logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

YHA
ಸಂಕ್ಷಿಪ್ತ
(United Kingdom ನಲ್ಲಿ) Youth Hostels Association.

Yid
ನಾಮವಾಚಕ
(ಅಶಿಷ್ಟ, ಹೀನಾರ್ಥಕ ಪ್ರಯೋಗ) ಯೆಹೂದ್ಯ.

Yiddish
ನಾಮವಾಚಕ
ಯಿಡಿಷ್‍; ಮಧ್ಯ ಮತ್ತು ಪೂರ್ವ ಯೂರೋಪಿನ ಯಾ ಅಲ್ಲಿಂದ ಬಂದ ಯೆಹೂದ್ಯರು ಬಳಸುವ ಭಾಷೆ, ಮೊದಲಿಗೆ, ಹೀಬಊ ಮತ್ತು ಹಲವಾರು ಆಧುನಿಕ ಭಾಷೆಗಳಿಂದ ಪದಗಳನ್ನು ಪಡೆದುಕೊಂಡಿದ್ದ ಜರ್ಮನ್‍ ಭಾಷೆ.

Yiddish
ಗುಣವಾಚಕ
ಯಿಡಿಷ್‍ ಭಾಷೆಯ ಯಾ ಆ ಭಾಷೆಗೆ ವಿಶಿಷ್ಟವಾದ, ಸಂಬಂಧಿಸಿದ.

Yiddisher
ಗುಣವಾಚಕ
ಯಿಡಿಷ್‍ ಭಾಷೆ ಮಾತನಾಡುವ.

Yiddisher
ನಾಮವಾಚಕ
ಯಿಡಿಷ್‍ ಭಾಷೆಯವನು; ಯಿಡಿಷ್‍(ಮಾತನಾಡುವ) ವ್ಯಕ್ತಿ.

yield
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
  • ಫಲ ಕೊಡು; (ಫಲವಾಗಿ) ನೀಡು; ಉತ್ಪತ್ತಿಮಾಡು: the land yields good crops ಭೂಮಿ ಒಳ್ಳೆಯ ಬೆಳೆಗಳನ್ನು ಕೊಡುತ್ತದೆ.
  • ಬಿಟ್ಟುಕೊಡು; ಕೊಟ್ಟುಬಿಡು; ವಶಕ್ಕೆ ಒಪ್ಪಿಸಿಬಿಡು: yield fortress ಕೋಟೆಯನ್ನು (ಶತ್ರುವಿಗೆ) ಒಪ್ಪಿಸಿಬಿಡು, ಬಿಟ್ಟುಕೊಡು.

  • yield
    ನಾಮವಾಚಕ
    ಬೆಳೆ; ಫಸಲು; ಉತ್ಪತ್ತಿ; ಇಳುವರಿ; (ಪ್ರತಿ)ಫಲ; ಹುಟ್ಟುವಳಿ.

    yield point
    ನಾಮವಾಚಕ
    (ಭೌತವಿಜ್ಞಾನ) ನಮ್ಯತಾ ಮಟ್ಟ; ವಸ್ತು ಮೊದಲಾದವುಗಳ ಮೇಲಿನ ಒತ್ತಡ ಯಾ ಪೀಡನೆ ಯಾವ ಮಟ್ಟ ಮೀರಿದಾಗ ವಸ್ತು ಮೊದಲಾದವುಗಳು ತಮ್ಮ ಕಾಠಿನ್ಯವನ್ನು ಕಳೆದುಕೊಳ್ಳುವುವೋ ಆ ಮಟ್ಟ.

    yielder
    ನಾಮವಾಚಕ
  • ಫಲೋತ್ಪಾದಕ; ಫಲದಾಯಿ; ಉತ್ಪತ್ತಿ ಕೊಡುವಂಥದು.
  • ವಶವಾಗುವವನು; ಶರಣಾಗುವವನು; ಮಣಿಯುವವನು.


  • logo