logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

yeah
ಕ್ರಿಯಾವಿಶೇಷಣ ಪದಗುಚ್ಛ
(ಆಡುಮಾತು) ಹೌದು. oh yeah? ಓಹೋ, ಹೌದೇನು? (‘ಹಾಗಿರಲಿಕ್ಕಿಲ್ಲ’ ಎಂದು ಸೂಚಿಸುವಲ್ಲಿ).

yean
ಅಕರ್ಮಕ ಕ್ರಿಯಾಪದ
(ಪ್ರಾಚೀನ ಪ್ರಯೋಗ) (ಕುರಿಯ ಯಾ ಆಡಿನ ವಿಷಯದಲ್ಲಿ) ಈನು; ಮರಿ ಹಾಕು (ಅಕರ್ಮಕ ಕ್ರಿಯಾಪದ ಸಹ).

yeanling
ನಾಮವಾಚಕ
(ಪ್ರಾಚೀನ ಪ್ರಯೋಗ) ಕುರಿಮರಿ; ಆಡಿನ ಮರಿ.

year
ನಾಮವಾಚಕ ಪದಗುಚ್ಛ
  • ವರ್ಷ; (ಸಂ)ವತ್ಸರ; ಅಬ್ದ:
    1. ಸೌರ(ಮಾನ)ವರ್ಷ; ವಿಷುವದ್ವರ್ಷ; ಭೂಮಿ ಸೂರ್ಯನ ಸುತ್ತಲೂ ಒಮ್ಮೆ ಸುತ್ತಿಬರಲು ತೆಗೆದುಕೊಳ್ಳುವ 365 ದಿನ, 5 ಘಂಟೆ, 48 ನಿಮಿಷ, 46 ಸೆಕೆಂಡುಗಳ ಅವಧಿ: (astronomical year, equinoctial year, natural year, solar year, tropical year ಎಂದೂ ಪ್ರಯೋಗ)
    2. ವ್ಯಾವಹಾರಿಕ ವರ್ಷ; ಜನವರಿ 1ರಿಂದ ಡಿಸೆಂಬರ್‍ 31ರವರೆಗಿನ 365 ದಿನಗಳ ಅವಧಿ (calendar year, civil year, common year ಎಂದೂ ಪ್ರಯೋಗ) ಯಾ 366 ದಿನಗಳ ಅವಧಿ (leap year ಎಂದೂ ಪ್ರಯೋಗ).
    3. ಯಾವುದೇ ತಾರೀಖಿನಿಂದ ಪ್ರಾರಂಭವಾಗಿ 365 ದಿನಗಳು ಪೂರೈಸುವ ಅವಧಿ: four years ago ನಾಲ್ಕು ವರ್ಷಗಳ ಹಿಂದೆ.
    4. ಒಂದು ನಿರ್ದಿಷ್ಟ ಕ್ರಿಯೆ, ಕಾರ್ಯಕ್ರಮ ಯಾ ಚಟುವಟಿಕೆಗಳಿಗಾಗಿ ನಿಗದಿಪಡಿಸಿರುವ ಅವಧಿ: school year ಶಾಲಾವರ್ಷ; ಶೈಕ್ಷಣಿಕ ವರ್ಷ; ಶಾಲೆಯಲ್ಲಿ ಪಾಠಪ್ರವಚನ ನಡೆಯುವ ಅವಧಿ. tax year ತೆರಿಗೆ ವರ್ಷ. financial year ಆರ್ಥಿಕವರ್ಷ; ವಿತ್ತವರ್ಷ; ಹಣಕಾಸಿನ ವರ್ಷ; ತೆರಿಗೆ, ಲೆಕ್ಕಾಚಾರ, ಮೊದಲಾದವುಗಳಿಗಾಗಿ ಬ್ರಿಟನ್ನಿನಲ್ಲಿ ಏಪ್ರಿಲ್‍ 1ರಿಂದ ಯಾ ಅಮೆರಿಕದಲ್ಲಿ ಜನವರಿ 1ರಿಂದ ಯಾ ಜುಲೈ 1ರಿಂದ ಪ್ರಾರಂಭವಾಗುವ ವರ್ಷ.
  • (ಬಹುವಚನದಲ್ಲಿ) ವಯಸ್ಸು ಯಾ ಜೀವಿತ ಕಾಲ: young for his years ಅವನಿಗೆ ಆಗಿರುವ ವಯಸ್ಸಿಗಿಂತಲೂ ಚಿಕ್ಕವನಾಗಿ ಕಾಣುತ್ತಾನೆ.
  • (ಸಾಮಾನ್ಯವಾಗಿ ಬಹುವಚನದಲ್ಲಿ) (ಆಡುಮಾತು) ಬಹಳ ವರ್ಷ(ಗಳು); ಅತಿ ದೀರ್ಘ ಕಾಲ: it took years to get served ಇದು ಉಪಯೋಗಕ್ಕೆ ಬರಬೇಕಾದರೆ ದೀರ್ಘಕಾಲ ತೆಗೆದುಕೊಂಡಿತು.
  • ಒಂದೇ ಶೈಕ್ಷಣಿಕ ವರ್ಷದಲ್ಲಿ ಶಾಲಾಕಾಲೇಜುಗಳನ್ನು ಸೇರುವ ವಿದ್ಯಾರ್ಥಿಗಳ ತಂಡ, ವರ್ಗ.

