logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ultra-high
ಗುಣವಾಚಕ
ಅತ್ಯುನ್ನತ; (ಆವರ್ತದ ವಿಷಯದಲ್ಲಿ) ೩೦೦ ಮೆಗಹರ್ಟ್‍ನಿಂದ ೩೦೦೦ ಮೆಗಹರ್ಟ್‍ ವರೆಗಿನ.

ultracentrifuge
ನಾಮವಾಚಕ
ಅಧಿಕೇಂದ್ರಾಪವಾಹಿ; ಅತಿ ಚಿಕ್ಕ ಕಣಗಳು ಮತ್ತು ಬೃಹದಣುಗಳು ಕಲಿಲದ್ರವ ಒಂದರಲ್ಲಿ ಗಸಿಯಾಗಿ ಕೆಳಕ್ಕಿಳಿಯುವ ದರಗಳ ವ್ಯತ್ಯಾಸವನ್ನು ಉಪಯೋಗಿಸಿ ಕೊಂಡು ಅವುಗಳನ್ನು ಪ್ರತ್ಯೇಕಿಸಲು ಬಳಸುವ, ಅತಿವೇಗದ ಕೇಂದ್ರಾಪವಾಹಿ ಯಂತ್ರ.

ultraism
ನಾಮವಾಚಕ
ಉಗ್ರವಾದ; ಉಗ್ರಪಂಥವಾದ.

ultraist
ನಾಮವಾಚಕ
(ರಾಜಕೀಯ, ಧರ್ಮ, ಮೊದಲಾದವುಗಳಲ್ಲಿ) ಉಗ್ರವಾದಿ; ಉಗ್ರಗಾಮಿ.

ultramarine
ಗುಣವಾಚಕ
  • (ಪ್ರಾಚೀನ ಪ್ರಯೋಗ) ಸಮುದ್ರದಾಚೆಯಿರುವ; ಸಾಗರೋತ್ತರದ.
  • ಉಜ್ಜ್ವಲ ನೀಲವರ್ಣದ.

  • ultramarine
    ನಾಮವಾಚಕ
  • ನೀಲಮಣಿಯಿಂದ ತಯಾರಿಸಿದ ಉಜ್ಜ್ವಲ ನೀಲವರ್ಣದ್ರವ್ಯ.
  • ಪುಡಿಮಾಡಿ ಕಾಯಿಸಿದ ಜೇಡಿಮಣ್ಣು, ಸೋಡಿಯಂ ಕಾರ್ಬೊನೇಟ್‍, ಗಂಧಕ ಮತ್ತು ರಾಳದಿಂದ ತಯಾರಿಸಿದ, ಅದೇ ರೀತಿಯ ವರ್ಣದ್ರವ್ಯ.
  • ಉಜ್ಜ್ವಲ ನೀಲವರ್ಣ.

  • ultramicroscope
    ನಾಮವಾಚಕ
    ಅತಿಸೂಕ್ಷ ದರ್ಶಕ; ಸಾಮಾನ್ಯ ಸೂಕ್ಷ ದರ್ಶಕದ ಮೂಲಕ ನೋಡಲಾಗದ ಅತಿ ಸಣ್ಣ ಕಣಗಳನ್ನು, ಅವು ಚೆದುರಿಸುವ ಬೆಳಕಿನ ಮೂಲಕ ತೋರಿಸಬಲ್ಲ ಅಸಾಮಾನ್ಯ ಸೂಕ್ಷ ದರ್ಶಕ.

    ultramicroscopic
    ಗುಣವಾಚಕ
  • ಅತಿಸೂಕ್ಷ ದರ್ಶಕೀಯ; ಅತಿಸೂಕ್ಷ ದರ್ಶಕದ ಮೂಲಕ ಕಾಣಿಸುವ ಯಾ ಕಾಣಿಸಬಹುದಾದ.
  • ಅತಿಸೂಕ್ಷ ದರ್ಶಕದ ಯಾ ಅದಕ್ಕೆ ಸಂಬಂಧಿಸಿದ.

  • ultramontane
    ಗುಣವಾಚಕ
  • ಆಲ್ಪ್ಸ್‍ ಪರ್ವತದ ದಕ್ಷಿಣಕ್ಕೆ ಯಾ ಪರ್ವತದಾಚೆ ಇರುವ.
  • ಇಟಲಿಯ.
  • (ನಂಬಿಕೆ, ಶಿಸ್ತು, ಮೊದಲಾದವುಗಳಲ್ಲಿ) ಪೋಪ್‍ ಗುರುಗಳ ಪರಮಾಧಿಕಾರಕ್ಕೆ ಅನುಕೂಲವಾದ; ಅದನ್ನು ಸಮರ್ಥಿಸುವ.
  • (ಮಾತನಾಡುವವನ ದೃಷ್ಟಿಯಿಂದ) ಆಲ್ಪ್ಸ್‍ ಪರ್ವತದಾಚೆ ಇರುವ.

  • ultramontane
    ನಾಮವಾಚಕ
  • ಆಲ್ಪ್ಸ್‍ ಪರ್ವತದ ದಕ್ಷಿಣದಲ್ಲಿ ಯಾ ಆಚೆ ಪಕ್ಕದಲ್ಲಿ ವಾಸಿಸುವವನು.
  • ಪೋಪ್‍ ಗುರುವಿಗೆ ಪರಮಾಧಿಕಾರವಿರಬೇಕೆಂದು ವಾದಿಸುವವನು, ಸಮರ್ಥಿಸುವವನು.


  • logo