logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

yielding
ಗುಣವಾಚಕ
  • ವಶವಾಗುವ; ಮಣಿಯುವ.
  • (ಇನ್ನೊಬ್ಬರ) ಇಚ್ಫಾನುಸಾರಿಯಾದ.
  • (ವಸ್ತುವಿನ ವಿಷಯದಲ್ಲಿ) ಬಗ್ಗುವ; ಬಾಗುವ; ನಮ್ಯ.
  • ಫಲ ನೀಡುವ.

  • yieldingly
    ಕ್ರಿಯಾವಿಶೇಷಣ
  • ವಶವಾಗುವಂತೆ; ಮಣಿಯುವಂತೆ.
  • ಪೆಡಸಲ್ಲದೆ; ನಮ್ಯವಾಗಿ.

  • yieldingness
    ನಾಮವಾಚಕ
  • ವಶವಾಗುವಿಕೆ.
  • ನಮ್ಯತೆ.

  • yin
    ನಾಮವಾಚಕ
    (ಚೀಣೀ ತತ್ತ್ವಶಾಸ್ತ್ರ) ಜಗತ್ತಿನ ನಿಷ್ಕ್ರಿಯ ವಾದ ಸ್ತ್ರೀತತ್ತ್ವ.

    Yin and Yang
    ನಾಮವಾಚಕ
    (ಚೀಣೀ ತತ್ತ್ವಶಾಸ್ತ್ರ) ಸ್ತ್ರೀಪುಂತತ್ತ್ವಗಳು; ಯಾವುಗಳ ಪರಸ್ಪರ ಪ್ರಭಾವಗಳು ಜಗತ್ತಿನ ಜೀವಿಗಳ ಮತ್ತು ವಸ್ತುಗಳ ಆಗುಹೋಗು ಗಳನ್ನು ನಿರ್ಧರಿಸುತ್ತವೆಯೋ ಆ ತಮೋರೂಪದ, ನಕಾರಾತ್ಮಕವಾದ, ನಿಷ್ಕ್ರಿಯ ಸ್ತ್ರೀತತ್ತ್ವ ಮತ್ತು ಪ್ರಕಾಶರೂಪದ, ಸಕಾರಾತ್ಮಕವಾದ, ಕ್ರಿಯಾತ್ಮಕವಾದ ಪುರುಷತತ್ತ್ವ.

    yip
    ಅಕರ್ಮಕ ಕ್ರಿಯಾಪದ
    (ಭೂತರೂಪ & ಭೂತಕೃದಂತ yipped; ವರ್ತಮಾನ ಕೃದಂತ yipping). (ಅಮೆರಿಕನ್‍ ಪ್ರಯೋಗ) = 1yelp.

    yip
    ನಾಮವಾಚಕ
    = 2yelp.

    yippee
    ಭಾವಸೂಚಕ ಅವ್ಯಯ
    (ಹರ್ಷೋತ್ಕರ್ಷ ಯಾ ಭಾವೋದ್ರೇಕ ಸೂಚಿಸುವ ಉದ್ಗಾರ) ಶಾಭಾಸ್‍! ಶಹಭಾಸ್‍! ಭಲೆಭಲೆ! ಭೇಷ್‍!

    yippie
    ನಾಮವಾಚಕ
    ಯಿಪಿ; ರಾಜಕೀಯವಾಗಿ ಸಕ್ರಿಯವಾದ ಅಮೆರಿಕನ್‍ ‘ಹಿಪಿ’ (hippie) [Youth International Party ಎಂಬ ಪದಗುಚ್ಛದಿಂದ].

    yippy
    ನಾಮವಾಚಕ
    = yippie.


    logo