logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Humification
ಹ್ಯೂಮಸ್ಸೀಕರಣ. ಸಾವಯವವಸ್ತು ಕೊಳೆತು, ಹ್ಯೂಮಸ್ ಆಗಿ ಪರಿವರ್ತನೆ ಹೊಂದುವ ವಿಧಾನ.

Hydration of Colloid
ಅಸ್ಫಟಿಕ ಜಲ ಕಲಿಲ ಜಲತ್ವ. ಅಸ್ಫಟಿಕ ಕಣಗಳಿಂದ ಹಿಡಿದಿಡಲ್ಪಟ್ಟಿರುವಂತಹ ನೀರಿನ ಮೊತ್ತ.

Hydrated Lime
ಜಲಮಿಶ್ರಿತ ಸುಣ್ಣ. ಕ್ಯಾಲ್ಸಿಯಂ ಆಕ್ಸೈಡಿನ ಮೇಲೆ ನೀರಿನ ಕ್ರಿಯೆ ನಡೆದಾಗ ಕ್ಯಾಲ್ಸಿಯಂ ಹೈಡ್ರಾಕ್ಸೈಡು ದೊರೆಯುತ್ತದೆ. ಸಾಮನ್ಯವಾಗಿ ಇದನ್ನೇ ನಾವು ಸುಣ್ಣವೆಂದು ಕರೆಯುತ್ತೇವೆ.

Hydrolysis
ಜಲವಿಶ್ಲೇಷಣೆ. ನೀರಿನ ಕ್ರಿಯೆಯಿಂದ ಉಂಟಾಗುವ ರಾಸಾಯನಿಕ ವಿಘಟನೆ.

Hydrometer
ದ್ರವಮಾಪಕ; ಜಲಗುಣತ್ವಮಾಪಕ; ಆರ್ದ್ರತಾಮಪಕ. ದ್ರವದ ಸಾಪೇಕ್ಷ ಸಾಂದ್ರತೆಯನ್ನು ಕಂಡುಹಿಡಿಯಲು ಉಪಯೋಗಿಸಲಾಗುವ ಉಪಕರಣ. ಈ ಉಪಕರಣ ತೇಲುವಿಕೆಯ ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತದೆ.

Hygroscopic Water
ಹೀರಿಕೊಂಡ ಆರ್ದ್ರತೆ; ಹೀರಿದ ನೀರು; ಜಲಾಕರ್ಷಕ ನೀರು. ಕಣಗಳ ಆಕರ್ಷಣ ಶಕ್ತಿಯಿಂದಾಗಿ ಮಣ್ಣಿನ ಕಣಗಳು ಹೀರಿಕೊಂಡಿರುವ ನೀರು.

Ideal Gas
ಆದರ್ಶ ಅನಿಲ. ಬಾಯಲ್ಸ್ ಮತ್ತು ಚಾರ್ಲ್ಸ್, ಅನಿಲ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವ ಅನಿಲಗಳು.

Ideal Solution
ಆದರ್ಶ ದ್ರಾವಣ. ಎಲ್ಲಾ ಪ್ರಬಲತೆ ಮತ್ತು ಉಷ್ಣತೆಗಳಲ್ಲಿಯೂ ವ್ಹಾಂಟ್ ಹಾಫ್ ನ ತತ್ವವನ್ನು ಪರಿಪಾಲಿಸುವ ದ್ರಾವಣ. PV = RT P = ಒತ್ತಡ; V = ಗಾತ್ರ; R = ಸ್ಥಿರ; T = ಉಷ್ಣತೆ.

Igneous Rock
ಅಗ್ನಿಶಿಲೆ. ಭೂಮಿಯಲ್ಲಿ ಕರಗಿದ ಶಿಲಪಾಕವು ತಂಪಾಗುವುದರಿಂದ ಉಂಟಾಗುವ ಶಿಲೆಯ ಲಾವಾರಸದ ಘನೀಕಣದಿಂದುಂಟಾಗುವ ಶಿಲೆ.

Illuviation
ಇಲ್ಯೂವಿಯೇಷನ್; ಅಧೋಗಮನ; ಶೇಖರಣೆ; ವಸ್ತುಸಂಚಯ. ದ್ರಾವಣದ ಮುಖಾಂತರ ಮಣ್ಣಿನ ವಸ್ತುಗಳು ಕೆಳವಲಯಗಳಲ್ಲಿ ಸಂಗ್ರಹಣೆಯಾಗುವ ವಿಧಾನ.


logo