  • year-long
    ಗುಣವಾಚಕ
    ವರ್ಷಾದ್ಯಂತದ; ವರ್ಷಗಟ್ಟಳೆಯ; ವರ್ಷವಿಡೀ, ಪೂರ್ತಿ ಒಂದು ವರ್ಷ – ಬಾಳುವ.

    year-round
    ಗುಣವಾಚಕ
    ವರ್ಷವಿಡೀ ಇರುವ; ವರ್ಷವೆಲ್ಲವೂ ಇರುವಂಥ; ವರ್ಷಾದ್ಯಂತದ.

    yearbook
    ನಾಮವಾಚಕ
    ವಾರ್ಷಿಕ ಪುಸ್ತಕ; ಒಂದು ವಿಷಯವಾಗಿ ಇತ್ತೀಚಿನ ಸಂಗತಿಗಳನ್ನೆಲ್ಲ ಒಳಗೊಂಡ, ಪ್ರತಿವರ್ಷ ಯಾ ವರ್ಷಕ್ಕೊಮ್ಮೆ ಪ್ರಕಟವಾಗುವ ಪುಸ್ತಕ.

    yearling
    ನಾಮವಾಚಕ
  • ಒಂದು ವರ್ಷಕ್ಕಿಂತ ಹೆಚ್ಚು ಮತ್ತು ಎರಡು ವರ್ಷಕ್ಕಿಂತ ಕಡಮೆ ವಯಸ್ಸಿನ ಪ್ರಾಣಿ.
  • ಹುಟ್ಟಿದ ವರ್ಷ ಕಳೆದು ತರುವಾಯದ ವ್ಯಾವಹಾರಿಕ ವರ್ಷದಲ್ಲಿರುವ ಜೂಜುಕುದುರೆ ಮರಿ.

  • yearling
    ಗುಣವಾಚಕ
  • ಒಂದು ವರ್ಷದ; ಒಂದು ವರ್ಷ ಪ್ರಾಯದ: yearling heifer (ಹಸುವಿನ) ಒಂದು ವರ್ಷದ ಹೆಣ್ಣು ಕರು. yearling bride (ಮದುವೆ ನಿಶ್ಚಯವಾದ ಅನಂತರ) ಒಂದು ವರ್ಷ ವಧೂದೆಸೆಯಲ್ಲಿರುವವಳು.
  • ಒಂದು ವರ್ಷದ ನಂತರ ಅವಧಿ ಮುಗಿದು ಹೋಗುವ; ಒಂದು ವರ್ಷ ಮಾತ್ರ ಸಿಂಧುವಾಗಿರುವ: yearling bonds ಒಂದು ವರ್ಷ ಅವಧಿಗೆ ಸೀಮಿತವಾದ ಸಾಲಪತ್ರಗಳು.

  • yearly
    ಗುಣವಾಚಕ
  • ವಾರ್ಷಿಕ; ವರ್ಷಕ್ಕೊಮ್ಮೆ – ಮಾಡುವ, ಬರುವ, ಆಗುವ, ಉತ್ಪಾದಿಸುವ.
  • ಒಂದು ವರ್ಷದ; ಒಂದು ವರ್ಷ ಕಾಲದ; ಒಂದು ವರ್ಷ ಬಾಳಿಕೆ ಬರುವ.


  • logo