logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Electrolyte
ವಿದ್ಯುದ್ವಿಭಜನೀಯ ; ವಿದ್ಯುದ್ವಿಶ್ಲೇಷ್ಯ ವಿದ್ಯುದ್ವಿಭಜನೆಯಲ್ಲಿ ಉಪಯೋಗಿಸುವ ದ್ರಾವಣಕ್ಕೆ, ವಿದ್ಯುದ್ವಿಭಜನೀಯ ಎಂದು ಹೆಸರು.

Electrodes
ವಿದ್ಯುದ್ವಾರಗಳು; ವಿದ್ಯುದ್ವಾಹಗಳು. ದ್ರಾವಣದಲ್ಲಿ ಅದ್ದಿದ ವಿದ್ಯುತ್ ಪ್ರವಾಹವು, ಪ್ರವೇಶಿಸುವ ಮತ್ತು ನಿರ್ಗಮನ ಸಾಗುವ ಫಲಕಗಳು.

Electro motive Series
ವಿದ್ಯುತ್ ವಾಹಕ ಶ್ರೇಣಿ. ಋಣಾಂಶಗಳನ್ನು ಕಳೆದುಕೊಂಡು, ಅಯಾನ್ ರೂಪಕ್ಕೆ ಬರುವ ಲೋಹಗಳ ಅವರೋಹಣ ಪ್ರವೃತ್ತಿ ಈ ಕೆಳಗಿನಂತೆ ಇದೆ. K>Ca>Na>Mg>Al Zn>Fe>Sn>Pb>H>Cu>Ag>Hg>Au.

Electron
ಋಣ ವಿದ್ಯುತ್ ಕಣ ಅಥವಾ ಋಣಾಣು 9.038X10-²⁸ ಗ್ರಾಂ ಭಾರ, 2X10-¹³ ಸೆಂಟಿ ಮೀಟರ್ ತ್ರಿಜ್ಯ ಮತ್ತು 4.774X10-¹⁰ ವಿದ್ಯುತ್ ಸ್ಥಿರ ಪ್ರಮಾಣದ ಮೌಲ್ಯವುಳ್ಳ, ವಿರೋಧ ಶಕ್ತಿಯುಳ್ಳ ಪರಮಾಣುಗಳ ಉಪಕರಣಗಳು.

Electro Static Bond
ಸ್ಥಿರ ವಿದ್ಯುತ್ ಬಂಧನ. ವಿದ್ಯುತ್ ಕ್ಷೇತ್ರದ ಪ್ರತಿಕ್ರಿಯೆಯಿಂದಾಗಿ ಒಟ್ಟಾಗಿರುವ ಅಥವಾ ಚದುರಿರುವ ಅಣುಗಳಲ್ಲಿ ಕಂಡುಬರುವ ಎರಡು ಪರಮಾಣುಗಳು ಅಥವಾ ಎರಡು ಗುಂಪಿನ ಪರಮಾಣುಗಳಲ್ಲಿ ಬಂಧನ.

Electro Static Unit
ಸ್ಥಿರ ವಿದ್ಯುತ್ ಮೂಲಮಾನ. ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ಪೂರಣವನ್ನು ವ್ಯಕ್ತಪಡಿಸುವ ಮೂಲಮಾನ.

Element
ಮೂಲವಸ್ತು. ಒಂದೇ ಪರಮಾಣು ಸಂಖ್ಯೆಯ ಪರಮಾಣುಗಳಿಂದ ಮಾತ್ರವೇ ರಚಿತವಾಗಿರುವ, ಒಂದು ವಸ್ತು.

Eluviation
ಎಲ್ಯೂವಿಯೇಷನ್; ಅಧೋಗಮನ. ಬಸಿಯುವ ನೀರಿನ ಮೂಲಕ, ಮಣ್ಣಿನ ವಸ್ತುಗಳು ಅಧೋಮುಖವಾಗಿ ಚಲಿಸುವಿಕೆ.

Elutriation Method
ಎಲ್ಯೂಟ್ರಿಯೇಷನ್ ವಿಧಾನ. ನೀರಿನ ಚಲನೆಯಿಂದ ಮಣ್ಣಿನ ಕಣಗಳನ್ನು ಬೇರೆ ಬೇರೆ ಗಾತ್ರದ ಗುಂಪುಗಳಾಗಿ ಬೇರ್ಪಡಿಸುವ ಒಂದು ಯಾಂತ್ರಿಕ ವಿಶ್ಲೇಷಣೆ.

Emulsoid
ಪಯಸ್ಯತೆ. ಅಸ್ಫಟಿಕ ಕಣಗಳ ಚದುರಿಕೆ ವಿಭಜನೆಯ ವಾಹಕಕ್ಕೆ ಆಕರ್ಷಣೆ ತೋರಿ ದ್ರಾವಣವಾದಾಗ, ಅಂತಹ ವ್ಯವಸ್ಥೆಗೆ ಪಯಸ್ಯತೆ ಎಂದು ಹೆಸರು.


logo