logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

yapock
ನಾಮವಾಚಕ
ದಕ್ಷಿಣ ಅಮೆರಿಕದ, ಜಾಲಪಾದಿ ಹಿಂಗಾಲಿನ, ಜಲವಾಸಿಯಾದ, ಹೊಟ್ಟೆಯ ಚೀಲವುಳ್ಳ, ಸಣ್ಣ ಸಸ್ತನಿ ಪ್ರಾಣಿ.

yapok
ನಾಮವಾಚಕ
= possum(2).

yapp
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಬಳುಕು ತೊಗಲುರಟ್ಟು ಹೆಚ್ಚಾಗಿ ಚಾಚಿರುವ ಪುಸ್ತಕದ ರಟ್ಟುಕಟ್ಟುವ ಬಗೆ.

yapper
ನಾಮವಾಚಕ
ಗಟ್ಟಿಯಾಗಿ ಮಾತನಾಡುವವನು; ಹುಯಿಲೆಬ್ಬಿಸುವವನು.

yarborough
ನಾಮವಾಚಕ
(ವಿಸ್ಟ್‍ ಯಾ ಬ್ರಿಡ್ಜ್‍ ಆಟದಲ್ಲಿ) ಒಂಬತ್ತನೆಯ ಬಂದಿಗಿಂತ ಮೇಲ್ಪಟ್ಟು ಎಲೆಯಿಲ್ಲದ ಕೈ.

yard
ನಾಮವಾಚಕ ಪದಗುಚ್ಛ
  • ಗಜ($=3$ ಅಡಿ ಯಾ ೦.೯೧೪೪ ಮೀಟರ್‍).
  • (ವಸ್ತುವಿನ) ಒಂದು ಗಜ; ಒಂದು ಗಜ ವಸ್ತು: a yard and a half of cloth ಒಂದೂವರೆ ಗಜ ಬಟ್ಟೆ.
  • (ಮುಖ್ಯವಾಗಿ ಕಟ್ಟಡದಲ್ಲಿ) (ಮರಳು ಮೊದಲಾದವುಗಳ ವಿಷಯದಲ್ಲಿ) ಚದರಗಜ ಯಾ ಘನಗಜ.
  • (ಬಹುವಚನದಲ್ಲಿ, ಆಡುಮಾತು) ಬಹು ದೀರ್ಘ; ವಿಪರೀತ ಉದ್ದ: yard of wallpaper ಬಹುಉದ್ದದ ಗೋಡೆ ಕಾಗದ.
  • (ನೌಕಾಯಾನ) ಹಾಯಿಮರ ಪಟದ ದಿಮ್ಮಿ; ಹಾಯಿಗೆ ಆಸರೆಯಾಗಿ ಯಾ ಕೂವೆಗೆ ಅಡ್ಡಲಾಗಿ ಯಾ ಓರೆಯಾಗಿ ತೂಗಹಾಕಿದ, ಎರಡು ಕೊನೆಗಳೂ ಚೂಪಾದ, ಉರುಳೆಯಾಕಾರದ ದಿಮ್ಮಿ.

  • yard
    ನಾಮವಾಚಕ ಪದಗುಚ್ಛ
    the Yard (ಬ್ರಿಟಿಷ್‍ ಪ್ರಯೋಗ) (ಆಡುಮಾತು) = Scotland Yard.
  • (ಮುಖ್ಯವಾಗಿ ಒಂದು ಕಟ್ಟಡಕ್ಕೆ ಸೇರಿದ ಯಾ ನಿರ್ದಿಷ್ಟ ಉದ್ದೇಶಕ್ಕೆ ಬಳಸುವ) ಅಂಗಳ; ಅಂಕಣ; ಪ್ರಾಂಗಣ, ಉದಾಹರಣೆಗೆ brickyard ಮೊದಲಾದವು.
  • (ಅಮೆರಿಕನ್‍ ಪ್ರಯೋಗ) ಮನೆಯ ತೋಟ.

  • yard
    ಸಕರ್ಮಕ ಕ್ರಿಯಾಪದ
    (ದನಕರುಗಳನ್ನು) ಅಂಗಳದಲ್ಲಿ ಕೂಡು; ಹಟ್ಟಿಯಲ್ಲಿ ಕೂಡಿಹಾಕು; ಕೊಟ್ಟಿಗೆಯಲ್ಲಿ ಸೇರಿಸು.

    yard-arm
    ನಾಮವಾಚಕ
    ಹಾಯಿದಿಮ್ಮಿಯ ತುದಿ ಯಾ ತೋಳು.

    yard-man
    ನಾಮವಾಚಕ
  • ರೈಲ್ವೆ ಯಾ ಚೌಬೀನೆ ಅಂಗಳದ ಕೆಲಸಗಾರ.
  • (ಅಮೆರಿಕನ್‍ ಪ್ರಯೋಗ)
    1. ತೋಟದ ಮಾಲಿ.
    2. ಚಿಲ್ಲರೆ ಕೆಲಸದಾಳು; ಮನೆಯ ಹೊರಗಿನ ಬೇರೆಬೇರೆ ಕೆಲಸಗಳನ್ನು ಮಾಡುವ ವ್ಯಕ್ತಿ.


  • logo