logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Lava
ಶಿಲಾರಸ. ಭೂಮಿಯೊಳಗಿನ ತೆರವಿನಿಂದ ಮೇಲ್ಮೈಗೆ ಉಕ್ಕಿ ಬರುವ ಶಿಲೆಯ ಬಿಸಿ ದ್ರವ.

Law of Conservation of Matter
ವಸ್ತು ನಿತ್ಯತ್ವ ನಿಯಮ. ರಾಸಾಯನಿಕ ಬದಲಾವಣೆ ನಡೆದಾಗ ವಸ್ತುವು ಸೃಷ್ಟಿಯೂ ಆಗುವುದಿಲ್ಲ, ಲಯವೂ ಆಗುವುದಿಲ್ಲ. ಸಂಯುಕ್ತ ವಸ್ತುವಿನ ತೂಕವು ಅದರ ಘಟಕಗಳಾದ ಮೂಲ ವಸ್ತುಗಳ ತೂಕಕ್ಕೆ ಸಮ.

Law of Conservation of Energy
ಶಕ್ತಿ ಸಂರಕ್ಷಣಾ ನಿಯಮ. ಶಕ್ತಿಯನ್ನು ಉತ್ಪತ್ತಿ ಅಥವಾ ನಾಶಮಾಡುವುದು ಸಾಧ್ಯವಿಲ್ಲ. ಆದರೆ ಶಕ್ತಿಯನ್ನು ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಬದಲಾಯಿಸಬಹುದು.

Law of Definite Proportion
ನಿಯತ ಪ್ರಮಾಣ ನಿಯಮ. ಪ್ರತಿಯೊಂದು ಸಂಯುಕ್ತ ವಸ್ತುವೂ ಕೆಲವು ನಿರ್ದಿಷ್ಟ ಮೂಲವಸ್ತುಗಳನ್ನು ಒಂದು ನಿಯತ ಪ್ರಮಾಣದಲ್ಲಿ ಯಾವಾಗಲೂ ಒಳಗೊಂಡಿರುತ್ತದೆ. ತತ್ಫಲವಾಗಿ ಒಂದು ನಿರ್ದಿಷ್ಟ ಸಂಯುಕ್ತ ವಸ್ತು ಒಂದು ನಿರ್ದಿಷ್ಟ ರಚನೆಯನ್ನು ಹೊಂದಿರುತ್ತದೆ.

Law of Diminishing Returns
ಲಾಭ (ಉತ್ಪತ್ತಿ) ಕುಗ್ಗುವ ನಿಯಮ; ಪ್ರತಿಫಲ ಕುಗ್ಗುವ ನಿಯಮ. ಈ ನಿಯಮವನ್ನು ಕೃಷಿ ಕ್ಷೇತ್ರದಲ್ಲಿ ಕೆಳಗಿನಂತೆ ವ್ಯಾಖ್ಯಾನ ಮಾಡಬಹುದು. ಭೂಮಿಗೆ ಹಾಕುವ ರಾಸಾಯನಿಕ ಗೊಬ್ಬರದ ಪ್ರತಿಯೊಂದು ಹೆಚ್ಚಳಕ್ಕೂ ಬರಬಹುದಾದ ಲಾಭ ಕಡಿಮೆಯಾಗುತ್ತಾ ಹೋಗುತ್ತದೆ.

Law of Equivalents
ಸಮಬಲಗಳ ನಿಯಮ; ಸಮತಾನಿಯಮ. ಮೂಲ ವಸ್ತುಗಳು ತಮ್ಮ ಸಮಬಲಗಳ ಪ್ರಮಾಣಾನುಸಾರವಾಗಿ ಒಂದರೊಡನೊಂದು ಬೆರೆಯುತ್ತವೆ.

