logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

absent voter
ನಾಮವಾಚಕ
ಗೈರುಹಾಜರು ಮತದಾರ; ಮತದಾನದ ಸ್ಥಳದಲ್ಲಿ ಇರಲಿಲ್ಲವಾದುದರಿಂದ ಅಂಚೆ ಮೂಲಕ ಮತ ಚಲಾಯಿಸುವವ(ಳು).

absinth
ನಾಮವಾಚಕ
  • (ಸಸ್ಯವಿಜ್ಞಾನ) ಮಂಚಿಪತ್ರೆ: ಔಷಧಕ್ಕೊದಗುವ ಒಂದು ಬಗೆಯ ಕಹಿಗಿಡ.
  • ಮಂಚಿಪತ್ರೆಯ ಸಾರ.
  • ಆಬ್‍ಸಿನ್ತ್‍; ಮಂಚಿಪತ್ರೆಯ ಸಾರ ಸೇರಿಸಿದ ದ್ರಾಕ್ಷಾ ಮದ್ಯ.

  • absinthe
    ನಾಮವಾಚಕ
    = absinth(3).

    absit omen
    ಭಾವಸೂಚಕ ಅವ್ಯಯ
    ಬಿಡತು: ಆಗದಿರಲಿ: ಶಾಂತಂ ಪಾಪಂ; ಬಾಯಿ ತಪ್ಪಿ ಹೇಳಿದ ಮಾತಿನಿಂದ ಕೇಡು ಒದಗದಿರಲಿ.

    absolute
    ಗುಣವಾಚಕ ಪದಗುಚ್ಛ
  • ಸಂಪೂರ್ಣ; ಸಮಗ್ರ; ಪರಿಪೂರ್ಣ; ದೋಷರಹಿತ: tell the absolute truth ಸಂಪೂರ್ಣ ಸತ್ಯವನ್ನು ಹೇಳು.
  • ತಾಜಾ; ಅಪ್ಪಟ; ಕೇವಲ; ಬರಿ; ಶುದ್ಧ; ಬೆರಕೆಯಿಲ್ಲದ; absolute alcohol ಅಪ್ಪಟ ಯಾ ಶುದ್ಧ ಆಲ್ಕಹಾಲ್‍; ನೀರು ಮೊದಲಾದವನ್ನು ಬೆರಸದ ಆಲ್ಕಹಾಲ್‍.
  • ಅಬಾಧಿತ; ನಿರ್ಭಂಧರಹಿತ: absolute ownership ಅಬಾಧಿತ ಸ್ವಾಮ್ಯ.
  • ಅಂಕೆಯಿಲ್ಲದ; ನಿರಂಕುಶ; ಸರ್ವತಂತ್ರ ಸ್ವತಂತ್ರ; ಸ್ವೇಚ್ಛಾನುಸಾರಿ: absolure monarchy ನಿರಂಕುಶ ಪ್ರಭುತ್ವ. God’s absolute power ದೇವರ ಸರ್ವತಂತ್ರ ಸ್ವತಂತ್ರಾಧಿಕಾರ.
  • (ವ್ಯಾಕರಣ) ಅನನ್ವಿತ; ಸ್ವತಂತ್ರ; ವಾಕ್ಯದ ಕ್ರಿಯೆಯಿಂದ ಬದ್ಧವಾಗಿಲ್ಲದ.
  • ನಿರಪೇಕ್ಷ; ಸಾಪೇಕ್ಷವಲ್ಲದ; ಸಜಾತೀಯವಾದ ಇತರ ವಸ್ತುಗಳೊಡನೆ ಹೋಲಿಸದೆ ಸ್ವತಃ ವಸ್ತುಭೂತವಾಗಿರುವ: absolute scale of temperature ನಿರಪೇಕ್ಷ ತಾಪಮಾನ.
  • ನಿರುಪಾಧಿಕ; ಉಪಾಧಿರಹಿತ: an absolute proposition ನಿರುಪಾಧಿಕ ಯಾ ಅನವಚ್ಛಿನ್ನ ಪ್ರತಿಜ್ಞೆ.
  • (ತತ್ತ್ವಶಾಸ್ತ್ರ) ಸ್ವತಂತ್ರಸತ್ತೆಯ; ಸ್ವಯಂಭು; ಸ್ವಯಂಪೂರ್ಣ; ಪರಮ; ತನ್ನದೇ ಅಸ್ತಿತ್ವವನ್ನು ಹೊಂದಿದ್ದು, ಅದನ್ನು ಅರಿಯಲು ಇತರ ವಸ್ತುಗಳೊಡನೆ ಹೋಲಿಕೆ ಯಾ ಸಂಬಂಧ ಬೇಕಿಲ್ಲದ: absolute value ಸ್ವತಂತ್ರಮೌಲ್ಯ. absolute knowledge ಪರಮಜ್ಞಾನ.
  • ನಿಜವಾದ; ವಾಸ್ತವಿಕವಾದ; ಸತ್ಯವಾದ; ನಿಸ್ಸಂದಿಗ್ಧವಾದ: an absolute fact ನಿಜವಾದ ಸಂಗತಿ. absolute proof ನಿಸ್ಸಂದಿಗ್ಧವಾದ ಪ್ರಮಾಣ.

