logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Immature Soil
ಅಪಕ್ವ ಮಣ್ಣು. ವಲಯಗಳನ್ನು ಹೊಂದಿರದ, ಮೇಲಿನಿಂದ ಕೊಚ್ಚಿಬಂದು ಶೇಖರಣೆಯಾಗುವುದರಿಂದುಂಟಾಗುವ ಮಣ್ಣು.

Impulsive Force
ಅಘಾತ ಬಲ. ಅತ್ಯಲ್ಪ ಕಾಲ ಪ್ರಯೋಗವಾಗುವ ಅತ್ಯಧಿಕ ಪ್ರಮಾಣದ ಜಲಗಳಿಗೆ ಅಘಾತ ಬಲಗಳೆಂದು ಹೆಸರು.

Indicator
ಸೂಚಕ. ತನ್ನ ಬಣ್ಣದ ತೀವ್ರ ಬದಲಾವಣೆಯಿಂದ ನಿಶ್ಚಿತವಾದ ರಾಸಾಯನಿಕ ಕ್ರಿಯೆಯ ಪೂರ್ಣತೆಯನ್ನು ಸೂಚಿಸುವ, ಗಾತ್ರ ವಿಶ್ಲೇಷಣದಲ್ಲಿ ಉಪಯೋಗಿಸುವ ವಸ್ತುವಿಗೆ, ‘ಸೂಚಕ’ ವೆಂದು ಹೆಸರು.

Infiltration
ಇಳಿಯುವಿಕೆ; ಬಸಿಯುವಿಕೆ. ಮಣ್ಣಿನ ಮೇಲೆ ಬಿದ್ದ ನೀರು ಭೂಮಿಯಲ್ಲಿ ಕೆಳ ಮುಖವಾಗಿ ಇಳಿದು ಹೋಗುವುದು.

Infiltration Capacity
ಇಳಿಯುವಿಕೆಯ ಸಾಮರ್ಥ್ಯ; ಬಸಿಯುವಿಕೆಯ ಸಾಮರ್ಥ್ಯ. ನೀರು ಭೂಮಿಯಲ್ಲಿ ಇಳಿಯುವಿಕೆಯ ಸಾಮರ್ಥ್ಯ.

Internal Energy
ಆಂತರಿಕ ಶಕ್ತಿ. ಪ್ರತಿಯೊಂದು ವಸ್ತುವಿನ ಅಂತರ್ಗತ ನಿರ್ದಿಷ್ಟ ಶಕ್ತಿ.

Internal Stability
ಆಂತರಿಕ ಸ್ಥಿರತೆ. ಅಕ್ಕಪಕ್ಕದ ಕಣಗಳ ಪರಸ್ಪರ ಆಕರ್ಷಣೆಯಿಂದ ಕೂಡಿದ ಹರಳಾಕೃತಿಯಲ್ಲಿರುವ ದ್ರವ್ಯ ಸ್ಥಾನಪಲ್ಲಟಕ್ಕೆ ತೋರುವ ಪ್ರತಿಭಟನಾಗುಣ.

Inter Tilled Crops
ಅಂತರ್ಬೇಸಾಯ ಬೆಳೆಗಳು. ಸಾಲುಗಳ ಮಧ್ಯೆ ಪದೇ ಪದೇ ಉಕ್ಕೆ ಹೊಡೆದು ಬೆಳೆಸಬೇಕಾದ ಬೆಳೆಗಳು.

Intrazonal Soils
ವಲಯಾಂತರ್ಗತ ಮಣ್ಣುಗಳು. ವಾತಾವರಣ ಮತ್ತು ಸಸ್ಯ ಬೆಳವಣಿಗೆಯ ಮೇಲೆ ಕೆಲವು ಅಂಶಗಳ ಕ್ರಿಯೆಯಿಂದ ಉಂಟಾಗಿರುವ ಹೆಚ್ಚು ಕಡಿಮೆ ಪರಿಪೂರ್ಣ ಗುಣಧರ್ಮಗಳನ್ನುಳ್ಳ ಮಣ್ಣುಗಳು.

Ion
ಅಯಾನ್ ವಿದ್ಯುತ್ ವಾಹಿಕಣ; ಇದು ವಿದ್ಯುತ್ ಅಂಶವುಳ್ಳ ಕಣ. ಋಣಾಂಶಗಳ ಲೋಪ ಮತ್ತು ಆಗಮದಿಂದಾಗಿ ಪರಮಾಣುಗಳು, ಕ್ರಮವಾಗಿ ಧನ ಮತ್ತು ಋಣ ಅಯಾನುಗಳಾಗುತ್ತವೆ.


logo