮುಖಶಂಕು
(ಸ) ತಲೆಕೆಳಗಾದ ಶಂಕುವಿನ ಆಕಾರದ (ಎಲೆ)
obconic
ಅಧೋಮುಖಿ
(ಸ) ಸಸ್ಯದಲ್ಲಿ ಮೇಲಿನಿಂದ ಕೆಳ ಮುಖವಾಗಿ ಬೆಳೆಯುವ ಪ್ರಕ್ರಿಯೆ