Law of Mass Action
ದ್ರವ್ಯಕ್ರಿಯಾನಿಯಮ. ರಾಸಾಯನಿಕ ಕ್ರಿಯೆಯ ವೇಗ, ಕ್ರಿಯೆಯಲ್ಲಿ ಭಾಗವಹಿಸುವ ಘಟಕಗಳ ಅಣು ಸಾಂದ್ರತೆಯನ್ನವಲಂಬಿಸಿರುತ್ತದೆ.

Law of Multiple Proportion
ಅಪವರ್ತ್ಯ ಪ್ರಮಾಣ ನಿಯಮ. ಎರಡು ಮೂಲವಸ್ತುಗಳು ಬೇರೆ ಬೇರೆ ಪ್ರಮಾಣದಲ್ಲಿ ಸಂಯೋಜನೆಯಾಗಿ ಬೇರೆ ಬೇರೆ ಸಂಯುಕ್ತಗಳಾದಾಗ, ಈ ಬೇರೆ ಬೇರೆ ಸಂಯುಕ್ತವಸ್ತುಗಳಲ್ಲಿ, ಒಂದು ಮೂಲವಸ್ತುವಿನ ತೂಕವನ್ನು ಒಂದೇ ಸಮನಾಗಿ ತೆಗೆದುಕೊಂಡರೆ, ಆಗ ಆ ಬೇರೆ ಬೇರೆ ಸಂಯುಕ್ತವಸ್ತುಗಳಲ್ಲಿರುವ ಇನ್ನೊಂದು ಮೂಲವಸ್ತುವಿನ ತೂಕಗಳ ಅನುಪಾತ ಸರಳಾನುಪಾತವಾಗಿರುತ್ತದೆ.

Law of Osmotic Pressure
ಅಭಿಸರಣ ಒತ್ತಡ ನಿಯಮ. 1. ಸ್ಥಿರ ಉಷ್ಣತೆಯಲ್ಲಿ ಅಭಿಸರಣ ಒತ್ತಡ, ದ್ರಾವಣದ ಪ್ರಬಲತೆಗೆ ಸರಳ ಪ್ರಮಾಣ, ಅಥವಾ ಘನ ಅಳತೆಗೆ ವಿರುದ್ಧ ಪ್ರಮಾಣದಲ್ಲಿರುತ್ತದೆ. 2. ಸ್ಥಿರ ಪ್ರಬಲತೆಯಲ್ಲಿ ಒಂದು ದ್ರಾವಣದ ಅಭಿಸರಣ ಒತ್ತಡವು ಅದರ ಉಷ್ಣತೆಗನುಗುಣವಾಗಿ ನೇರವಾಗಿ ಬದಲಾಗುತ್ತದೆ. 3. ಸಮಾನ ಅಣುಪ್ರಮಾಣದ ಬೇರೆ ಬೇರೆ ವಿಲೀನಕ ವಸ್ತುಗಳು ಸಮ ಪ್ರಮಾಣದ ದ್ರಾವಣಗಳಲ್ಲಿ ಸಮನಾದ ಅಭಿಸರಣ ಒತ್ತಡವನ್ನುಂಟುಮಾಡುತ್ತದೆ.

Law of Reciprocal Proportion
ಪರಸ್ಪರ ಪ್ರಮಾಣ ನಿಯಮ; ಸಮಾನ ತೂಕ ನಿಯಮ. ಒಂದು ಗೊತ್ತಾದ ಮೂಲವಸ್ತುವಿನ, ಒಂದು ನಿರ್ದಿಷ್ಟ ತೂಕದೊಂದಿಗೆ, ಸಂಯೋಜಿಸುವ ಎರಡು ಅಥವಾ ಹೆಚ್ಚಿನ ಮೂಲವಸ್ತುಗಳ ತೂಕಗಳು (ಅಥವಾ ಅವುಗಳ ಅಪವರ್ತ್ಯಗಳು) ಅವುಗಳು ಪರಸ್ಪರ ಸಂಯೋಜಿಸುವ ತೂಕಗಳ ಅನುಪಾತವೂ ಆಗಿರುತ್ತದೆ.


logo