logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

yataghan
ನಾಮವಾಚಕ
(ಕಾಪು ಯಾ ಹಿಡಿಕೆಯ ಅಡ್ಡಪಟ್ಟಿಯಿಲ್ಲದ, ಮುಸ್ಲಿಂ ದೇಶಗಳಲ್ಲಿ ಬಳಸುವ) ಇಬ್ಬಾಗುಕತ್ತಿ; ಹಿಡಿಯ ಕಡೆ ಒಳಗಡೆಗೆ ಬಾಗಿದ, ಇನ್ನೊಂದು ಕಡೆ ಹೊರಬಾಗಿದ ಅಲಗುಳ್ಳ ಕತ್ತಿ.

yaw
ಅಕರ್ಮಕ ಕ್ರಿಯಾಪದ
(ಹಡಗು, ವಿಮಾನ, ಅಂತರಿಕ್ಷ ನೌಕೆ, ಮೊದಲಾದವುಗಳ ವಿಷಯದಲ್ಲಿ) ನೇರವಾಗಿ, ದೃಢವಾಗಿ – ಹೋಗದಿರು; (ಮುಖ್ಯವಾಗಿ) ಪಕ್ಕದಿಂದ ಪಕ್ಕಕ್ಕೆ ಓಲಾಡುತ್ತಾ – ಹೋಗು, ಚಲಿಸು.

yaw
ನಾಮವಾಚಕ
(ಹಡಗು ಮೊದಲಾದವುಗಳ ವಿಷಯದಲ್ಲಿ) ಅಡ್ಡಚಲನೆ; ಓಲಾಡುತ್ತಾ ಹೋಗುವುದು.

yawl
ನಾಮವಾಚಕ
  • (ಚರಿತ್ರೆ) (ಮುಖ್ಯವಾಗಿ ನಾಲ್ಕು ಯಾ ಆರು ಹುಟ್ಟುಗಳಿರುವ) ಸಣ್ಣ ವಿಹಾರದೋಣಿ.
  • ಎರಡು ಕೂವೆಯ ದೋಣಿ.
  • ಸಣ್ಣ ಮೀನು(ಗಾರಿಕೆ) ದೋಣಿ. Figure: Yawl

  • yawn
    ಅಕರ್ಮಕ ಕ್ರಿಯಾಪದ
  • (ಬಿರುಕು ಮೊದಲಾದವುಗಳ ವಿಷಯದಲ್ಲಿ) ಅಗಲವಾಗಿ ಬಿಟ್ಟುಕೊಂಡಿರು; ಬಾಯಿಬಿಟ್ಟುಕೊಂಡಿರು; ಬಾಯಿ ತೆರೆದಿರು: a yawning gulf ಅಗಲವಾಗಿ ತೆರೆದ ಕಂದಕ, ಅಗಳು, ಕೊಲ್ಲಿ.
  • (ಮನುಷ್ಯನ ಯಾ ಪ್ರಾಣಿಯ ವಿಷಯದಲ್ಲಿ) ಆಕಳಿಸು.
  • ಆಕಳಿಸುತ್ತ ಹೇಳು.

  • yawn
    ನಾಮವಾಚಕ
  • ಆಕಳಿಕೆ; ಜೃಂಭಣ.
  • (ಆಡುಮಾತು) ಬೇಸರ ಹುಟ್ಟಿಸುವಂಥದು; ಆಕಳಿಕೆ ಬರಿಸುವಂಥ ಕೆಲಸ ಮೊದಲಾದವು.
  • ಅಗಲವಾದ – ಕಂದಕ, ಅಗಳು, ಬಿರುಕು.

  • yawner
    ನಾಮವಾಚಕ
    ಆಕಳಿಸುವವ.

    yawningly
    ಕ್ರಿಯಾವಿಶೇಷಣ
  • (ಕಂದಕ ಮೊದಲಾದವುಗಳ ವಿಷಯದಲ್ಲಿ) ಅಗಲವಾಗಿ ಬಾಯಿಬಿಟ್ಟು, ತೆರೆದು.
  • (ಬೇಸರ ಯಾ ಆಯಾಸದಿಂದ) ಆಕಳಿಸುತ್ತಾ.

  • yawp
    ನಾಮವಾಚಕ
  • ಕರ್ಕಶ ಯಾ ಗೊಗ್ಗರು ದನಿಯ ಕೂಗು.
  • ಅಸಂಬದ್ಧವಾದ, ಪೆದ್ದು ಮಾತು.

  • yawp
    ಅಕರ್ಮಕ ಕ್ರಿಯಾಪದ
  • ಕರ್ಕಶ ಯಾ ಗೊಗ್ಗರು ದನಿಯಲ್ಲಿ – ಕೂಗು, ಕಿರಿಚು, ಅರಚು.
  • ಅಸಂಬದ್ಧವಾಗಿ ಮಾತನಾಡು.


  • logo