logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unaccomplished
ಗುಣವಾಚಕ
  • ಸಾಧಿಸಿಲ್ಲದ; ಪೂರೈಸಿಲ್ಲದ.
  • ಅಶಿಕ್ಷಿತ; ಅಕುಶಲ; ಸಂಸ್ಕೃತಿ, ಸುಶಿಕ್ಷಣ, ಕುಶಲತೆಗಳು ಇಲ್ಲದ.

  • unaccountability
    ನಾಮವಾಚಕ
  • ಕಾರಣ ಹೇಳಲಾಗದ, ಕಾರಣ ತಿಳಿಯದ – ಸ್ಥಿತಿ.
  • ಮುನ್ನೂಹಿಸಲಾಗದ ಯಾ ವಿಚಿತ್ರನಡೆವಳಿಕೆ.
  • ಬೇಜವಾಬ್ದಾರಿ(ಯಿಂದಿರುವುದು).

  • unaccountable
    ಗುಣವಾಚಕ
  • ಕಾರಣ – ಹೇಳಲಾಗದ, ತಿಳಿಯದ; ವಿವರಿಸಲಾಗದ.
  • ಮುನ್ನೂಹಿಸಲಾಗದ ಯಾ ವಿಚಿತ್ರ ನಡತೆಯ.
  • ಜವಾಬ್ದಾರಿ, ಹೊಣೆಗಾರಿಕೆ – ಇಲ್ಲದ.

  • unaccountableness
    = unaccountability.

    unaccountably
    ಕ್ರಿಯಾವಿಶೇಷಣ
  • ಕಾರಣ ಹೇಳಲಾಗದಂತೆ; ಕಾರಣ ತಿಳಿಯದ ರೀತಿಯಲ್ಲಿ.
  • ವಿವರಿಸಲಾಗದೆ.
  • ಮುನ್ನೂಹಿಸಲಾಗದಂತೆ ಯಾ ವಿಚಿತ್ರವಾಗಿ.
  • ಜವಾಬ್ದಾರಿ ಯಿಲ್ಲದ ಹಾಗೆ; ಹೊಣೆಗಾರಿಕೆ ಇಲ್ಲದ ರೀತಿಯಲ್ಲಿ.

  • unaccounted
    ಗುಣವಾಚಕ ಪದಗುಚ್ಛ
    unaccounted for ವಿವರಿಸದೆ ಹೋದ: four planes came back but two are unaccounted for ನಾಲ್ಕು ವಿಮಾನಗಳು ಹಿಂತಿರುಗಿದವು, ಆದರೆ ಎರಡು ಲೆಕ್ಕಕ್ಕೆ ಸಿಕ್ಕದೆ ಹೋದವು.
  • ಲೆಕ್ಕ ಕೊಡದ; ಲೆಕ್ಕಕ್ಕೆ ಸಿಗದ;
  • (ಕಾರಣ) ವಿವರಿಸದ.

  • unaccustomed
    ಗುಣವಾಚಕ
  • ಅಭ್ಯಾಸವಿಲ್ಲದ; ಬಳಕೆಯಿಲ್ಲದ; ರೂಢಿಯಿಲ್ಲದ; ವಾಡಿಕೆಯಿಲ್ಲದ: as I am unaccustomed to speaking in public ನನಗೆ ಬಹಿರಂಗವಾಗಿ ಮಾತನಾಡುವ ಅಭ್ಯಾಸವಿಲ್ಲದ್ದರಿಂದ.
  • ವಾಡಿಕೆಯಲ್ಲದ; ರೂಢಿಯಲ್ಲದ; ವಿಚಿತ್ರವಾದ; ವಿಲಕ್ಷಣವಾದ: his unaccustomed silence ಅವನ ವಿಲಕ್ಷಣವಾದ ಮೌನ.

  • unaccustomedly
    ಕ್ರಿಯಾವಿಶೇಷಣ
  • ಅಭ್ಯಾಸವಿಲ್ಲದೆ; ರೂಢಿಯಿಲ್ಲದೆ.
  • ವಾಡಿಕೆಯಲ್ಲದೆ; ವಿಚಿತ್ರವಾಗಿ; ವಿಲಕ್ಷಣವಾಗಿ.

  • unacknowledged
    ಗುಣವಾಚಕ
    ಒಪ್ಪಿಕೊಳ್ಳದ; ಅನಂಗೀಕೃತ.

    unacquainted
    ಗುಣವಾಚಕ
  • (ವ್ಯಕ್ತಿ ಮೊದಲಾದವರೊಂದಿಗೆ) ಅಪರಿಚಿತ; ಪರಿಚಯವಿಲ್ಲದ.
  • ಅಭ್ಯಾಸವಿಲ್ಲದ; ವಾಡಿಕೆಯಿಲ್ಲದ; ರೂಢಿಯಿಲ್ಲದ.


  • logo