logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

absorbent
ನಾಮವಾಚಕ
  • ಚೂಷಕ; ಹೀರಿಕೊಳ್ಳುವಂಥ ಪದಾರ್ಥ.
  • ಚೂಷಕ; ಸಸ್ಯಗಳಲ್ಲಿ ಯಾ ಪ್ರಾಣಿಗಳಲ್ಲಿ ಆಹಾರ ಸತ್ತ್ವವನ್ನು ಹೀರಿಕೊಳ್ಳುವ ನಾಳ ಯಾ ಅಂಗ, ಉದಾಹರಣೆಗೆ ಬೇರಿನ ತುದಿ.

  • absorbent cotton
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಹೀರುಹತ್ತಿ; ಶುದ್ಧಿಗೊಳಿಸಿದ ಗಾಯಕ್ಕೆ ಹಾಕುವ ಶುದ್ಧಿಗೊಳಿಸಿದ ಹತ್ತಿ; ಚೂಷಕ ಹತ್ತಿ.

    absorber
    ನಾಮವಾಚಕ
    ಅವಶೋಷಕ; ಹೀರಿಕೊಳ್ಳುವಂಥ ವಸ್ತು.

    absorbing
    ಗುಣವಾಚಕ
  • ಹೀರುವ; ಹೀರಿಕೊಳ್ಳುವ; ಚೂಷಕ.
  • ಮೈಗೂಡಿಸಿಕೊಳ್ಳುವ.
  • ಮಗ್ನಗೊಳಿಸುವ; ತಲ್ಲೀನಗೊಳಿಸುವ; ಗಮನವನ್ನು ಹೀರುವ, ಸೆಳೆಯುವ.

  • absorbingly
    ಕ್ರಿಯಾವಿಶೇಷಣ
    ತಲ್ಲೀನವಾಗಿ; ಮಗ್ನವಾಗಿ.

    absorption
    ನಾಮವಾಚಕ
  • (ಭೌತವಿಜ್ಞಾನ) (ದ್ರವ, ಬೆಳಕು, ಮೊದಲಾದವುಗಳ) ಹೀರಿಕೆ; ಚೂಷಣ; ಅವಶೋಷಣ.
  • (ಇನ್ನೊಂದರಲ್ಲಿ) ಸೇರಿಹೋಗುವಿಕೆ; ಲೀನವಾಗುವಿಕೆ.
  • ಮಗ್ನತೆ; ತಲ್ಲೀನತೆ; ತನ್ಮಯತೆ.

  • absorptive
    ಗುಣವಾಚಕ
    (ಭೌತವಿಜ್ಞಾನ) ಹೀರುಗುಣವುಳ್ಳ; ಹೀರುಗುಣದ; ಚೂಷಕ; ಅವಶೋಷಕ: absorptive index ಹೀರಿಕೆ ಸೂಚಿ; ಚೂಷಕಾಂಕ.

    absorptiveness
    ನಾಮವಾಚಕ
    (ಭೌತವಿಜ್ಞಾನ) ಹೀರುವ ಗುಣ; ಚೂಷಕತೆ; ಅವಶೋಷಕತೆ.

    absorptivity
    ನಾಮವಾಚಕ
  • = absorptiveness.
  • ಚೂಷಕತೆಯ ಪ್ರಮಾಣ.

  • absquatulate
    ಅಕರ್ಮಕ ಕ್ರಿಯಾಪದ
    (ಹಾಸ್ಯ ಪ್ರಯೋಗ) ಪರಾರಿಯಾಗು; ಓಡಿಹೋಗು; ಕಂಬಿಕೀಳು; ತಪ್ಪಿಸಿಕೊಂಡು ಹೋಗು; ಕಾಲಿಗೆ ಬುದ್ಧಿ ಹೇಳು.


    logo