logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Filler
ಭರ್ತಿ ಪದಾರ್ಥ. ರಾಸಾಯನಿಕ ಗೊಬ್ಬರದ ಮಿಶ್ರಣವನ್ನು ಒಂದು ಗೊತ್ತಾದ ತೂಕಕ್ಕೆ ತರಲು ಬೆರೆಸುವ ಗೊಬ್ಬರದಲ್ಲಿನ, ಜಡ ಅಥವಾ ನಿಷ್ಕ್ರಿಯ ವಸ್ತು.

Fish Guano
ಮೀನು ಗೊಬ್ಬರ. ಮೀನು ಅಥವಾ ಮೀನಿನ ಕಚ್ಚಾವಸ್ತುಗಳನ್ನು ಒಣಗಿಸಿ ಪುಡಿ ಮಾಡುವುದರಿಂದ ಅಥವಾ ಸಂಸ್ಕರಿಸುವುದರಿಂದ ದೊರೆಯುವ ಮೀನು ಗೊಬ್ಬರ.

Flocculation
ತುಂತುಕರಣ; ಒಟ್ಟಾಗುವಿಕೆ. ತೇಲಾಡುವ ಸ್ಥಿತಿಯಲ್ಲಿರುವ ಅಸ್ಫಟಿಕ ಕಣಗಳು ಒಟ್ಟುಗೂಡಿ ತುಂತುಗಳಾಗುವಿಕೆ.

Force
ಬಲ. ನಿಶ್ಚಿತವಾಗಿರುವ ಅಥವಾ ಸಮವೇಗದಿಂದ ಚಲಿಸುತ್ತಿರುವ ವಸ್ತುವಿನ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವ ಬಾಹ್ಯ ಪ್ರೇರಣೆಗೆ, ಬಲವೆಂದು ಹೆಸರು.

Formulae
ಸೂತ್ರಗಳು. ಸಂಯುಕ್ತ ವಸ್ತುಗಳನ್ನು ಸಂಕ್ಷಿಪ್ತ ರೀತಿಯಲ್ಲಿ ಸೂಚಿಸುವ ರೀತಿಗೆ, ಸೂತ್ರಗಳೆಂದು ಹೆಸರು.

Foliated Rock
ಹಾಳೆ (ಪದರ) ಶಿಲೆ. ಅವರೆ ಕಾಳಿನಾಕಾರದ ಖನಿಜದ ಹರಳುಗಳಿಂದ ಕೂಡಿದ ಪದರ ಶಿಲೆ.

Forms of Soil Consistancy
ಮಣ್ಣು ಸ್ಥಿರತೆಯ ಆಕಾರಗಳು. ಅಂಟು, ಮೇಣ, ಮೃದು, ಮತ್ತು ಗಟ್ಟಿ ಎಂಬ ಮಣ್ಣು ಸ್ಥಾಯಿತ್ವದ ನಾಲ್ಕು ಆಕಾರಗಳನ್ನು ಗುರುತಿಸಬಹುದು.

Fossils
ಪಳೆಯುಳಿಕೆ. ಶಿಲೆಯಲ್ಲಿ ದೊರಕುವ ಜೀವಾವಶೇಷಗಳು. ಇವು, ಸಾಮಾನ್ಯವಾಗಿ ಜಲಶಿಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

Formula for Fertilizer Mixing
ರಾಸಾಯನಿಕ ಗೊಬ್ಬರ ಬೆರೆಸುವ ಸೂತ್ರ. ನಿರ್ದಿಷ್ಟ ಸಸ್ಯ ಪೋಷಕಗಳನ್ನುಳ್ಳ ರಾಸಾಯನಿಕ ಗೊಬ್ಬರದ ಮಿಶ್ರಣವನ್ನು ತಯಾರಿಸಲು ಉಪಯೋಗಿಸಬೇಕಾದ ವಸ್ತುಗಳ ಪ್ರಮಾಣವನ್ನು ನಿರ್ಧರಿಸಲು ಸಹಾಯಕವಾಗುವ ಸೂತ್ರ. ಇದರಲ್ಲಿ : X = (A x B) ➗ C X = ಉಪಯೋಗಿಸಬೇಕಾದ ಬೆರಕೆ ವಸ್ತು (ಪೌಂಡುಗಳಲ್ಲಿ). A = ಬೇಕಾದ ರಾಸಾಯನಿಕ ಗೊಬ್ಬರದ ಮಿಶ್ರಣ (ಪೌಂಡುಗಳು). B = ಮಿಶ್ರಣದಲ್ಲಿರಬೇಕಾದ ಪ್ರಧಾನ ಪೋಷಕಗಳ (N. P. K) ಶೇಕಡ ಪ್ರ ಮಾಣ. C = ಬೆರಕೆ ವಸ್ತುವಿನಲ್ಲಿರುವ ಪ್ರಧಾನ ಪೋಷಕಗಳ ಶೇಕಡ ಪ್ರಮಾಣ.

Freezing Point
ಹೆಪ್ಪುಗಟ್ಟುವ ಬಿಂದು. ಘನ ಮತ್ತು ದ್ರವಗಳೆರಡೂ ಒಟ್ಟಿಗೆ ಇರುವ ವಸ್ತುವಿನ ಉಷ್ಣತೆ.


logo