logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

yes-man
ನಾಮವಾಚಕ
(ಬಹುವಚನ yes-men). ಶ್ರೀಮಾನ್‍ ಹೌದಪ್ಪ; ಹೌದು ಬಂಟ; ಜೋಹುಕುಂನವನು; ಎಲ್ಲಕ್ಕೂ ಹೌದೆನ್ನುವ, ನಿಸ್ಸತ್ತ ವ್ಯಕ್ತಿ.

yester-
ಸಮಾಸ ಪೂರ್ವಪದ
(ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ನೆನ್ನೆಯ, ಕಳೆದ ದಿನದ ಎಂಬರ್ಥದ ಸಮಾಸ ಪೂರ್ವಪದ: yester night ನೆನ್ನೆ ರಾತ್ರಿ.

yesterday
ನಾಮವಾಚಕ ಪದಗುಚ್ಛ
  • ನೆನ್ನೆ(ದಿನ): yesterday was her birthday ನೆನ್ನೆ ಅವಳ ಜನ್ಮದಿನ.
  • ಕಳೆದ ಇತ್ತೀಚಿನ ದಿನ ಮೊದಲಾದವು: is but of yesterday ಅದು ತೀರಾ ಇತ್ತೀಚಿನದು.

  • yesterday
    ಕ್ರಿಯಾವಿಶೇಷಣ
  • ನೆನ್ನೆ(ಯಂದು): arrived yesterday ನೆನ್ನೆ ಬಂದ.
  • ತೀರ ಇತ್ತೀಚೆಗೆ.

  • yesteryear
    ನಾಮವಾಚಕ
    (ಸಾಹಿತ್ಯಕ)
  • ಹೋದ, ಸಂದ, ಗತ, ಕಳೆದ – ವರ್ಷ.
  • ಇತ್ತೀಚೆಗೆ; ಇತ್ತೀಚಿನ ವರ್ಷಗಳು; ಮೊನ್ನೆಮೊನ್ನೆ; ನಿನ್ನೆಮೊನ್ನೆ.

  • yet
    ಕ್ರಿಯಾವಿಶೇಷಣ ಪದಗುಚ್ಛ
    nor yet ಅದನ್ನೂ ಇಲ್ಲ: won’t listen to me nor yet to her ನನ್ನ ಮಾತನ್ನು ಕೇಳುವುದಿಲ್ಲ, ಅವಳ ಮಾತನ್ನೂ ಸಹ (ಕೇಳುವುದಿಲ್ಲ).
  • ಇನ್ನೂ; ಅ(ಇ)ದುವರೆಗೂ; ಈಗಲೂ; ಈಗ್ಗೂ; ಆಗಲೂ; ಆಗ್ಗೂ: there is yet time ಈಗಲೂ ಸಮಯವಿದೆ, ಕಾಲಾವಕಾಶವಿದೆ. is he yet living? ಅವನು ಇನ್ನೂ ಬದುಕಿರುವನೇ?
  • (ನಿಷೇಧಾರ್ಥಸೂಚಕಗಳಲ್ಲಿ ಯಾ ಪ್ರಶ್ನಾರ್ಥಕಗಳಲ್ಲಿ) ಇನ್ನೂ: it is not time yet ಇನ್ನೂ ಹೊತ್ತಾಗಿಲ್ಲ (ಕಾಲ ಬಂದಿಲ್ಲ). I have never lied yet ನಾನು ಇನ್ನೂ (ಈ ವರೆಗೂ) ಸುಳ್ಳು ಹೇಳಿಲ್ಲ.
  • ಜೊತೆಗೆ; ಮಾತ್ರವಲ್ಲದೆ; ಅದೂ ಅಲ್ಲದೆ: yet once more ಮತ್ತೆ ಇನ್ನೊಮ್ಮೆ.
  • ಈಗಲೂ; ಇನ್ನೂ; ಇನ್ನುಮುಂದೆಯೂ: he will win, I will be even with you, yet ಅವನು ಗೆಲ್ಲುತ್ತಾನೆ; ನಾನು ಇನ್ನು ಮುಂದೆಯೂ ನಿನ್ನ ಸಂಗಡ ಇರುತ್ತೇನೆ.
  • (ತರ ಭಾವದ ಗುಣವಾಚಕಗಳ ಜತೆಯಲ್ಲಿ) ಇನ್ನೂ; ಮತ್ತೂ: a yet more difficult task ಇನ್ನೂ ಕಷ್ಟತರವಾದ ಕೆಲಸ.
  • ಉಳಿದಿರುವ ಕಾಲದಲ್ಲಿ; ಎಲ್ಲವೂ ಮುಗಿಯುವುದರ ಒಳಗೆ; ಅಷ್ಟರೊಳಗೆ: I will do it yet ಅಷ್ಟರಲ್ಲಿ ನಾನು ಅದನ್ನು ಮಾಡುತ್ತೇನೆ.
  • ಆದಾಗ್ಯೂ; ಅದೇನೇ ಇರಲಿ: it is strange, and yet it is trueಅದು ವಿಚಿತ್ರ, ಆದಾಗ್ಯೂ, ಅದು ಸತ್ಯ.

  • yet
    ಭಾವಸೂಚಕ ಅವ್ಯಯ
    ಆದರೂ; ಆದಾಗ್ಯೂ: the work is done, yet what is the use of it all? ಕೆಲಸ ಮುಗಿದಿದೆ ನಿಜ, ಆದಾಗ್ಯೂ ಅದೆಲ್ಲದರಿಂದ ಏನು ತಾನೆ ಪ್ರಯೋಜನ? it is good, yet it could be improved ಅದು ಚೆನ್ನಾಗಿದೆ, ಆದರೆ ಅದನ್ನು ಇನ್ನೂ ಉತ್ತಮಪಡಿಸಲು ಸಾಧ್ಯವಿದೆ.

    yeti
    ನಾಮವಾಚಕ
    = Abominable Snowman.

    yew
    ನಾಮವಾಚಕ
  • ‘ಯೂ’ ಮರ; ಚರ್ಚಿನ ಶ್ಮಶಾನದಲ್ಲಿ ಬೆಳೆಸುವ, ಕೆಂಪುತಿರುಳಿನ ಸೀತಾಫಲದಂಥ ಹಣ್ಣು ಬಿಡುವ, ಟ್ಯಾಕ್ಸಸ್‍ ಕುಲದ ಒಂದು ನಿತ್ಯಹಸುರು ಶಂಕುಮರ.
  • (ಹಿಂದೆ ಬಿಲ್ಲುಗಳನ್ನು ಮಾಡಲು ಬಳಸುತ್ತಿದ್ದ, ಈಗಲೂ ಕಪಾಟು ಮೊದಲಾದವನ್ನು ತಯಾರಿಸಲು ಬಳಸುವ) ‘ಯೂ’ ಮರದ ಚೌಬೀನೆ, ದಾರು.

  • Yggdrasil
    ನಾಮವಾಚಕ
    (ಸ್ಕಾಂಡಿನೇವಿಯನ್‍ ಪುರಾಣ) ವಿಶ್ವವೃಕ್ಷ; ಸ್ವರ್ಗ, ಮರ್ತ್ಯ, ಪಾತಾಳ(ನರಕ)ಗಳನ್ನು ತನ್ನ ಬೇರು ರೆಂಬೆಗಳಿಂದ ವ್ಯಾಪಿಸಿ ಕೂಡಿಸಿರುವ, ಆಷ್‍ ಮರ.


    logo