logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

yank
ನಾಮವಾಚಕ
ಥಟ್ಟನೆಯ ಜಗ್ಗು, ಜಗ್ಗೆಳೆತ.

yank
ಸಕರ್ಮಕ ಕ್ರಿಯಾಪದ
ಥಟ್ಟನೆ ಜಗ್ಗು; (ಸನ್ನೆಕೋಲು ಮೊದಲಾದವನ್ನು) ಥಟ್ಟನೆ ಹಿಡಿದು ಎಳೆ.

Yank
ನಾಮವಾಚಕ
= Yankee(3).

Yankee
ನಾಮವಾಚಕ
  • (ಅಮೆರಿಕನ್‍ ಪ್ರಯೋಗ) ನ್ಯೂ ಇಂಗ್ಲೆಂಡಿನ ಉತ್ತರ ರಾಜ್ಯಗಳ ನಿವಾಸಿ.
  • (ಚರಿತ್ರೆ) (ಒಳಯುದ್ಧ ಕಾಲದ) ಫೆಡರಲ್‍ ಸೈನಿಕ.
  • (ಆಡುಮಾತು) (ಹೀನಾರ್ಥಕ ಪ್ರಯೋಗ) ಯಾಂಕಿ; ಅಮೆರಿಕ ಸಂಸ್ಥಾನದವನು; ಅಮೆರಿಕದವನು.
  • (ಬೇರೆಬೇರೆ ಪಂದ್ಯಗಳಲ್ಲಿ, ಗೆಲ್ಲುವ ನಿರೀಕ್ಷೆ ಇರುವ) ನಾಲ್ಕು ಯಾ ಹೆಚ್ಚು ಜೂಜುಕುದುರೆಗಳ ಮೇಲೆ ಕಟ್ಟುವ ಬಾಜಿ.
  • (ವಿಶೇಷಣವಾಗಿ) ಯಾಂಕಿ(ಗಳ); ಅಮೆರಿಕದವರಂಥ.

  • Yankee Doodle
    ನಾಮವಾಚಕ
  • ಅಮೆರಿಕನ್ನರ (ರಾಷ್ಟ್ರೀಯ ಮಟ್ಟು ಎಂದು ಪರಿಗಣಿತವಾದ) ರಾಗ ಯಾ ಹಾಡು.
  • = Yankee.

  • Yankeedom
    ನಾಮವಾಚಕ
    (ಆಡುಮಾತು)
  • (ಸಾಮೂಹಿಕವಾಗಿ) ಯಾಂಕಿಗಳು; ಅಮೆರಿಕನ್ನರು.
  • ಯಾಂಕಿ ರಾಜ್ಯ; ಯಾಂಕಿಗಳ ವಾಸಪ್ರದೇಶ.

  • Yankeefy
    ಸಕರ್ಮಕ ಕ್ರಿಯಾಪದ
    ಯಾಂಕಿಯಾಗು ಯಾ ಯಾಂಕಿಯಾಗಿಸು; ಯಾಂಕೀಕರಿಸು.

    Yankeeism
    ನಾಮವಾಚಕ
    ಯಾಂಕಿತ್ವ:
  • ಯಾಂಕಿಯ ಸ್ವಭಾವ, ಗುಣಗಳು, ಲಕ್ಷಣಗಳು.
  • (ಮಾತು ಮೊದಲಾದವುಗಳಲ್ಲಿ) ಯಾಂಕಿಯ ವೈಲಕ್ಷಣ್ಯಗಳು, ವೈಚಿತ್ರಗಳು.
  • ಅವುಗಳ ಅನುಕರಣೆ ಯಾ ಸಮರ್ಥನೆ.

  • yap
    ಅಕರ್ಮಕ ಕ್ರಿಯಾಪದ
    (ಭೂತರೂಪ & ಭೂತಕೃದಂತ yapped; ವರ್ತಮಾನ ಕೃದಂತ yapping).
  • ಕೀರಲು ದನಿಯಲ್ಲಿ ಯಾ ಗಟ್ಟಿಯಾಗಿ ಬಗುಳು.
  • (ಆಡುಮಾತು) ಗಟ್ಟಿಯಾಗಿ ಯಾ ಪೆದ್ದುಪೆದ್ದಾಗಿ ಮಾತನಾಡು ಯಾ ದೂರುತ್ತಾ ಹುಯಿಲೆಬ್ಬಿಸು.

  • yap
    ನಾಮವಾಚಕ
  • ಕೀರಲು ದನಿಯಲ್ಲಿ ಬೊಗಳುವುದು.
  • ಗಟ್ಟಿಯಾದ ಮಾತು; ಹುಯಿಲು.


  • logo