logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

table-money
ನಾಮವಾಚಕ
  • (ಸೈನ್ಯ) ಆತಿಥ್ಯದ ವೆಚ್ಚ; ಸೈನ್ಯಸೇವೆ ಮೊದಲಾದವುಗಳಲ್ಲಿ ಉನ್ನತ ಅಧಿಕಾರಿಗಳು ಅಧಿಕೃತವಾಗಿ ನಡೆಸುವ ಆತಿಥ್ಯದ ವೆಚ್ಚಕ್ಕಾಗಿ ಅವರಿಗೆ ಕೊಡುವ ಭತ್ಯೆ.
  • ಊಟದ ಮನೆಯ ರುಸುಮು ಯಾ ತೆರ; ಕ್ಲಬ್ಬಿನ ಸದಸ್ಯರು ಊಟದ ಮನೆ ವೆಚ್ಚಕ್ಕಾಗಿ ಕೊಡುವ ಹೆಚ್ಚಿಗೆ ರುಸುಮು.

  • table-rapping
    ನಾಮವಾಚಕ
    (ಭೂತಚೇಷ್ಟೆ ಮೊದಲಾದವುಗಳ ವಿಷಯದಲ್ಲಿ) ಮೇಜು ಕುಟ್ಟುವ, ಬಡಿಯುವ ಅಲೌಕಿಕ ಘಟನೆ.

    table-tomb
    ನಾಮವಾಚಕ
    (ರೋಮನ್‍ ಸಮಾಧಿಸುರಂಗಗಳಲ್ಲಿ) ಮೇಜು ಗೋರಿ; ಮೇಲುಭಾಗ ಚಪ್ಪಟೆಯಾಗಿರುವ, ಪೆಟ್ಟಿಗೆಯಂಥ ಗೋರಿ.

    table-turning
    ನಾಮವಾಚಕ
    (ಭೂತಚೇಷ್ಟೆ, ಪ್ರೇತವ್ಯವಹಾರ, ಮೊದಲಾದವುಗಳ ವಿಷಯದಲ್ಲಿ) ಮೇಜು ತಿರುಗಿಸುವ ಅಲೌಕಿಕ ಘಟನೆ.

    table-water
    ನಾಮವಾಚಕ
    ಊಟದ ನೀರು; ಊಟ ಮಾಡುವಾಗ ಕುಡಿಯಲು ಸೀಸೆಗಳಲ್ಲಿಟ್ಟ ಖನಿಜಜಲ.

    tableau
    ನಾಮವಾಚಕ
  • ಸ್ತಬ್ಧ ಚಿತ್ರ; ಮೂಕದೃಶ್ಯ; ಕಣ್ಣಿಗೆ ಕಟ್ಟುವಂಥ ದೃಶ್ಯ, ನಿರೂಪಣೆ, ಪ್ರದರ್ಶನ.
  • (ಇದ್ದಕ್ಕಿದ್ದಂತೆ ಉದ್ಭವಿಸುವ) ನಾಟಕೀಯ, ಪರಿಣಾಮಕಾರಿ–ಸನ್ನಿವೇಶ, ಸಂದರ್ಭ.
  • = tableau vivant.

  • tableau curtains
    ನಾಮವಾಚಕ
    (ರಂಗಮಂದಿರ) ಕೂಡುತೆರೆಗಳು; ಸರಿಸುವ ಪರದೆಗಳು; ಬೀಳುತೆರೆಗೆ ಬದಲಾಗಿ ಎರಡು ಕಡೆಯಿಂದಲೂ ಅಡ್ಡನಾಗಿ ಎಳೆದು ರಂಗದ ಮಧ್ಯಭಾಗದಲ್ಲಿ ಕೂಡಿಸುವ ಜೋಡಿ ತೆರೆ.

    tableau vivant
    ನಾಮವಾಚಕ
    (ನಾಟಕಶಾಲೆ) ಸ್ತಬ್ಧದೃಶ್ಯ; ನಿಶ್ಚಲದೃಶ್ಯ; ಒಂದು ದೃಶ್ಯವನ್ನು ಪ್ರದರ್ಶಿಸಲು ಏರ್ಪಡಿಸಿದ, ಮೌನವಾದ, ಚಲಿಸದ ಜನರ, ನಟರ ತಂಡ.

    tablecloth
    ನಾಮವಾಚಕ
    ಮೇಜು ಬಟ್ಟೆ; (ಮುಖ್ಯವಾಗಿ ಊಟದ) ಮೇಜಿನ ಮೇಲೆ ಹರಡುವ, ಬಿಳಿ ಯಾ ಬಣ್ಣದ ಬಟ್ಟೆ.

    tableful
    ನಾಮವಾಚಕ
    ಮೇಜು–ಭರ್ತಿ, ತುಂಬ; ಮೇಜು ತುಂಬಉವಷ್ಟು ಪ್ರಮಾಣ.


    logo