logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abusiveness
ನಾಮವಾಚಕ
ಬೈಗುಳತನ; ನಿಂದಕತೆ.

abut
ಕ್ರಿಯಾವಿಶೇಷಣ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ತಗುಲಿಕೊಂಡಿರು; ಅಂಟಿಕೊಂಡಿರು: two plots that abut each other ಒಂದಕ್ಕೊಂದು ತಗುಲಿಕೊಂಡಿರುವ ಎರಡು ನಿವೇಶನಗಳು.
  • ಒರಗಿಸು; ಆನಿಸು; ಒರಗಿರುವಂತೆ ಮಾಡು: abut timber against a post ಮರವನ್ನು ಕಂಬಕ್ಕೆ ಒರಗಿಸು.

  • abutment
    ನಾಮವಾಚಕ
  • (ಮುಖ್ಯವಾಗಿ ಕಟ್ಟಡದಲ್ಲಿ) ಕೊನೆಗೆ ಕೊನೆ ಸೇರಿಕೆ.
  • ಊರೆ; ಒದೆ; ಊತು; ಆನಿಕೆ; ಪಕ್ಕದ ಆಧಾರ.
  • ಕಮಾನಿನ ಗುದ್ದುಗಂಬ; ಒಂದು ಕಮಾನಿಗೆ ಯಾ ಸೇತುವೆಗೆ ಆಧಾರವಾಗಿರುವ ಭಾಗ. Figure: abutment
  • ಕಮಾನಿನ ಪಾಳಿ; ಕಮಾನೂ ಅದರ ಆಧಾರವೂ ಸಂಧಿಸುವ ಸ್ಥಳ.

  • abutter
    ನಾಮವಾಚಕ
    (ನ್ಯಾಯಶಾಸ್ತ್ರ) ನೆರೆಮಾಲೀಕ; ಪಕ್ಕದ ಜಮೀನು, ಮನೆ ಮೊದಲಾದ ಸ್ವತ್ತಿನ ಮಾಲೀಕ, ಒಡೆಯ.

    aby(e)
    ಸಕರ್ಮಕ ಕ್ರಿಯಾಪದ
  • (ಪ್ರಾಚೀನ ಪ್ರಯೋಗ) (ತಪ್ಪಿತಕ್ಕೆ) ದಂಡ ತೆರು.
  • ಪ್ರಾಯಶ್ಚಿತ್ತ ಮಾಡಿಕೊ.

  • abysm
    ನಾಮವಾಚಕ
    abyss ಎಂಬುದರ ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ.

    abysmal
    ಗುಣವಾಚಕ
  • (ಮುಖ್ಯವಾಗಿ ರೂಪಕವಾಗಿ) ತಳವಿಲ್ಲದ; ತುಂಬಾ ಆಳವಾದ; ಅಗಾಧ: abysmal ignorance ಅಗಾಧವಾದ ಅಜ್ಞಾನ.
  • (ಆಡುಮಾತು) ತುಂಬಾ ಕೆಟ್ಟ; ತೀರ ಕೆಟ್ಟುಹೋದ: his taste is abysmal ಅವನದು ತುಂಬಾ ಕೆಟ್ಟ ಅಭಿರುಚಿ.

  • abysmally
    ಕ್ರಿಯಾವಿಶೇಷಣ
  • ಅಗಾಧವಾಗಿ.
  • ಬಹಳ ಕೆಟ್ಟದಾಗಿ.

  • abyss
    ನಾಮವಾಚಕ
  • ಸೃಷ್ಟಿಪೂರ್ವ ಕೂಪ; ವಿಪ್ಲವಕೂಪ; ಸೃಷ್ಟಿಗೆ ಪೂರ್ವದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದ್ದ ಅಗಾಧ ಕೂಪ.
  • ಭೂಗರ್ಭ ಕುಹರ.
  • ಪಾತಾಳ; ಅಧೋಲೋಕ; ನರಕ ಕೂಪ.
  • ಅಗಾಧವಾದ ಕಮರಿ.
  • ಸಮುದ್ರದ ತಲದ ಜಲರಾಶಿ.
  • (ರೂಪಕವಾಗಿ) ಅಗಾಧ ಕೂಪ; ಅಗಾಧವಾದ ಆಳ: abyss of despair ನಿರಾಶೆಯ ಅಗಾಧ ಕೂಪ.

  • abyssal
    ಗುಣವಾಚಕ
  • ಅಗಾಧವಾದ.
  • ಸಮುದ್ರತಳದ; ಸಮುದ್ರತಳ ನೆಲದ; ಮುಖ್ಯವಾಗಿ ಸಮುದ್ರದ ಅತ್ಯಂತ ತಳಭಾಗದಲ್ಲಿಯ ಜಲರಾಶಿಯ ಸ್ತರದ.
  • (ಭೂವಿಜ್ಞಾನ) = (^1\)plutonic.


  • logo