logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

about-face
ನಾಮವಾಚಕ
(ದಿಕ್ಕು, ಅಭಿಪ್ರಾಯ, ಧೋರಣೆ ಯಾ ನಡತೆಯ) ತಿರುಗುಮುರುಗು; ವಿರುದ್ಧಮುಖವಾಗುವುದು; ಪೂರ್ಣ ವ್ಯತ್ಯಾಸ.

about-face
ಅಕರ್ಮಕ ಕ್ರಿಯಾಪದ
(ದಿಕ್ಕು, ಅಭಿಪ್ರಾಯ, ಧೋರಣೆ ಯಾ ನಡತೆಯ ವಿಷಯದಲ್ಲಿ) ತಿರುಗುಮುರುಗಾಗು; ವಿರುದ್ಧಮುಖವಾಗು; ಪೂರ್ತಿವ್ಯತ್ಯಾಸವಾಗು.

about-sledge
ನಾಮವಾಚಕ
ದೊಡ್ಡ ಚಮ್ಮಟಿಗೆ; ಕಮ್ಮಾರನು ಬಳಸುವ ದೊಡ್ಡ ಸುತ್ತಿಗೆ.

about-turn
ನಾಮವಾಚಕ
= 1about-face.

about-turn
ಅಕರ್ಮಕ ಕ್ರಿಯಾಪದ
= 2about-face.

above
ಕ್ರಿಯಾವಿಶೇಷಣ
  • ಮೇಲೆ; ಮೇಲಕ್ಕೆ; ಮೇಲುಗಡೆ.
  • ತಲೆಯ ಮೇಲುಗಡೆ; ಆಕಾಶದಲ್ಲಿ; ಎತ್ತರದಲ್ಲಿ: a flock of birds circled above ಹಕ್ಕಿಗಳ ಗುಂಪು ಆಕಾಶದಲ್ಲಿ ಸುತ್ತುತ್ತಿತ್ತು. seen from above ಎತ್ತರದಿಂದ ನೋಡಿದಾಗ.
  • ಹೊಳೆಯ–ಮೇಲುಗಡೆಗೆ, ಮೇಲ್ಭಾಗದಲ್ಲಿ.
  • ಮಹಡಿಯಲ್ಲಿ; ಉಪ್ಪರಿಗೆಯಲ್ಲಿ: my room is just above ನನ್ನ ಕೋಣೆ ಮಹಡಿಯಲ್ಲಿದೆ.
  • ಮೇಲ್ಭಾಗದಲ್ಲಿ.
  • (ಪುಸ್ತಕ, ಲೇಖನ, ಮೊದಲಾದವುಗಳಲ್ಲಿ) ಹಿಂದೆ; ಮೊದಲಲ್ಲಿ; ಮೇಲೆ: as was remarked above ಹಿಂದೆ ಹೇಳಿದಂತೆ. the above-cited passages ಮೇಲೆ ಹೇಳಿದ ಭಾಗಗಳು. the above-mentioned facts ಮೊದಲಲ್ಲಿ ತಿಳಿಸಿದ ಸಂಗತಿಗಳು.
  • ಸ್ವರ್ಗದಲ್ಲಿ; ದೇವಲೋಕದಲ್ಲಿ: the Powers above ಸ್ವರ್ಗದ ಶಕ್ತಿಗಳು; ದೇವತೆಗಳು; ದೇವಲೋಕದವರು. to eternal rest above ಸ್ವರ್ಗದಲ್ಲಿ ಶಾಶ್ವತ ವಿಶ್ರಾಂತಿಗೆ.
  • ಜೊತೆಗೆ; ಕೂಡ; ಸಹ; ಇನ್ನೂ: over and above ಇದರ ಜೊತೆಗೆ; ಅಷ್ಟೇ ಅಲ್ಲದೆ; ಇದಕ್ಕೂ ಮೀರಿ.
  • (ದರ್ಜೆ, ಅಧಿಕಾರ, ಮೊದಲಾದವುಗಳಲ್ಲಿ) ಮೇಲೆ; ಉನ್ನತವಾಗಿ: appeal to the courts above ಮೇಲಿನ ಕೋರ್ಟ್‍ಗಳಿಗೆ ಮನವಿ ಮಾಡು.
  • (ಸಂಖ್ಯೆಯಲ್ಲಿ) ಹೆಚ್ಚಾಗಿ; ಮೀರಿ; ಅಧಿಕವಾಗಿ: books with 100 pages and above ನೂರು ಮತ್ತು ಅದಕ್ಕೂ ಹೆಚ್ಚಿನ ಪುಟಗಳ ಪುಸ್ತಕಗಳು.