  • absolute construction
    ನಾಮವಾಚಕ
    (ಇಂಗ್ಲಿಷ್‍ ಭಾಷೆಯಲ್ಲಿ) ಸ್ವತಂತ್ರ ವಾಕ್ಯಭಾಗ; ಕ್ರಿಯಾವಿಶೇಷಣವಾಗಿ ಉಪಯೋಗಿಸಲ್ಪಡುವ ನಾಮವಾಚಕ ಮತ್ತು ಕೃದಂತ ಯಾ ಇಂಗ್ಲಿಷ್‍ ಧಾತ್ವರ್ಥವಾಚಿಗಳಿಂದ ಕೂಡಿದ ವಾಕ್ಯಭಾಗ: dinner being over, we left the table. let us toss for it, loser to pay.

    absolutely
    ಕ್ರಿಯಾವಿಶೇಷಣ
  • ತನಗೆ ತಾನೆ; ಸ್ವತಃ; ಸ್ವತಂತ್ರವಾಗಿ; ಪ್ರತ್ಯೇಕವಾಗಿ.
  • ನಿರಂಕುಶವಾಗಿ; ಬಾಹ್ಯನಿಯಂತ್ರಣವಿಲ್ಲದೆ.
  • (ವ್ಯಾಕರಣ) ಅನನ್ವಿತವಾಗಿ; ಕರ್ಮಪದವನ್ನು ಬಳಸದೆ: transitive verb used absolutely ಅನನ್ವಿತವಾಗಿ ಯಾ ಕರ್ಮಪದ ಹೇಳದೆ ಬಳಸಿದ ಸಕರ್ಮಕ ಕ್ರಿಯಾಪದ.
  • ನಿರುಪಾಧಿಕವಾಗಿ. ಉ೫ ನಿರಪೇಕ್ಷವಾಗಿ.
  • ನಿಜವಾಗಿ; ಖಂಡಿತವಾಗಿ; ವಾಸ್ತವವಾಗಿ; ನಿಶ್ಚಯವಾಗಿ: it absolutely exploded ಅದು ನಿಜವಾಗಿ ಸಿಡಿಯಿತು.
  • ಪೂರ್ತಿ; ಶುದ್ಧಾಂಗವಾಗಿ; ಪೂರ್ಣವಾಗಿ; ಸಂಪೂರ್ಣವಾಗಿ: absolutely wrong ಪೂರ್ತಿ ತಪ್ಪು.
  • (ನಿಷೇಧಾರ್ಥಕಗಳೊಡನೆ) ಸ್ವಲ್ಪವೂ; ಇನಿತೂ; ಏನೂ; ಕಿಂಚಿತ್ತೂ: had absolutely no claim to it ಅದಕ್ಕೆ ಸ್ವಲ್ಪವೂ ಹಕ್ಕಿಲ್ಲ. could do absolutely nothing ಏನೂ ಮಾಡಲಾಗಲಿಲ್ಲ.

  • absolutely
    ಭಾವಸೂಚಕ ಅವ್ಯಯ
  • ಹೌದು; ನಿಜ; ಖಂಡಿತವಾಗಿ.
  • ಅಂತೆಯೇ; ಹಾಗೆಯೇ.

  • absolute magnitude
    ನಾಮವಾಚಕ
    (ಖಗೋಳ ವಿಜ್ಞಾನ) ನಿರಪೇಕ್ಷ–ಕಾಂತಿಮಾನ, ದೀಪ್ತಿ, ಪ್ರಕಾಶ; 10 ಪಾರ್ಸೆಕ್‍ಗಳ ಯಾ 32.6 ಬೆಳಗಿನ ವರ್ಷಗಳಷ್ಟು ದೂರವಿರುವ ಕಾಲ್ಪನಿಕ ವೀಕ್ಷಕನಿಗೆ ಕಾಣುವ ಆಕಾಶಕಾಯದ ಪ್ರಕಾಶ.

    absolute majority
    ನಾಮವಾಚಕ
    ಅಬಾಧಿತ, ನಿರುಪಾಧಿಕ–ಬಹುಮತ; ಅರ್ಧಕ್ಕಿಂತಲೂ ಹೆಚ್ಚು ಯಾ ಪ್ರತಿಪಕ್ಷಗಳೆಲ್ಲವುಗಳ ಒಟ್ಟು ಮೊತ್ತಕ್ಕಿಂತ ಹೆಚ್ಚು ಮತಗಳನ್ನು ಪಡೆದಿರುವುದು.


    logo