  • above
    ಉಪಸರ್ಗ ಪದಗುಚ್ಛ ನುಡಿಗಟ್ಟು
  • ಮೇಲೆ; ಮೇಲಕ್ಕೆ; ಮೇಲುಗಡೆ; ಮೀರಿ: fly above the horizon ದಿಗಂತದ ಮೇಲೆ. above average ಸಾಮಾನ್ಯ ಮಟ್ಟಕ್ಕಿಂತ ಮೇಲೆ. above par = above average. heard above the din ಗದ್ದಲವನ್ನು ಮೀರಿ ಕೇಳಿ ಬಂದ. head above water (ರೂಪಕವಾಗಿ) ಸಾಲದಿಂದ ಮೇಲೆ; ಸಾಲವಿಲ್ಲದೆ; ಸಾಲಕ್ಕೊಳಗಾಗದೆ.
  • -ಕ್ಕಿಂತ ಹೆಚ್ಚಾಗಿ, ಜಾಸ್ತಿಯಾಗಿ, ಅಧಿಕವಾಗಿ: above a hundred ನೂರಕ್ಕಿಂತ ಹೆಚ್ಚಾಗಿ.
  • (ನದಿಯ) ಮೇಲುಗಡೆ; ಮೇಲುಪಾತ್ರದಲ್ಲಿ.
  • (ಒಂದಕ್ಕಿಂತ) ಇನ್ನೂ ಉತ್ತರಕ್ಕೆ; ಉತ್ತರ ದಿಕ್ಕಿನಲ್ಲಿ: six miles above Mysore ಮೈಸೂರಿಗೆ ಆರು ಮೈಲಿ ಉತ್ತರದಲ್ಲಿ.
  • (ಪ್ರಾಚೀನ ಪ್ರಯೋಗ) ಇನ್ನೂ ಪೂರ್ವದ; ಇನ್ನೂ–ಮುಂಚಿನ, ಹಿಂದಿನ; ಮೊದಲ ಕಾಲದ: not traced above the third contury ಮೂರನೆಯ ಶತಮಾನಕ್ಕೆ ಪೂರ್ವದಲ್ಲಿ ಗುರುತಿಸಲಾಗದ.
  • ಎಟುಕದ; ಒಳಗಾಗದ; ದೂರವಾದ; ಸಿಗದ; ಮೀರಿದ; ಅತೀತ: above criticism ಟೀಕೆಗೆ ಸಿಗದ; ನಿರಾಕ್ಷೇಪವಾದ. above suspicion ಸಂಶಯಾತೀತವಾದ. above my understanding ನನ್ನ ತಿಳಿವಳಿಕೆಗೆ ಎಟುಕದ.
  • (ದೊಡ್ಡತನ, ಒಳ್ಳೆಯತನ, ಯೋಗ್ಯತೆಗಳಿಂದ) ಮೇಲಿನ; ಮೇಲ್ಮಟ್ಟದ; ಮೀರಿದ; ಉನ್ನತವಾದ: above meanness ಸಣ್ಣತನವನ್ನು ಮೀರಿದ; ಸಣ್ಣತನವಿಲ್ಲದ. ideas above one’s station ಅಂತಸ್ತಿಗಿಂತ ಮೇಲ್ಮಟ್ಟದ ಭಾವನೆಗಳು.
  • ಎಲ್ಲಕ್ಕಿಂತ–ಮಿಗಿಲಾಗಿ, ಮುಖ್ಯವಾಗಿ: should value honour above life ಪ್ರಾಣಕ್ಕಿಂತ ಮಿಗಿಲಾಗಿ ಮರ್ಯಾದೆಗೆ ಬೆಲೆ ಕೊಡಬೇಕು.
  • (ಒಂದಕ್ಕಿಂತ) ಮೇಲಿನ ದರ್ಜೆಯ; ಉನ್ನತ ಪದವಿಯ: a professor is above a reader ಪ್ರೊಹೆಸರು ರೀಡರಿಗಿಂತ ಮೇಲಿನ ಪದವಿಯವನು.
  • (ನಾಟಕ) ರಂಗದ ಮೇಲುಭಾಗದಲ್ಲಿ.

  • above
    ಗುಣವಾಚಕ
    ಹಿಂದಿನ; ಮೇಲೆ ಹೇಳಿದ; ಮೇಲೆ ಉದ್ಧರಿಸಿದ; ಪೂರ್ವೋಕ್ತ: the above statements ಪೂರ್ವೋಕ್ತ ಹೇಳಿಕೆಗಳು.

    above
    ನಾಮವಾಚಕ
  • ಮೇಲಿರುವುದು; ಮೇಲಿನದು; ಹಿಂದೆ ಹೇಳಿದ್ದು; ಹಿಂದೆ ಹೇಳಿದವರು; ಪೂರ್ವೋಕ್ತ: diagram like the above ಮೇಲಿನಂಥ ನಕ್ಷೆ. refer to the above ಹಿಂದೆ ಹೇಳಿದ್ದನ್ನು ನೋಡು. the above is the owner ಮೇಲೆ ಹೇಳಿದವನು ಇದರ ಒಡೆಯ.
  • (ಮುಖ್ಯವಾಗಿ ಅಧಿಕಾರದ ವಿಷಯದಲ್ಲಿ) ಮೇಲಿನದು: imposed from above ಮೇಲಿನಿಂದ (ಮೇಲಿನ ಅಧಿಕಾರಿಯಿಂದ) ವಿಧಿಸಿದ್ದು.
  • ದೇವಲೋಕ: a gift from above ದೇವಲೋಕದ ವರ.

  • above-board
    ಕ್ರಿಯಾವಿಶೇಷಣ
    ಮುಚ್ಚುಮರೆಯಿಲ್ಲದೆ; ವಂಚನೆಯಿಲ್ಲದೆ; ಪ್ರಾಮಾಣಿಕವಾಗಿ; ಸಂಶಯಾಸ್ಪದವಲ್ಲದೆ; ಬಹಿರಂಗವಾಗಿ; ಋಜುವಾಗಿ.


    logo